ಮಡಿಕೇರಿ, ಆ. 3: ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಗೊಬ್ಬರ ಹಗರಣ ಸಂಬಂಧ, ಆಡಳಿತ ಮಂಡಳಿಯು ಅಲ್ಲಿನ ಸಿಬ್ಬಂದಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಕ್ರಮಕ್ಕೆ ಕೋರಿ, ಅಪರಾಧ ಪ್ರಕರಣ ದಾಖಲಿಸಿ ರುವ ಕುರಿತು ತಿಳಿದು ಬಂದಿದೆ.ವಿಎಸ್‍ಎಸ್‍ಎನ್‍ನಲ್ಲಿ 14 ಸಾವಿರಕ್ಕೂ ಅಧಿಕ ಸಂಖ್ಯೆಯ ಗೊಬ್ಬರ ದಾಸ್ತಾನು ಮೂಟೆಗಳು ನಾಪತ್ತೆಯಾ ಗುವದರೊಂದಿಗೆ, ಈ ಕುರಿತು ಸಹಕಾರ ಇಲಾಖೆಯಿಂದ ಸೂಕ್ತ ತನಿಖೆಗೆ ಆಡಳಿತ ಮಂಡಳಿ ಕೋರಿತ್ತು. ಆ ಬೆನ್ನಲ್ಲೇ ವಿಎಸ್ ಎಸ್‍ಎನ್ ಕಾರ್ಯದರ್ಶಿ ಸಹಿತ ಇತರ ನಾಲ್ವರು ಸಿಬ್ಬಂದಿ ಹಗರಣದ ದಾಖಲೆಗಳನ್ನು ನಾಶಗೊಳಿಸಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಇನ್ನು ಒಂದೂವರೆ ತಿಂಗಳ ಹಿಂದೆಯೇ ಅಂದಾಜು ರೂ. ಒಂದು ಕೋಟಿ ಮೂವತ್ತು ಲಕ್ಷಕ್ಕೂ ಅಧಿಕ ಮೊತ್ತದ ಗೊಬ್ಬರ ದಾಸ್ತಾನು ನಾಪತ್ತೆ ಸಂಬಂಧ, ಸಹಕಾರ ಇಲಾಖೆಗೆ ದೂರು ನೀಡಿದ್ದರೂ ಇಲಾಖೆಯ ಮಂದಿ ಆಮೆಗತಿಯ ತನಿಖೆ ಯೊಂದಿಗೆ, ಆರೋಪ ಎದುರಿಸುತ್ತಿರ ುವವರನ್ನೇ ರಕ್ಷಿಸಲು ಮುಂದಾಗಿದ್ದಾರೆ ಎಂಬ ಅನುಮಾನವನ್ನು ಸಂಘದ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಎಸ್‍ಎಸ್‍ಎನ್‍ಗೆ ಕೋಟ್ಯಂತರ ರೂಪಾಯಿ ನಷ್ಟದೊಂದಿಗೆ, ಗೊಬ್ಬರ ಹಗರಣದಲ್ಲಿ ಶಾಮೀಲಾಗಿರುವ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸುವಂತೆ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ದೂರು ಸಲ್ಲಿಸಿರುವದಾಗಿ ಚೆಯ್ಯಂಡಾಣೆ ವಿಎಸ್‍ಎಸ್‍ಎನ್ ಮೂಲಗಳು ದೃಢಪಡಿಸಿವೆ.
ಉಪಾಧ್ಯಕ್ಷರಿಂದ ಸಭೆ : ಚೆಯ್ಯಂಡಾಣೆ ವಿಎಸ್‍ಎಸ್‍ಎನ್ ಹಗರಣವು ಬೆಳಕಿಗೆ ಬಂದಿರುವ ಬೆನ್ನಲ್ಲೇ ಸಂಬಂಧಿಸಿದ ಕಾರ್ಯದರ್ಶಿ ಸಹಿತ ಇತರ ಸಿಬ್ಬಂದಿ ದೈನಂದಿನ ಕೆಲಸಗಳಿಂದ ವಿಮುಖವಾಗಿ, ಸದಸ್ಯರುಗಳಿಗೆ ಸಾಲ ಸೌಲಭ್ಯ ಇತ್ಯಾದಿಗೆ ಅಸಹಕಾರ ತೋರುತ್ತಿದ್ದಾರೆ ಎಂದು ನಿರ್ದೇಶಕರುಗಳಾದ ಬಿ.ಎಂ. ಅಚ್ಚಯ್ಯ ರಾಜೇಶ್ ಹಾಗೂ ಇತರರು ಆರೋಪಿಸಿದ್ದಾರೆ. ಈ ದಿಸೆಯಲ್ಲಿ ತಾ. 2 ರಂದು ಉಪಾಧ್ಯಕ್ಷ ಸುಬ್ರಹ್ಮಣ್ಯ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತೆಂದು ಅವರು ತಿಳಿಸಿದ್ದಾರೆ.
ಉಪಾಧ್ಯಕ್ಷ ಸುಬ್ರಹ್ಮಣ್ಯ ಅವರು ಮತ್ತು ನಿರ್ದೇಶಕರು, ಅಧ್ಯಕ್ಷ ಮಾದಪ್ಪ ಅವರ ಅನುಮತಿಯೊಂದಿಗೆ ಸಭೆ ನಡೆಸಿದ ವೇಳೆ
(ಮೊದಲ ಪುಟದಿಂದ) ಕಾರ್ಯದರ್ಶಿ ಸಿ.ಎಂ. ಗೋಪಿ ಹಾಗೂ ಸಿಬ್ಬಂದಿ ಗೈರು ಹಾಜರಾಗಿದ್ದಲ್ಲದೆ, ಸಭಾ ನಡಾವಳಿ ಪುಸ್ತಕ ನೀಡಲಿಲ್ಲವೆಂದು ಅವರು ದೂರಿದ್ದಾರೆ. ಅಲ್ಲದೆ ಈ ಹಿಂದೆಯೇ 1964ರ ಸಹಕಾರ ಕಾಯ್ದೆಯಡಿ ಇಲಾಖೆಯ ತನಿಖೆಗೆ ಕೋರಿದ್ದರೂ, ಸಂಬಂಧಿಸಿದವರು ತುರ್ತಾಗಿ ಸ್ಪಂದಿಸದೆ, ಅವ್ಯವಹಾರ ನಿರತ ಸಿಬ್ಬಂದಿ ಮತ್ತೆ ದಾಖಲೆಗಳನ್ನು ತಿದ್ದುತ್ತಿರುವದು ಹಾಗೂ ನಾಶಗೊಳಿಸಲು ಯತ್ನಿಸುತ್ತಿರುವದು ನೋವುಂಟು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ಯಾಂಕಿಗೆ ಹಣ ಜಮೆ : ‘ಶಕ್ತಿ’ ಚೆಯ್ಯಂಡಾಣೆ ವಿಎಸ್‍ಎಸ್‍ಎನ್ ಹಗರಣದ ಬಗ್ಗೆ ಬೆಳಕು ಚೆಲ್ಲಿದ್ದ ಬೆನ್ನಲ್ಲೇ ಸಂಘದ ಖಾತೆಗೆ ರೂ. 56 ಸಾವಿರ ನಗದು ಜಮೆಗೊಂಡಿದ್ದು, ಈ ಹಣಕ್ಕೆ ಸೂಕ್ತ ಕಾರಣ ನೀಡದ ಕಾರ್ಯದರ್ಶಿ, ಸಿಬ್ಬಂದಿಯೊಬ್ಬರÀ ಹೆಸರಿನಲ್ಲಿ ಖಾತೆಗೆ ಪಾವತಿಸಿರುವದು ಹಲವು ಸಂಶಯಗಳಿಗೆ ಎಡೆಮಾಡಿದೆ.
ಬಾರದ ಗೊಬ್ಬರ ಲೆಕ್ಕ : ಇನ್ನೊಂದೆಡೆ ಕಳೆದ ಏಪ್ರಿಲ್‍ನಲ್ಲಿ ವಿಎಸ್‍ಎಸ್‍ಎನ್‍ಗೆ ಯಾವದೇ ಗೊಬ್ಬರ ದಾಸ್ತಾನು ಬಾರದಿದ್ದರೂ, ರೂ. 1.68 ಲಕ್ಷದ ದಾಸ್ತಾನು ತೋರಿಸಲಾಗಿದ್ದು, ಈ ಅಂಶವನ್ನು ಕೂಡ ತನಿಖೆಗೆ ಕೋರಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಒಟ್ಟಿನಲ್ಲಿ ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರದ ಆರೋಪವಿದ್ದರೂ, ಸಂಬಂಧಪಟ್ಟವರು ಲೆಕ್ಕ ತಪಾಸಣೆ ಮತ್ತು ತನಿಖೆ ಎರಡು ಕೈಗೊಳ್ಳದೆ ವಿಳಂಬ ತೋರಿರುವದು ಆಡಳಿತ ಮಂಡಳಿಗೆ ಮುಜುಗರ ಉಂಟುಮಾಡಿದೆಯಲ್ಲದೆ, ಮುಂದಿನ ತಿಂಗಳು ಮಹಾಸಭೆ ನಡೆಸಲು ಸಮಸ್ಯೆ ಎದುರಾಗಿದೆ ಎಂದು ನೊಂದ ನಿರ್ದೇಶಕರು ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ನಡುವೆ ಯಾರೊಬ್ಬರೂ ಸರಿಯಾಗಿ ಕಚೇರಿ ಕೆಲಸಕ್ಕೆ ಬರುತ್ತಿಲ್ಲವೆಂದೂ, ಓರ್ವ ಸಿಬ್ಬಂದಿ ಅನಾರೋಗ್ಯ ನೆಪ ಹೇಳಿ ಅನಿರ್ದಿಷ್ಟ ಗೈರು