ಮಡಿಕೇರಿ, ಆ. 2: ಬಡತನ ರೇಖೆಗಿಂತ ಕೆಳಗಿರುವ ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಅವಶ್ಯಕತೆಗೆ ಅನುಸಾರವಾಗಿ ಕನ್ನಡಕ, ಅಡ್ಜಸ್ಟಬಲ್ ವಾಕಿಂಗ್ ಸ್ಟಿಕ್/ಟ್ರೈಪಾಡ್, ಶ್ರವಣ ಸಾಧನ, ವಾಕರ್, ಕಮೋಡ್ ನೀಡುವ ಯೋಜನೆಯ ಆದೇಶವನ್ನು 2017ರ ಮೇ 9 ರಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ಹಿರಿಯ ನಾಗರಿಕರು ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಇಲಾಖಾ ವೆಬ್‍ಸೈಟ್ ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಅಥವಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ ಈ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಬಿಪಿಎಲ್ ಕಾರ್ಡು ಅಥವಾ 11,500 ರೂ.ಗಳ ಒಳಗಿನ ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, 10 ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಕುರಿತು ವಾಸ ದೃಢೀಕರಣ ಪತ್ರ (ತಹಶೀಲ್ದಾರರಿಂದ) ಹಿರಿಯ ನಾಗರಿಕರಿಗೆ ಅಗತ್ಯವಾದ ಸಾಧನ ಸಲಕರಣೆ ಬೇಕು ಎಂಬುದರ ಬಗ್ಗೆ ಸರ್ಕಾರಿ, ಖಾಸಗಿ ವೈದ್ಯರಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಮೂಲ ಅರ್ಹತಾ ಪ್ರಮಾಣ ಪತ್ರ, 2 ಫೋಟೋಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ: 08272-222830 ನ್ನು ಸಂಪರ್ಕಿಸಬಹುದು.