ಮಡಿಕೇರಿ, ಆ. 3: ಇಲ್ಲಿಗೆ ಸಮೀಪದ ಕ್ಯಾಪಿಟಲ್ ವಿಲೇಜ್‍ನಲ್ಲಿ ಸಿಎನ್‍ಸಿ ವತಿಯಿಂದ ಸಾಂಪ್ರದಾಯಿಕ ಕಕ್ಕಡ-18 ಆಚರಣೆಯೊಂದಿಗೆ ನಾಟಿ ಕಾರ್ಯ ಹಾಗೂ ಸಹಭೋಜನ ಏರ್ಪಡಿಸಲಾಯಿತು.ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ಎನ್.ಯು ನಾಚಪ್ಪ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕೆಂದು ಸಿ.ಎನ್.ಸಿ.ಯ ನಿರಂತರ ಒತ್ತಡ, ಹೋರಾಟ ಮತ್ತು ಅಭಿಲಾಷೆಯ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಖಾಸಗಿ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸಿ ಅಲ್ಪಸಂಖ್ಯಾತ ಕೊಡವರ ರಕ್ಷಣೆಯ ಕುರಿತು ಅನಾವರಣ ಮಾಡಿದಕ್ಕಾಗಿ ಶ್ಲಾಘಿಸಿದರು.

ಈ ಕೋರಿಕೆಯಂತೆ ಕೊಡವ ಭಾಷೆಯನ್ನು 8ನೇ ಶೆಡ್ಯೂಲ್‍ಗೆ ಸೇರಿಸಲು ಪಾರ್ಲಿಮೆಂಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ ಕೇಂದ್ರ ಗೃಹ ಮಂತ್ರಿ ಕಿರಣ್ ರಿಜು ಅವರಿಗೂ ಅಭಿನಂದನೆ ಸಲ್ಲಿಸಿದರು. ಸಿ.ಎನ್.ಸಿ.ಯ ಹೋರಾಟದಿಂದ ಮುನ್ನೆಲೆಗೆ ಬಂದ ಕೊಡವ ಬುಡಕಟ್ಟು ಕುಲದ ಸ್ಥಾನ ಮಾನ ಸಂಬಂಧ ಅಧ್ಯಯನವನ್ನು ಪುನರಾರಂಭಿಸಬೇಕೆಂದು ಎರಡು ಬಾರಿ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಮೂಲಕ, ವಿಷಯ ಪ್ರಸ್ತಾಪಿಸಿದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ಕುರಿತಾಗಿಯೂ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಪುಲ್ಲೆರ ಕಾಳಪ್ಪ, ಬಾಚರಣಿಯಂಡ ಚಿಪ್ಪಣ್ಣ, ಜೆ.ಎನ್.ಯು ಸಂಶೋಧಕಿ ಶ್ರೀಮತಿ ಜ್ಯೋತಿ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಣಿ, ಐತಿಚಂಡ ಅರುಣ, ಅಪ್ಪಚ್ಚಿರ ರೀನ, ಬಾಚಮಂಡ ಕಸ್ತೂರಿ, ಪುಲ್ಲೆರ ಸ್ವಾತಿ, ಪುಳ್ಳಂಗಡ ನಟೇಶ್, ಜಮ್ಮಡ ಮೋಹನ್, ಅಜ್ಜಿಕುಟ್ಟಿರ ಲೋಕೇಶ್, ಮುಕ್ಕಾಟಿರ ಪ್ರೇಮ್, ಬಾಚಮಂಡ ಬೆಲ್ಲು, ಬಡುವಂಡ ಅರುಣ, ಕಿರಿಯಮಾಡ ಶರೀನ್, ಮದ್ರಿರ ಕರುಂಬಯ್ಯ, ಅಪ್ಪೆಂಗಡ ಮಾಲೆ, ಅಪ್ಪಾರಂಡ ಪ್ರಸಾದ್, ಅರೆಯಡ ಗಿರೀಶ್, ಅರೆಯಡ ಸವಿತ, ಅಜ್ಜೇಟಿ ಶಂಭು, ಅಜ್ಜೇಟಿರ ರಾಣಿ, ಮಣವಟ್ಟಿರ ಜಗ್ಗು, ಚೀಯಕಪೂವಂಡ ಮನು, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್, ಪುಲ್ಲೆರ ಹರ್ಷ, ನಂದಿನೆರವಂಡ ವಿಜು, ಪುಲ್ಲೆರ ರವೀನ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ದಿನೇಶ್, ಕೆಚ್ಚೆಟಿ ಶಂಭು, ಐಲಪ್ಪಂಡ ಮಿಟ್ಟು, ಚಂಡಿರ ರಾಜ, ಮೊಣ್ಣಂಡ ಕಾರ್ಯಪ್ಪ, ಕೂಪದೀರ ಸಾಬು ಮುಂತಾದವರು ಭಾಗವಹಿಸಿದ್ದರು. ಬಾಚರಣಿಯಂಡ ಚಿಪ್ಪಣ್ಣ ಸ್ವಾಗತಿಸಿ, ಅಜ್ಜಿಕುಟ್ಟಿರ ಲೋಕೇಶ್ ವಂದಿಸಿದರು.