ಗೋಣಿಕೊಪ್ಪಲು, ಆ. 3: ಇಲ್ಲಿನ ವಾಹನ ಚಾಲಕ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯಂದು ಸೈಕ್ಲೋಥಾನ್ - 17 ಎಂಬ ಹೆಸರಿನಲ್ಲಿ ಸೈಕಲ್ ರೇಸ್ ನಡೆಯಲಿದೆ.

7 ವಿಭಾಗಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ. 10 ಹಾಗೂ 14 ವರ್ಷದೊಳಗಿನವರಿಗೆ 10 ಕಿಮೀ, 16 ವಯೋಮಿತಿಯವರಿಗೆ 30 ಕಿಮೀ, ಕೂರ್ಗ್ ಓಪನ್ ಆಲ್ ಹಾಗೂ ಓಪನ್ ಕ್ಲಾಸ್ ವಿಭಾಗಗಳಿಗೆ 40 ಕಿಮೀ, ಮಹಿಳಾ ವಿಭಾಗದಲ್ಲಿ 14 ವರ್ಷದೊಳಗಿನವರಿಗೆ 10 ಕಿಮೀ, ಮಹಿಳೆಯರ ಓಪನ್ ವಿಭಾಗದವರಿಗೆ 30 ಕಿಮೀ ಸೈಕಲ್ ರೇಸ್ ನಡೆಯಲಿದೆ.

ವಾಹನ ಚಾಲಕರ ನಿಲ್ದಾಣದಿಂದ ಸ್ಪರ್ಧೆ ಆರಂಭವಾಗಲಿದೆ. 4 ನೇ ವರ್ಷದ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ಭಾಗವಹಿಸುವವರು, ಅಂದು ಬೆಳಿಗ್ಗೆ 10 ಗಂಟೆಗೆ ಮುಂಚೆ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗೆ 9448158224, 9448465968 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.