ಚೆಟ್ಟಳ್ಳಿ, ಆ. 4: ಕರ್ನಾಟಕದ ಪ್ರಮುಖ ತೋಟದ ಬೆಳೆಯೊಂದಾದ ಕಾಫಿಬೆಳೆಯನ್ನು ಕೊಡಗಿನಲೀಗ ಪ್ರಮುಖ ಬೆಳೆಯಾಗಿ ಬೆಳೆಯ ಲಾಗುತಿದೆ. 1947ರಲ್ಲಿ ಚೆಟ್ಟಳ್ಳಿಯಲ್ಲಿ ಕಾಫಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸೂಕ್ತ ವೆಂದು ಗುರುತಿಸಿ ಕಾಫಿ ಉಪ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ರಾಪ್ಟ್ರೀಯ ಹಾಗೂ ಅಂತರಾಪ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಜಾಗದಲ್ಲಿ ಕೊಡಗಿನ ಕಾಫಿ ಮ್ಯೂಸಿಯಂ ಸ್ಥಾಪನೆಗೆ ಇದೇ ಸೂಕ್ತ ಸ್ಥಳವೆಂದು ಭಾರತೀಯ ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಹೇಳಿದ್ದಾರೆ.ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ 1946ರಲ್ಲಿ ಆಗಿನ ಮೈಸೂರು ಸರಕಾರವು ಕಾಫಿ ಪ್ರಯೋಗ ಶಾಲೆಯೊಂದನ್ನು ಸ್ಥಾಪಿಸಿತು. 1946ರಲ್ಲಿ ಈ ಪ್ರಯೋಗಶಾಲೆಯನ್ನು ಕಾಫಿ ಮಂಡಳಿ ವಹಿಸಿಕೊಂಡು ಕೇಂದ್ರ ಕಾಫಿ ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಿ
(ಮೊದಲ ಪುಟದಿಂದ) ಕಾಫಿ ಗಿಡದ ಪೋಷಣೆ, ತಳೀಕರಣ ಹಾಗೂ ರಕ್ಷಣೆ ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿತ್ತು.
ನಂತರ 1947ರಲ್ಲಿ ಕೊಡಗಿನ ಕೇಂದ್ರ ಸ್ಥಾನವಾದ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿರುವ ಚೆಟ್ಟಳಿಯಲ್ಲಿ ಕಾಫಿ ಸಂಶೋಧನೆಯ ಕೇಂದ್ರಕ್ಕೆ ಸೂಕ್ತ ಸ್ಥಳವೆಂದು ಗುರುತಿಸಿ ಕಾಫಿ ಸಂಶೋಧನೆಯ ಉಪಕೇಂದವನ್ನು ಸ್ಥಾಪಿಸಲಾಯಿತು. ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದಲ್ಲಿ ರೂಪಿಸಿರುವ ಕಾಫಿಬೆಳೆಗಳ ಹೊಸತಳಿಯ ವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ರೂಪಿಸುವ ಕಾರ್ಯವನ್ನು ಮಾಡಲು ಈ ಕೇಂದ್ರ ಕಾರ್ಯನಿರ್ವಹಿಸತೊಡಗಿತು.
ಸುಮಾರು 300 ಎಕರೆ (120ಹೆಕ್ಟೇರ್) ವಿಸ್ತೀರ್ಣ ಹೊಂದಿರುವ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ 77 ಹೆಕ್ಟೇರ್ ಅರೇಬಿಕಾ ಹಾಗೂ 31 ಹೆಕ್ಟೇರ್‍ನಲ್ಲಿ ರೋಬಸ್ಟಾ ಬೆಳೆಯನ್ನು ಬೆಳೆಯಲಾಗಿದೆ. ಪ್ರಪಂಚದ ಎಲಾ ್ಲಕಾಫಿ ತಳಿಗಳಿದ್ದು (ಜೀನ್ ಬ್ಯಾಂಕ್) ಇಲ್ಲಿ ತಳಿ ಅಭಿವೃದ್ಧಿ ಸಸ್ಯ ಶಾರೀರಿಕ ಕ್ರಿಯಾಶಾಸ್ತ್ರ, ಬೇಸಾಯ ಶಾಸ್ತ್ರ, ಮಣ್ಣು ವಿಜ್ಞಾನ ಮತ್ತು ಪರೀಕ್ಷಾ ವಿಭಾಗ, ರೋಗ ಹಾಗೂ ಕೀಟಶಾಸ್ತ್ರ ವಿಭಾಗ, ವಿವಿಧ ರೋಗಗಳ ಬಗ್ಗೆ ಸಂಶೋಧನೆ ಹಾಗೂ ಪರಿಹಾರ ವಿಭಾಗವಿದ್ದು ನಿತ್ಯವೂ ಸಂಶೋಧನೆಗಳು ನಡೆಯುತ್ತಿವೆ.
ಅಲ್ಲದೆ ವರ್ಷ ಪೂರ್ತಿ ಕೊಡಗಿನ ನಾನಾ ಕಡೆಗಳಲ್ಲಿ ಕಾಫಿಗಿಡಗಳಲ್ಲಿ ಕಂಡುಬರುವ ಕೀಟಗಳಗಳ ಬಗ್ಗೆ ರೋಗಗಳ ಬಗ್ಗೆ ಮಾಲೀಕರಿಗೆ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಕಾಫಿಯ ಗುಣ ಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕಾರ್ಯಗಾರಗಳನ್ನು ನುರಿತ ಕಾಫಿ ಸಂಶೋಧಕರಿಂದ ನೀಡಲಾಗುತ್ತಾ ಬರುತ್ತಿದೆ.
ಕೊಡಗಿನ ಕೆಲವೆಡೆ ಕಾಫಿ ಮಂಡಳಿಗಳು ಕಾರ್ಯನಿರ್ವಹಿಸುತಿದ್ದರೂ, ಕಾಫಿ ಸಂಶೋಧನಾ ಕೇಂದ್ರವಿರುವದು ಚೆಟ್ಟಳ್ಳಿಯಲ್ಲಿ ಮಾತ್ರ. ಇಲ್ಲಿ ಕಾಫಿ ಸಂಶೋಧನಾ ಕೇಂದ್ರಕ್ಕೆ ಬೃಹತ್ ಜಾಗ, ಕಟ್ಟಡ ವ್ಯವಸ್ಥೆ, ಕಾಫಿ ತೋಟಗಳಲ್ಲಿ ಬಳಸಲ್ಪಡುವ ಯಂತ್ರೋಪಕರಣಗಳು, ಉಳಿಯಲು ಗೆಸ್ಟ್ ಹೌಸ್, ನಾನಾ ಸಂಶೋಧನೆಯಲ್ಲಿ ಪರಿಣತಿ ಹೊಂದಿರುವ ಕಾಫಿ ಸಂಶೋದನಾ ಅಧಿಕಾರಿಗಳು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾಫಿ ಬೀಜದಿಂದ ಗಿಡವಾಗಿ ಬೆಳೆದು ಫಸಲು ನೀಡಿ ಕುಡಿಯಲು ಕಾಫಿ ತಯಾರಾಗುವವರೆಗಿನ ಪ್ರಾತ್ಯಕ್ಷಿಕೆಗಳೆಲ್ಲ ಚೆಟ್ಟಳ್ಳಿಯ ಕಾಫಿ ಸಂಶೋಧನೆಯ ಉಪಕೇಂದ್ರದಲ್ಲೆ ಇವೆ.
ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ ಮಡಿಕೇರಿಯಿಂದ 16 ಕಿ.ಮೀ. ಸುಂಟಿಕೊಪ್ಪದಿಂದ 14 ಕಿ.ಮೀ. ಸಿದ್ದಾಪುರದಿಂದ 14 ಕಿ.ಮೀ. ಅಂದರೆ ಕೇವಲ 20 ನಿಮಿಷಗಳ ಪ್ರಯಾಣ ಮಾತ್ರ.ಮಡಿಕೇರಿಯಿಂದ ದುಬಾರೆ ಹಾಗೂ ಇನ್ನಿತರ ಪ್ರದೇಶಗಳಿಗೆ ಅದೆಷ್ಟೋ ಪ್ರವಾಸಿಗರು ನಿತ್ಯವೂ ತೆರಳುತಿದ್ದು ಚೆಟ್ಟಳ್ಳಿಯಲ್ಲಿ ಕಾಫಿ ಮ್ಯೂಸಿಯಂ ಸ್ಥಾಪನೆಯಾದರೆ ಅದನ್ನು ನೋಡಿಯೇ ತೆರಳುತ್ತಾರೆ.
ಹಲವು ವರ್ಷಗಳ ಹಿಂದಿನಿಂದಲೇ ಚಿಕ್ಕಮಂಗಳೂರಿನಲ್ಲಿ ಸ್ಥಾಪನೆಗೊಂಡಂತಹ ಹೈಟೆಕ್ ಕಾಫಿ ಮ್ಯೂಸಿಯಂನಂತೆ ಕಾಫಿ ನಾಡಾz Àಕೊಡಗಿನಲ್ಲೂ ಕಾಫಿ ಮ್ಯೂಸಿಯಂ ಅನ್ನು ಸ್ಥಾಪಿಸಲು ಸೂಕ್ತ ಜಾಗವನ್ನು ಪರಿಶೀಲಿಸುತಿದ್ದಾಗ ಚೆಟ್ಟಳ್ಳಿಯ ಕಾಫಿ ಉಪ ಸಂಶೋಧವೇ ಸೂಕ್ತ ಎಂಬ ಬಗ್ಗೆ ಇಲಾಖೆಗೆ ಪ್ರಸ್ತಾವನೆ ನೀಡಲಾಗಿದೆಯೆಂದು ರೀನಾ ಪ್ರಕಾಶ್ ಹೇಳುತ್ತಾರೆ. -ಪುತ್ತರಿರಕರುಣ್ ಕಾಳಯ್ಯ