ಮಡಿಕೇರಿ, ಆ. 4: ಸರ್ಕಾರ ಉಳುವವನಿಗೆ ಭೂಮಿ ಹಾಗೂ ವಾಸಿಸಲು ಮನೆ ನಿವೇಶ ಹಾಗೂ ಹಕ್ಕು ಪತ್ರ ವಿತರಣೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಒತ್ತುವರಿ ಯಾಗಿರುವ ಭೂಮಿಯನ್ನು ತೆರವು ಗೊಳಿಸಿ ಉಳುವವನಿಗೆ ನೀಡುವದು ಅಲ್ಲದೆ ದಲಿತರು ಆದಿವಾಸಿಗಳು ಕೃಷಿ ಮಾಡಿಕೊಂಡು ಬಂದಿರುವ ಭೂಮಿಗೆ ಹಕ್ಕುಪತ್ರ ವಿತರಣೆ, ತೋಟದ ಲೈನ್‍ಮನೆಗಳಲ್ಲಿ ವಾಸವಾಗಿರುವವರಿಗೆ ಸ್ವಂತ ನಿವೇಶನ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಕುಶಾಲನಗರ ಹೋಬಳಿಯ 6ನೇ ಹೊಸಕೋಟೆ, ಅಂದಾನಿಪುರದಲ್ಲಿ ದಲಿತರಿಗಾಗಿ ಕಾಯ್ದಿರಿಸಿ ಸಾಗುವಳಿ ಮಾಡು ತ್ತಿರುವ ಜಾಗವನ್ನು ಪೊಲೀಸ್ ಇಲಾಖೆಗೆ ನೀಡಿರು ವದನ್ನು ರದ್ದುಗೊಳಿಸಿ 65 ಕುಟುಂಬಗಳಿಗೆ ಹಕ್ಕು ಪತ್ರ ಹಂಚಬೇಕು, ಕುಶಾಲನಗರ ಗುಂಡೂರಾವ್ ಬಡಾವಣೆ, 3ನೇ ವಾರ್ಡ್, ಆರ್ಜಿ, ತೆರ್ಮೆಕಾಡು, ನೇರುಗಳಲೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸರ್ಕಾರಿ ಜಾಗದಲ್ಲಿ ವಾಸವಾಗಿರುವ ದಲಿತರು, ಜೇನುಕುರುಬ, ಆದಿವಾಸಿಗಳಿಗೆ ನಿವೇಶನ ಹಕ್ಕು ಪತ್ರ ಹಂಚುವಂತೆ ಆಗ್ರಹಿಸಿ ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಸ್. ಆರ್. ಮಂಜುನಾಥ, ಕಾರ್ಯದರ್ಶಿ ಕೆ.ಟಿ. ಆನಂದ ಸೇರಿದಂತೆ ಪದಾಧಿಕಾರಿಗಳು ಇದ್ದರು.