ವೀರಾಜಪೇಟೆ, ಆ.4: ಕೊಡಗು ಕೇರಳ ಗಡಿ ಪ್ರದೇಶ ಪೆರುಂಬಾಡಿ ಕೆರೆಯ ಬಳಿ 15 ದಿನಗಳ ಹಿಂದೆ ರಾಜ್ಯ ಹೆದ್ದಾರಿ ರಸ್ತೆ ಕುಸಿತಗೊಂಡ ಹಿನ್ನಲೆಯಲ್ಲಿ ಬಸ್ಸು ಸಂಚಾರ ಬಂದ್ ಆಗಿದ್ದು ಸೇತುವೆ ಮೇಲಿನ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಇಂದು ಬೆಳಿಗ್ಗೆ 10 ಗಂಟೆಯಿಂದ ಬಸ್ಸುಗಳ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ.ಕಳೆದ ನಾಲ್ಕು ದಿನಗಳ ಹಿಂದೆ ಲಘು ವಾಹನಗಳ ಸಂಚಾರಕ್ಕೆ ಅಂತರ ರಾಜ್ಯ ರಸ್ತೆಯಲ್ಲಿ ಅವಕಾಶ ನೀಡಲಾಗಿತ್ತು.ಇದೀಗ ಬಸ್ಸುಗಳು ಸಂಚರಿಸುವಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದರಿಂದ ಉಸ್ತುವಾರಿ ಸಚಿವ ಸೀತಾರಾಂ ಆದೇಶದ ಮೇರೆಗೆ ಬಸ್ಸು ಸಂಚಾರ ಆರಂಭಗೊಂಡಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಸಚಿವರ ಆದೇಶದಂತೆ ರಸ್ತೆಯ ಗುಣಮಟ್ಟaವನ್ನು ಪರಿಶೀಲಿಸಿ ಸಚಿವರಿಗೆ ಮಾಹಿತಿ ನೀಡಿದ ನಂತರ ಭಾರೀ ಸರಕು ಸಾರಿಗೆ ವಾಹನಗಳು ಹೊರತುಪಡಿಸಿದಂತೆ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಿದರೆಂದೂ ಅಧಿಕಾರಿಗಳೊಂದಿಗೆ ಪೆರುಂಬಾಡಿಗೆ ತೆರಳಿ ರಸ್ತೆಯನ್ನು ಖುದ್ದು ವೀಕ್ಷಿಸಿದ ಕಾಂಗ್ರೆಸ್ ಪಕ್ಷದ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದಲ್ ಸಲಾಂ ತಿಳಿಸಿದರು.
ಕೇರಳದ ಕಣ್ಣಾನೂರು ಹಾಗೂ ಕೊಡಗಿನ ಅಂತರರಾಜ್ಯ ಸಂಚಾರದ ಪರವಾನಗಿ ಹೊಂದಿರುವ ಖಾಸಗಿ ಬಸ್ಸು ಮಾಲೀಕರು ವೀರಾಜಪೇಟೆ ಪೆರುಂಬಾಡಿ ಮಾರ್ಗವಾಗಿ ಬಸ್ಸುಗಳು ಸಂಚರಿಸಲು ಅನುವು ಮಾಡಿ ಕೊಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರು.
(ಮೊದಲ ಪುಟದಿಂದ) ಲೋಕೋಪಯೋಗಿ ಇಲಾಖೆಯ ಜಿಲ್ಲಾ ಅಭಿಯಂತರ ಪ್ರಭು ಅವರು ಈ ಹಿಂದೆಯೇ ಭಾರೀ ಸರಕು ಸಾಗಾಣಿಕೆಯ ಕಂಟೇನರ್‍ಗಳು, ಲಾರಿಗಳು ದುರಸ್ತಿಗೊಂಡ ರಸ್ತೆಯ ಮೇಲೆ ಸಂಚರಿಸದಂತೆ ನಿರ್ಬಂಧ ವಿಧಿಸಿದ್ದಾರೆ.
ಇಂದು ಬೆಳಿಗ್ಗೆ ಪೆರುಂಬಾಡಿ ನಿವಾಸಿಗಳು ಕೊಡಗಿನ ಲೈನು ಬಸ್ಸುಗಳನ್ನು ಈ ರಸ್ತೆಯಲ್ಲಿ ಬಿಡುವಂತೆ ಆಗ್ರಹಿಸಿದ್ದರು.
ಕಾಂಗ್ರೆಸ್‍ನ ಪಿ.ಎ. ಹನೀಫ್, ಆರ್.ಎಂ.ಸಿ ಸದಸ್ಯ ಮಾಳೇಟಿರ ಬೋಪಣ್ಣ, ಜಿ.ಜಿ.ಮೋಹನ್ ಮತ್ತಿತರರು ಹಾಜರಿದ್ದರು.
ಹೆದ್ದಾರಿ ಸೇತುವೆಯ ಎರಡು ಬದಿಗಳಲ್ಲಿ ಕಾವiಗಾರಿ ಮುಂದುವರೆದಿದೆ. ಬಸ್ಸುಗಳ ಸಂಚಾರದಿಂದ ಕಾಮಗಾರಿಗೆ ಯಾವುದೇ ಅಡಚಣೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಇಂದು ಬೆಳಿಗ್ಗೆ 10ಗಂಟೆಯಿಂದಲೇ ಕೇರಳ ಹಾಗೂ ಕರ್ನಾಟಕ ಸಾರಿಗೆ ಬಸ್ಸುಗಳು, ಖಾಸಗಿ ಬಸ್ಸುಗಳು ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಿದವು.
ಗೋಣಿಕೊಪ್ಪಲು : ತಾ. 3ರಂದು ರಾತ್ರಿ ಮಾಕುಟ್ಟ ಹಾಗೂ ಪೆರುಂಬಾಡಿ ಪೆÇಲೀಸ್ ಚೆಕ್ ಪೆÇೀಸ್ಟ್ ಮಾರ್ಗ ಸುಮಾರು 25 ಕ್ಕೂ ಅಧಿಕ ಖಾಸಗಿ ಬಸ್‍ಗಳು ಕಣ್ಣಾನೂರು-ಬೆಂಗಳೂರಿನತ್ತ ಸಾಗಿವೆ. ಇದೇ ಸಂದರ್ಭ ಕೆಲವು ಪೆÇಲೀಸರು ತಲಾ ಒಂದು ಬಸ್‍ನಿಂದ ರೂ.700ರ ವರೆಗೂ ವಸೂಲಿ ಮಾಡಿ ಬಸ್ ಬಿಟ್ಟಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದೂ ಕೂಡಾ ಬೆಳಿಗ್ಗೆ 10.30ರ ಸುಮಾರಿಗೆ ಮಾಕುಟ್ಟ ಗೇಟ್‍ನಲ್ಲಿ ರೂ.200 ಹಾಗೂ ಪೆರುಂಬಾಡಿ ಚೆಕ್‍ಪೆÇೀಸ್ಟ್‍ನಲ್ಲಿ ರೂ.100 ಹೊಂದಿಕೊಂಡು ಕೆಲವು ಪೆÇಲೀಸರು 2 ಖಾಸಗಿ ಬಸ್‍ಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಬೆಳಿಗ್ಗೆ 11 ಗಂಟೆ ಸುಮಾರಿಗೆ ಗ್ರಾಮಸ್ಥರು ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಲಾರಿ-ಕಾರುಗಳ ನಡುವೆ ರಾತ್ರಿ ಡಿಕ್ಕಿ ಸಂಭವಿಸಿ ಕಾರು ತೀವ್ರ ಜಖಂಗೊಂಡಿರುವ ಘಟನೆಯೂ ನಡೆದಿದೆ.
ಕುಸಿತಗೊಂಡ ರಸ್ತೆಯ ಬದಿಗಳಲ್ಲಿ ತಾತ್ಕಾಲಿಕ ತಡೆಗೋಡೆ ಇನ್ನೂ ಪೂರ್ಣಗೊಂಡಿರಲಿಲ್ಲ. ರಸ್ತೆಯ ಒತ್ತಡವನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಆರ್.ವಿ.ಡಿಸೋಜ ವೀಕ್ಷಣೆ ಮಾಡಿ ಲಘುವಾಹನಗಳಿಗೆ ಮಾತ್ರ ಅನುಮತಿ ನೀಡಿದ್ದರು. ಸಂಜೆ ಪೆರುಂಬಾಡಿ ರಸ್ತೆ ದುರಸ್ಥಿ ಕೆಲಸ ಮುಗಿಸಿ ಗುತ್ತಿಗೆದಾರರು, ಕಾರ್ಮಿಕರು ವಾಪಾಸ್ಸಾಗುತ್ತಿದ್ದಂತೆ ಇತ್ತ ಭಾರೀ ವಾಹನಗಳು ಓಡಾಟ ನಡೆಸುವದು ಕಂಡು ಬರುತ್ತಿತ್ತು.
ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖಾಧಿಕಾರಿಗಳ ಭರವಸೆ ಮೇರೆ ಆದೇಶ ಹೊರಡಿಸಬೇಕಿದ್ದು, ಕಳೆದ ರಾತ್ರಿ ಸುಮಾರು 25 ಬಸ್‍ಗಳು ಹಾಗೂ ಭಾರೀ ಲಾರಿಗಳು ಓಡಾಟ ನಡೆಸಿವೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ಲಾರಿಯನ್ನು ರಾತ್ರಿ ಗಸ್ತಿನ ಪೆÇಲೀಸರು ತಡೆಯಬೇಕಿತ್ತು. ಆದರೆ, ತಡೆಯದೆ ಬಿಟ್ಟ ಹಿನ್ನೆಲೆ ಕೇರಳದ ಶಿಫ್ಟ್ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರು ಚಾಲಕ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿರುವದಾಗಿ ಪೆರುಂಬಾಡಿ ವ್ಯಾಪ್ತಿಯ ಗ್ರಾಮಸ್ಥರು ‘ಶಕ್ತಿ’ಗೆ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಕಣ್ಣಾನೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ಪೆÇಲೀಸರು ಬಿಟ್ಟಿದ್ದು ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಆದೇಶಕ್ಕೂ ಮುನ್ನವೇ ಭಾರೀ ವಾಹನಗಳಿಗೆ ಅವಕಾಶ ಮಾಡಿಕೊಟ್ಟ ಬಗ್ಗೆ ಪೆÇಲೀಸರೊಂದಿಗೆ ವಾಗ್ವಾದ ನಡೆಸಿದರು. ಇದೇ ಸಂದರ್ಭ ಮತ್ತೊಂದು ಖಾಸಗಿ ಬಸ್ ಮಾಕುಟ್ಟ ಕೊಡಗು ಚೆಕ್‍ಪೆÇೀಸ್ಟ್‍ಕಡೆಯಿಂದ ಪೆರುಂಬಾಡಿ ಮಾರ್ಗದಲ್ಲಿ ಬಂದ ಸಂದರ್ಭ ಪೆರುಂಬಾಡಿ-ಬಾಳುಗೋಡು ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಬಸ್‍ಗೆ ತಡೆ ಒಡ್ಡಿದ ಘಟನೆ ನಡೆದಿದೆ. ಇದೇ ಸಂದರ್ಭ ಕೆಲವರು ಕರೆಮಾಡಿ ಬಿಜೆಪಿ ಪ್ರಮುಖರಾದ ಮಲ್ಲಂಡ ಮಧು ದೇವಯ್ಯ ಹಾಗೂ ಮಾಜಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪಟ್ರಪಂಡ ರಘುನಾಣಯ್ಯ ಅವರನ್ನು ಕರೆಸಿಕೊಂಡಿದ್ದಾರೆ.
ಕೆಎಲ್ ವಾಹನಗಳನ್ನು ಹಣ ಹೊಂದಿಕೊಂಡು ಬಿಡುವ ಪೆÇಲೀಸರು, ಕೆಲವು ಕೊಡಗಿನ ಕೆಎ ನಂಬರಿನ ಅಟೋ ಹಾಗೂ ಲಘುವಾಹನಗಳನ್ನು ಬಿಡುತ್ತಿರಲಿಲ್ಲ ಎಂದು ಮಧು ದೇವಯ್ಯ ಆರೋಪಿಸಿದ್ದಾರೆ.
ಇದೇ ಸಂದರ್ಭ ಸಾರ್ವಜನಿಕರು ತಡೆಹಿಡಿದ ಬಸ್ ಚಾಲಕನನ್ನು ಮಧು ದೇವಯ್ಯ ವಿಚಾರಿಸಿರುವದಾಗಿ ಮಾಕುಟ್ಟ ಚೆಕ್‍ಪೆÇೀಸ್ಟ್‍ನಲ್ಲಿ ರೂ.200 ಹಾಗೂ ಪೆರುಂಬಾಡಿ ಚೆಕ್‍ಪೆÇೀಸ್ಟ್‍ನಲ್ಲಿ ರೂ.100 ಹೊಂದಿಕೊಂಡು ಪೆÇಲೀಸರು ಬಸ್‍ಗೆ ರಹದಾರಿ ಕಲ್ಪಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪೆÇಲೀಸರು ಮತ್ತು ಕೊಡಗು ವಾಹನಗಳ ಮಾಲೀಕರು, ಬಿಜೆಪಿ ಪ್ರಮುಖರ ನಡುವೆ ಕೊಂಚ ಹೊತ್ತು ಮಾತಿನ ಚಕಮಕಿ, ಬಿಗುವಿನ ವಾತಾವರಣ ಏರ್ಪಟ್ಟಿದೆ. ಇದೇ ಸಂದರ್ಭ ಮಲ್ಲಂಡ ಮಧು ದೇವಯ್ಯ ಅವರು ವೀರಾಜಪೇಟೆ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶವಿಲ್ಲದೆ ಪೆÇಲೀಸರು ಬಿಟ್ಟಿದ್ದು ಹಾಗೂ ಸ್ಥಳೀಯ ವಾಹನ ಚಾಲಕರು, ಮಾಲೀಕರಿಗೆ ಅಡ್ಡಿ ಉಂಟು ಮಾಡಿದ್ದು ಇಂದು ಖಾಸಗಿ ಬಸ್‍ಗೆ ತಡೆವೊಡ್ಡಲು ಪ್ರಮುಖ ಕಾರಣವೆನ್ನಲಾಗಿದೆ.
ಇದೇ ಸಂದರ್ಭ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಹಾಗೂ ಕೊಡಗು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾರಿಗೆ ಬಸ್ ಹಾಗೂ 16 ಟನ್ ಮಿತಿಯೊಳಗಿನ ಲಾರಿಗಳಿಗೆ ಮಾತ್ರಾ ಸದ್ಯದ ಮಟ್ಟಿಗೆ ಪರವಾನಗಿ ನೀಡಬಹುದು ಎಂದು ಮನವರಿಕೆ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದಾರೆ. 20 ಟನ್ ಅಥವಾ 40 ಟನ್ ಸಾಮಥ್ರ್ಯದ ಲಾರಿ ಓಡಾಟ ಸದ್ಯಕ್ಕಿಲ್ಲ. ಈ ನಡುವೆಯೂ ಪೆÇಲೀಸರು ಮತ್ತೆ ಭಾರೀ ವಾಹನಗಳಿಗೆ ಆದೇಶಕ್ಕೆ ವಿರುದ್ಧವಾಗಿ ಅವಕಾಶ ನೀಡಿದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೊಡಗು-ಕೇರಳ ಅಂತರ್‍ರಾಜ್ಯ ಹೆದ್ದಾರಿಯಲ್ಲಿ ಭಾರೀ ವಾಹನಗಳ ಒತ್ತಡ ದಿನೇ ದಿನೇ ಅಧಿಕವಾಗುತ್ತಿದ್ದು, ಮಾಕುಟ್ಟ ಹಾಗೂ ಪೆರುಂಬಾಡಿ ಚೆಕ್‍ಪೆÇೀಸ್ಟ್ ಪೆÇಲೀಸರ ಮೇಲೂ ಅಧಿಕ ಒತ್ತಡ ಬೀಳುತ್ತಿದೆ. ರಾತ್ರಿ ಅಪಘಾತಗೊಂಡ ಪಶ್ಚಿಮ ಬಂಗಾಳದ ಲಾರಿಯನ್ನು ವೀರಾಜಪೇಟೆ ಗ್ರಾಮಾಂತರ ಠಾಣೆಯ ಮುಂದೆ ಇಂದು ಮಧ್ಯಾಹ್ನದವರೆಗೂ ನಿಲ್ಲಿಸಲಾಗಿತ್ತು. 16 ಟನ್ ಸಾಮಥ್ರ್ಯದ ಲಾರಿ ಓಡಾಟಕ್ಕೆ ಇಂದು ಅನುಮತಿ ಸಿಕ್ಕಿರುವ ಹಿನ್ನೆಲೆ ಲಾರಿಯನ್ನು ಬಿಡುಗಡೆ ಮಾಡಲಾಗಿದೆ.
ಲಾರಿ-ಕಾರು ಡಿಕ್ಕಿ : ವೀರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್ ಮೂಲಗಳ ಪ್ರಕಾರ ಪಶ್ಚಿಮ ಬಂಗಾಳದ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಖಚಿತಪಟ್ಟಿದ್ದು, ಪರಸ್ಪರ ಇಬ್ಬರು ಚಾಲಕರು ರಾಜೀ ತೀರ್ಮಾನ ಮಾಡಿಕೊಂಡ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. -ವರದಿ: ಡಿ.ಎಂ. ರಾಜ್‍ಕುಮಾರ್ ಟಿ.ಎಲ್.ಶ್ರೀನಿವಾಸ್