ಮಡಿಕೇರಿ, ಆ. 4: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷೆ ಜಿ.ಆರ್. ಪುಷ್ಪಲತಾ ಬಿಡುಗಡೆ ಮಾಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಕುಶಾಲನಗರದ ಜಯ ಪ್ರಕಾಶ್, ಸಂಪಾಜೆಯ ರಾಜೇಶ್ವರಿ, ಬಾಳೆಲೆಯ ಸುಳ್ಳಿಮಾಡ ಕೆ. ಭವಾನಿ, ಸಿದ್ದಾಪುರದ ಕೆ.ಆರ್. ದೇವಜಾನು, ಕೊಡ್ಲಿಪೇಟೆಯ ಹೊನ್ನಮ್ಮ, ಸುಂಟಿಕೊಪ್ಪದ ಗೀತಾ ಧರ್ಮಪ್ಪ, ಖಜಾಂಚಿಯಾಗಿ ನಾಪೋಕ್ಲುವಿನ ಬೊಳ್ಳಮ್ಮ ನಾಣಯ್ಯ, ಪ್ರಧಾನ ಕಾರ್ಯದರ್ಶಿಗಳಾಗಿ ಸೋಮವಾರಪೇಟೆಯ ಶೀಲಾ ಡಿಸೋಜ, ಆರ್ಜಿ ಗ್ರಾಮದ ಗಾಯತ್ರಿ, ತಿತಿಮತಿಯ ಆಶಾ ಜೇಮ್ಸ್, ಗೋಣಿಕೊಪ್ಪಲುವಿನ ಪ್ರಭಾವತಿ, ಭಾಗಮಂಡಲದ ನಿಡ್ಯಮಲೆ ಮೀನಾಕ್ಷಿ, ಮಡಿಕೇರಿಯ ಸ್ವರ್ಣಲತಾ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಗೋಣಿಕೊಪ್ಪಲುವಿನ ಮಂಜುಳ, ಹಾಲುಗುಂದದ ಎ.ಯು. ಸ್ಮಿತಾ, ಮಡಿಕೇರಿಯ ಫಿಲೋಮಿನಾ, ಕೊಡ್ಲಿಪೇಟೆಯ ಎಸ್.ಎಂ. ಶಶಿ ಮಹೇಶ್. ಸದಸ್ಯರುಗಳಾಗಿ ಬೆಟ್ಟಗೇರಿಯ ಸುಮಿತಾ ಮಾದಪ್ಪ, ಸಿದ್ದಾಪುರದ ಪೂವಮ್ಮ, ಮಡಿಕೇರಿಯ ಪುಟ್ಟಲಕ್ಷ್ಮಿ, ಬಾಳೆಲೆಯ ಪದ್ಮಿನಿ ತಿಮ್ಮಯ್ಯ, ಕುಶಾಲನಗರದ ರಾಧಾ ಪುಟ್ಟರಾಜು, ಶನಿವಾರಸಂತೆಯ ಸೌಭಾಗ್ಯಲಕ್ಷ್ಮಿ, ಚೌಡ್ಲುವಿನ ವನಜಾ, ಮೂರ್ನಾಡುವಿನ ಮೀನಾಕ್ಷಿ ಟಿ.ಆರ್, ಸೋಮವಾರಪೇಟೆಯ ನಂದಿನಿ ಅರಸ್, ಗುಡ್ಡೆಹೊಸೂರು ಗ್ರಾಮದ ಭಾರತಿ, ಬಿ. ಶೆಟ್ಟಿಗೇರಿ ಗ್ರಾಮದ ಬಲ್ಲನಮಾಡ ಶಾರದ ಕುಶಾಲಪ್ಪ, ಕುಶಾಲನಗರದ ಲಲಿತ, ಮಡಿಕೇರಿಯ ಜುಲೇಕಾಬಿ, ಚೆಟ್ಟಳ್ಳಿಯ ವತ್ಸಲಾ, ನೆಲ್ಲಿಹುದಿಕೇರಿಯ ಸುಹದಾ, ವೀರಾಜಪೇಟೆಯ ಕುಸುಮಾ ಸೋಮಣ್ಣ, ಆಲೂರು-ಸಿದ್ದಾಪುರದ ಲೀಲಾದಾಸ್, ಗೋಣಿಕೊಪ್ಪದ ಸೌಮ್ಯ ಬಾಲು, ಕುಶಾಲನಗರದ ಸಲೀನಾ, ಗೋಣಿಕೊಪ್ಪದ ರಮಾವತಿ, ಬೆಸೂರು ಗ್ರಾಮದ ಗಿರಿಜಾ ಕರುಣಾಕರ್, ವೀರಾಜಪೇಟೆಯ ಅನಿತಾ ಮಾಚಯ್ಯ ಆಯ್ಕೆಯಾಗಿದ್ದಾರೆ.

ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರು, ಜಿ.ಪಂ., ತಾ.ಪಂ. ಸದಸ್ಯರುಗಳು, ನಗರಸಭೆ ಅಧ್ಯಕ್ಷರು, ಸದಸ್ಯರುಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರು, ಮಹಿಳಾ ಅಭಿವೃದ್ಧಿ ಮಂಡಳಿ ನಿರ್ದೇಶಕರು, ಕಾಂಗ್ರೆಸ್ ಸೇವಾದಳದ ಮಹಿಳಾ ಅಧ್ಯಕ್ಷರು, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ವಿಶೇಷ ಆಹ್ವಾನಿತರಾಗಿರುತ್ತಾರೆ ಎಂದು ಜಿ.ಆರ್. ಪುಷ್ಪಲತಾ ತಿಳಿಸಿದ್ದಾರೆ.