ಮಡಿಕೇರಿ, ಆ. 4: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ “ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗಳನ್ನು ನೀಡಲು ನಿರ್ಧರಿಸಿದೆ.2015-16ನೇ ಸಾಲಿನಲ್ಲಿ ಜನವರಿ 2015ರಿಂದ ಡಿಸೆಂಬರ್ 2015ರ ವರೆಗೆ ಮತ್ತು 2016ನೇ ಸಾಲಿನಲ್ಲಿ ಜನವರಿ 2016 ರಿಂದ ಡಿಸೆಂಬರ್ 2016ರ ವರೆಗೆ ಮಕ್ಕಳ ಕ್ಷೇತ್ರದಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಮಕ್ಕಳ ಜನಪದ (ಸೃಜನಾತ್ಮಕ/ಸಂಪಾದಿತ_ ವೈಜ್ಞಾನಿಕ ಕೃತಿ, ಅನುವಾದಿತ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಸಂಕೀರ್ಣ (ವಿಮರ್ಶೆ, ಲೇಖನ ಇತ್ಯಾದಿ) ಪುಸ್ತಕಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಮಕ್ಕಳು ಮಕ್ಕಳಿಗಾಗಿ ಪ್ರಕಟಿಸಿದ ಕಾವ್ಯ, ಕಥೆ, ಕೃತಿಗಳನ್ನು ಸಹ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಆದರೆ ನಿಗದಿತ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಗಿರಬೇಕು. ಪ್ರಶಸ್ತಿಗಳಿಗೆ ಆಯ್ಕೆಯಾದ ಕೃತಿಗಳಿಗೆ ರೂ. 10000 ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವದು. ಈಗಾಗಲೇ ಅಕಾಡೆಮಿಯಿಂದ ಪ್ರಶಸ್ತಿಯನ್ನು ಪಡೆದಿದ್ದರೆ ಅವರು ಸೌಲಭ್ಯಕ್ಕೆ ಅರ್ಹವಿರುವದಿಲ್ಲ. ಪ್ರತಿಯೊಂದು ಪುಸ್ತಕದ 4 ಪ್ರತಿಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ (ದೂರವಾಣಿ ಸಂಖ್ಯೆ : 08272-228010) ಇಲ್ಲಿಗೆ ತಾ. 14 ರೊಳಗಾಗಿ ಕಳುಹಿಸಿಕೊಡುವಂತೆ ತಿಳಿಸಲಾಗಿದೆ.