ನವದೆಹಲಿ, ಆ. 5: ದೇಶದ 51ನೇ ಉಪರಾಷ್ಟ್ರಪತಿ ಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾಗಿದ್ದಾರೆ. ಎನ್‍ಡಿಎ ಬೆಂಬಲಿತ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಚುನಾವಣೆಗೆ ಸ್ಪರ್ಧಿಸಿದ್ದರು.
ಶನಿವಾರ ಉಪ ರಾಷ್ಟ್ರಪತಿ ಚುನಾವಣೆ ನಡೆಯಿತು. ಶೇ. 98.21 ರಷ್ಟು ಮತದಾನವಾಗಿತ್ತು. ಸಂಜೆಯೇ ಮತ ಎಣಿಕೆ ನಡೆದಿದ್ದು, ವೆಂಕಯ್ಯ ನಾಯ್ಡು 516 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ವೆಂಕಯ್ಯ ನಾಯ್ಡು ಅವರ ವಿರುದ್ಧ ಯುಪಿಎ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಅವರು 244 ಮತಗಳನ್ನು ಪಡೆದು ಸೋಲು ಅನುಭವಿಸಿದರು.