ಐಟಿ ಅಧಿಕಾರಿಗಳಿಂದ ಡಿ.ಕೆ.ಶಿವಕುಮಾರ್ ವಿಚಾರಣೆ ಬೆಂಗಳೂರು, ಆ.7 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ಆದಾಯ ತೆರಿಗೆ (ಐ.ಟಿ) ಇಲಾಖೆ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ತೆರಿಗೆ ವಂಚನೆ ಆರೋಪ ಸಂಬಂಧ ತಾ. 2ರಿಂದ 5ರವರೆಗೂ ನಡೆದ ಐಟಿ ಧಾಳಿಯಲ್ಲಿ ಹಲವು ದಾಖಲೆ ಪರಿಶೀಲನೆ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿಗೆ ಸೋಮವಾರ ಮಧ್ಯಾಹ್ನ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಜೊತೆ ಬಂದರು. ಸಚಿವರ ನವದೆಹಲಿಯ ನಿವಾಸದಲ್ಲಿ 8 ಕೋಟಿ ನಗದು ಸೇರಿದಂತೆ, ಬೆಂಗಳೂರಿನ ನಿವಾಸ ಹಾಗೂ ಅವರ ಸಂಬಂಧಿಕರು, ಆಪ್ತರ ನಿವಾಸದ ಮೇಲೂ ಧಾಳಿ ನಡೆಸಿದ್ದ ಐಟಿ ಇಲಾಖೆ ಅಘೋಷಿತ ಆಸ್ತಿ ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಧಾಳಿಯಲ್ಲಿ ವಶಕ್ಕೆ ಪಡೆಯಲಾಗಿರುವ ದಾಖಲೆ ಕುರಿತು ಐಟಿ ಇಲಾಖೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ವಿಧಾನ ಪರಿಷತ್ ಸದಸ್ಯ ಎಸ್. ರವಿ ಹಾಗೂ ಗುರೂಜಿ ದ್ವಾರಕನಾಥ್ ಅವರೂ ವಿಚಾರಣೆಗೆ ಹಾಜರಾಗಿದ್ದಾರೆ.

ಬಿಜೆಪಿ ಮುಖಂಡರಿಂದ ರಜ&divound;ಕಾಂತ್ ಭೇಟಿ

ನವದೆಹಲಿ, ಆ.7 : ರಾಜಕೀಯಕ್ಕೆ ಪಾದಾರ್ಪಣೆ ಮಾಡುವದಾಗಿ ಕೆಲ ದಿನಗಳ ಹಿಂದಷ್ಟೇ ಪ್ರಕಟಿಸಿ ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರನ್ನು ಭಾನುವಾರ ಬಿಜೆಪಿ ಮುಖಂಡರು ಭೇಟಿ ಮಾಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಚೆನ್ನೈನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ಬಿಜೆಪಿ ಸಂಸದೆ ಪೂನಮ್ ಮಹಾಜನ್ ಮತ್ತು ಇತರ ನಾಯಕರು ಭೇಟಿ ನೀಡಿದ್ದು, ರಜನಿಕಾಂತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿ ಮುಖಂಡರು ರಜನಿ ಅವರನ್ನು ಭೇಟಿ ಮಾಡಿರುವದರಿಂದ ಬಿಜೆಪಿ ಪಕ್ಷಕ್ಕೆ ರಜನಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ. ಇನ್ನು ರಜನಿಕಾಂತ್ ಭೇಟಿ ಕುರಿತಂತೆ ಮೂಡಿರುವ ಊಹಾಪೆÇೀಹಗಳಿಗೆ ಬಿಜೆಪಿ ಯುವಮೋರ್ಚಾ ಸಂಘಟನೆ ಸ್ಪಷ್ಟನೆ ನೀಡಿದ್ದು, ತಲೈವಾ ಭೇಟಿ ಹಿಂದೆ ಯಾವದೇ ರಾಜಕೀಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ದೇಶದಾದ್ಯಂತ ರಕ್ಷಾ ಬಂಧನ ಆಚರಣೆ

ನವದೆಹಲಿ, ಆ.7 : ದೇಶದಾದ್ಯಂತ ಭ್ರಾತೃತ್ವದ ಬಂಧನವನ್ನು ಸಾರುವ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಕಳೆದ ವರ್ಷದಂತೆಯೇ ಈ ಬಾರಿಯೂ ಕೂಡ ಬೃಂದಾವನ ಮತ್ತು ವಾರಣಾಸಿಯ ವೃದ್ಧ ವಿಧವೆಯರು ಹಾಗೂ ವಿದ್ಯಾರ್ಥಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾವೇ ಸ್ವತಃ ಸಿದ್ಧಪಡಿಸಿದ ರಾಖಿಗಳನ್ನು ಕಟ್ಟಿದ್ದಾರೆ. ದೆಹಲಿಯ ಲೋಕ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ಮೋದಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿರುವ ವಿಧವೆಯರು, ಪ್ರಧಾನಿ ಮೋದಿಯವರಿಗೆ ರಾಖಿ ಕಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿಯವರಿಗೆ ರಾಖಿ ಕಟ್ಟಿದ ಬಳಿಕ ಪ್ರತಿಕ್ರಿಯೆ ನೀಡಿರುವ ವೃದ್ಧ ವಿಧವೆಯೊಬ್ಬರು, ಮನೆಯಲ್ಲಿಯೇ ತಯಾರಿಸಿದ್ದ ರಾಖಿಯನ್ನು ಮೋದಿಯವರಿಗೆ ಕಟ್ಟಲಾಯಿತು. ಬಳಿಕ ಬೃಂದಾವನಕ್ಕೆ ಭೇಟಿ ನೀಡುವಂತೆ ಮೋದಿಯರಿಗೆ ಆಹ್ವಾನ ನೀಡಿದ್ದೇವೆ, ಆಶೀರ್ವಾದವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮರಗಳಿಗೆ ರಾಖಿ ಕಟ್ಟಿದ ಬಿಹಾರ ಸಿಎಂ

ಪಟ್ನಾ, ಆ.7 : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ‘ರಕ್ಷಾ ಬಂಧನ’ ಪ್ರಯುಕ್ತ ಮರಗಳಿಗೆ ರಾಖಿ ಕಟ್ಟುವ ಮೂಲಕ ರಾಜ್ಯದ ಜನರಿಗೆ ಅರಣ್ಯ ರಕ್ಷಣೆಯ ಕರೆ ನೀಡಿದ್ದಾರೆ. 2001ರಿಂದಲೂ ಅರಣ್ಯ ರಕ್ಷಣೆ ಸಂದೇಶ ಸಾರಲು ಮರಗಳಿಗೆ ರಾಖಿ ಕಟ್ಟುತ್ತಿರುವದಾಗಿ ಹೇಳಿಕೊಂಡಿರುವ ನಿತೀಶ್ ಕುಮಾರ್ ‘ಇದು ಹಸಿರು ರಕ್ಷಣೆಯ ಸಂಕೇತವಾಗಿದೆ. ಪರಿಸರ ಸಂರಕ್ಷಣೆಗೆ ಈ ನಡೆ ಸಹಕಾರಿಯಾಗಲಿದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜ್ಯದ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿದೆ’ ಎಂದು ತಿಳಿಸಿದ್ದಾರೆ.

11.44 ಲಕ್ಷ ನಕಲಿ ಪಾನ್ ಕಾರ್ಡ್‍ಗಳು ಪತ್ತೆ

ನವದೆಹಲಿ, ಆ.7 : ಜುಲೈ 27ರ ವರೆಗೆ 11.44 ಲಕ್ಷ ನಕಲಿ ಪ್ಯಾನ್ ಕಾರ್ಡ್‍ಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ಸರ್ಕಾರ ನಿಷ್ಕ್ರಿಯ ಮಾಡಿದೆ. ಸರ್ಕಾರದ ನಿಯಮ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್ ಸಂಖ್ಯೆಯನ್ನು ಹೊಂದುವಂತಿಲ್ಲ. ಒಬ್ಬ ವ್ಯಕ್ತಿಯ ತೆರಿಗೆ ಅಸ್ತಿತ್ವ ಹಾಗು ಅವನ ಎಲ್ಲ ಹಣಕಾಸು ವಹಿವಾಟುಗಳನ್ನು ಗುರುತಿಸಲು ಪಾನ್ ಕಾರ್ಡ್ ಅತ್ಯಗತ್ಯ. ಜುಲೈ 27ರವರೆಗೆ 11.44 ಲಕ್ಷ ನಕಲಿ ಪಾನ್ ಕಾರ್ಡ್ ಗಳನ್ನು ಪತ್ತೆ ಹಚ್ಚಲಾಗಿದೆ, ಅವುಗಳಲ್ಲಿ ಅಸ್ತಿತ್ವದಲ್ಲಿದ್ದ ವ್ಯಕ್ತಿ ಅಥವಾ ತಪ್ಪು ಗುರುತಿನ ವ್ಯಕ್ತಿಗಳ ಹೆಸರು ಇವೆ. ನಿಮ್ಮ ಪಾನ್‍ಕಾರ್ಡ್ ಸಕ್ರಿಯವಾಗಿದೆಯೇ ಅಥವಾ &divound;ಷ್ಕ್ರಿಯವಾಗಿದೆಯೇ ಎಂಬುದನ್ನು ಆದಾಯ ತೆರಿಗೆ ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿ ಪರಿಶೀಲಿಸಬಹುದು.

ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ತೆರವು

ಅಮೇಥಿ(ಉ.ಪ್ರ), ಆ.7 : ಇಲ್ಲಿನ ಜೈಸ್ ಪ್ರದೇಶದ ರೊಖಾ ಗ್ರಾಮದಲ್ಲಿ 1.0360 ಹೆಕ್ಟೇರ್ ಭೂಮಿಯಲ್ಲಿರುವ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್‍ನ್ನು ಕೂಡಲೇ ಬಿಟ್ಟು ಕೊಡಬೇಕೆಂದು ಅಮೇಥಿ ಜಿಲ್ಲಾಡಳಿತ ಆದೇಶ &divound;ೀಡಿದೆ. ಇಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ವೃತ್ತಿ ತರಬೇತಿಗೆಂದು ಜಾಗ ನೀಡಲಾಗಿತ್ತು. ಆರಂಭದಲ್ಲಿ ಈ ಭೂಮಿಯನ್ನು ಸ್ವಸಹಾಯ ಗುಂಪುಗಳ ಸದಸ್ಯರಿಗೆ ವೃತ್ತಿಪರ ತರಬೇತಿ &divound;ೀಡಲೆಂದು ದಾಖಲಾತಿ ಮಾಡಿಕೊಳ್ಳಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಇದನ್ನು ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಶಪಡಿಸಿಕೊಂಡಿತ್ತು. ಈ ಭೂಮಿಯ ಒಡೆತನದ ಬಗ್ಗೆ ಆರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾ&divound; ಪ್ರಶ್ನೆ ಮಾಡಿದ್ದರು. ನಂತರ 2014ರಲ್ಲಿ ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎದುರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗ ಅವರು ಬರೆದ ಪತ್ರ ಮೂಲೆಗೆ ಸೇರಿತು. ಇದೀಗ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲಾಡಳಿತ ಸ್ಮೃತಿ ಇರಾನಿ ಅವರ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಪ್ರವೃತ್ತವಾಗಿದೆ.

ಆ.22ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

ಚೆನ್ನೈ, ಆ.7 :ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ ತಾ.22ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವದಾಗಿ ಪ್ರಕಟಿಸಿದೆ. ಮುಷ್ಕರ ಸಂಬಂಧ ಈಗಾಗಲೇ ನೋಟಿಸ್ ನೀಡಿದ್ದು, ಇಡೀ ಬ್ಯಾಂಕ್ ವಲಯ ಮುಷ್ಕರದಲ್ಲಿ ಭಾಗಿಯಾಗಲಿದೆ ಎಂದು ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ. ವೇತನ ಪರಿಷ್ಕರಣೆ, ಸುಧಾರಣಾ ಕ್ರಮಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟು ಯುಎಫ್ಬಿಯು ಪ್ರತಿಭಟನೆ ನಡೆಸಲು ಮುಂದಾಗಿದೆ.

ಶ್ರೀಶಾಂತ್ ಆಜೀವ &divound;ಷೇಧ ತೆರವಿಗೆ ಆದೇಶ

ಕೊಚ್ಚಿ, ಆ.7 : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶ್ರೀಶಾಂತ್‍ಗೆ ವಿಧಿಸಿರುವ ಆಜೀವ ನಿಷೇಧ ಶಿಕ್ಷೆಯನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಭೂಗತ ಜಗತ್ತಿನೊಂದಿಗೆ ನಂಟು ಹೊಂದಿದ್ದ ಆರೋಪದಿಂದ ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಆದರೆ, ಆಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ ತೆರವುಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕಳಂಕಿತ ಆಟಗಾರ ಎಸ್. ಶ್ರೀಶಾಂತ್ ಮಾರ್ಚ್‍ನಲ್ಲಿ ಕೇರಳ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿರುವ ಕೇರಳ ಹೈಕೋರ್ಟ್ ಆಜೀವ ನಿಷೇಧ ಶಿಕ್ಷೆ ತೆರವುಗೊಳಿಸುವಂತೆ ಬಿಸಿಸಿಐಗೆ ಆದೇಶಿಸಿದೆ.