12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ವೀರಶೈವ - ಲಿಂಗಾಯಿತ ಧರ್ಮವನ್ನು ಹುಟ್ಟು ಹಾಕಿದ ಜಗಜ್ಯೋತಿ ಬಸವಣ್ಣನವರ ತತ್ವಾದರ್ಶ ಪಾಲನೆ ಮಾಡಿಕೊಂಡು ಬಂದ ಸಮುದಾಯ ಕಳೆದ 800 ವರ್ಷಗಳಿಂದ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ವ್ಯಾಪಿಸಿದ್ದು ರಾಜಕೀಯವಾಗಿಯೂ, ಸಾಂಸ್ಕøತಿಕವಾಗಿಯೂ, ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಅತ್ಯಂತ ಪ್ರಬಲ ಹಾಗೂ ಪ್ರಭಾವಿಗಾಳಾಗಿರುವ ಈ ಸಮುದಾಯ ಒಂದು ಕೋಟಿ ಜನಸಂಖ್ಯೆಯನ್ನು ಮೀರಿದ್ದು, ಕರ್ನಾಟಕದಲ್ಲಿ 7 ಜನ ಲಿಂಗಾಯಿತ ಮುಖ್ಯಮಂತ್ರಿಗಳನ್ನು ಕಂಡಿದ್ದಾರೆ, ಶಾಸನ ಸಭೆ ಮತ್ತು ಪಾರ್ಲಿಮೆಂಟಿನಲ್ಲೂ ಅವರಿಗೆ ಸಿಂಹ ಪಾಲಿದೆ. ಭಾರತದ ಅಂಗಾಮಿ ರಾಷ್ಟ್ರಪತಿ ಹಾಗೂ ಖಾಯಂ ಉಪ ರಾಷ್ಟ್ರಪತಿ ಗಳನ್ನು ಕೂಡಾ ಕಂಡಿದ್ದಾರೆ. ಇವರ ಕುರಿತು ನಾವ್ಯಾರು ಪೂರ್ವಾಗ್ರಹವಾಗಲಿ ಅಥವಾ ತಿರಸ್ಕಾರ ಮನೋಭಾವವಾಗಲಿ ವ್ಯಕ್ತಪಡಿಸುತ್ತಿಲ್ಲ, ಅವರು ಪ್ರತ್ಯೇಕ ಧರ್ಮವೆಂದು ಪ್ರತಿಪಾದಿಸಿ ಪಡೆಯುವುದಕ್ಕೂ ನಾವು ವಿರೋಧಿಸುವುದಿಲ್ಲ, ಅಪಸ್ವರವೆತ್ತುವುದಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ಅವರನ್ನು ಪ್ರತ್ಯೇಕ ಧರ್ಮವೆಂದು ಪರಿಗಣಿಸಿ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನ ಮಾನದ ಮೂಲಕ ಸವಲತ್ತು ನೀಡಲು ಕೂಡ ಮುಂದಾಗಿದ್ದಾರೆ. ಈ ಕುರಿತು ಲಿಂಗಾಯಿತ ಮಂತ್ರಿಗಳಾದ ಬಸವರಾಜ ರಾಯರೆಡ್ಡಿ, ಎಂ.ಬಿ ಪಾಟಿಲ್ ಮುಂತಾದವರಲ್ಲದೇ ಲಿಂಗಾಯಿತೇತರ ಮಂತ್ರಿಗಳಾದ ದಿನೇಶ್ ಗುಂಡೂರಾವ್ ಆದಿಯಾಗಿ ಎಲ್ಲರೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಟ್ಯಾಗ್ ದೊರೆತಲ್ಲಿ ಅವರಿಗೆ ಧಾರ್ಮಿಕ ಅಲ್ಪಸಂಖ್ಯಾತರೆಂದು ಪರಿಗಣನೆಯಾಗಿ ಸಿಖ್, ಭೌದ್ಧ, ಪಾರ್ಸಿ, ಜೈನ ಮತ್ತು ಕ್ರಿಶ್ಚಿಯನ್ ಮುಸ್ಲಿಂರಂತೆ ಸರ್ಕಾರದ ವಿವಿಧ ಸಂವಿಧಾನಿಕ ಸವಲತ್ತು ದೊರಕಲಿದೆ ಎಂದು ಸಮರ್ಥಿಸಿದ್ದಾರೆಯಲ್ಲದೆ ಇಡೀ ಕರ್ನಾಟಕದ ಸಿದ್ದರಾಮಯ್ಯ ಮಂತ್ರಿಮಂಡಲದ ಸದಸ್ಯರು ಲಿಂಗಾಯಿತ ಧರ್ಮದ ಪ್ರಸ್ತುತಿಯ ಕುರಿತು ಮನೆ-ಮನಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಸಂಬಂಧ ಹಲವು ಮಠಾಧೀಶ್ವರು ವಿರೋಧಿಸಿದ್ದಾರೆ. ಮುಖ್ಯವಾಗಿ ಹಿಂದೂ ಮಠಾಧೀಶ ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥರವರು ಇದನ್ನು ಬಲವಾಗಿ ವಿರೋಧಿಸಿದ್ದಾರೆ. ಅದರಲ್ಲೂ ಲಿಂಗಾಯಿತ ಪ್ರತ್ಯೇಕ ಧರ್ಮದ ಟ್ಯಾಗ್ ವಿರೋಧಿಸಿದ ಲಿಂಗಾಯಿತರ ಪ್ರಭಾವಿ ನಾಯಕರಾದ ಬಿ.ಜೆ.ಪಿ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಅವರು ಹಿಂದು ರಾಜಕೀಯ ಮುಖಂಡ ಅವರು ಲಿಂಗಾಯಿತರ ನಾಯಕರಲ್ಲ ಅವರು ಲಿಂಗಾಯಿತ ವೀರಶೈವ ಪ್ರತ್ಯೇಕ ಧರ್ಮದ ಟ್ಯಾಗನ್ನು ವಿರೋಧಿಸಲು ಯಾವುದೇ ಅಧಿಕಾರ ಹಕ್ಕು ಇಲ್ಲವೆಂದು ಆಡಳಿತಕಾರರು ಗೇಲಿ ಮಾಡುತ್ತಿದ್ದಾರೆ.

ಆದರೆ ಪ್ರಶ್ನೆ ಇಷ್ಟೆ; ಅತ್ಯಂತ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಖಾತರಿಗೆ ಸಲುವಾಗಿ ಒಟ್ಟು ಅವರ ಅಸ್ಥಿತ್ವಕ್ಕೆ ಮತ್ತು ಮೀಸಲಾತಿಗೋಸ್ಕರ ಸಿ.ಎನ್.ಸಿ ನಿರಂತರ ಹೋರಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಉದ್ದೇಶಕ್ಕಾಗಿ ‘ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನ’ವನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಮೇರೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯೂ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ 2016 ನವೆಂಬರ್ 16 ರಿಂದ ಕುಲಶಾಸ್ತ್ರ ಅಧ್ಯಯನ ಕೈಗೊಂಡು ಅದು ಪ್ರಗತಿಯ ಪಥದಲ್ಲಿ ಮುಂದುವರೆದಾಗ ದಿಢೀರ್ ಆಗಿ ಡಿಸೆಂಬರ್ 18ರಂದು ಮುಖ್ಯಮಂತ್ರಿಗಳು ಮೌಖಿಕ ಆದೇಶ ನೀಡಿ ಅದನ್ನು ತಡೆ ಮಾಡಲು ಕಾರಣವೇನು ? ಯಾರೋ ಒಬ್ಬ ರಾಜಕಾರಣಿ ವಿರೋಧಿಸಿದರು ಎಂಬ ಕಾರಣ ನೀಡಿ ನಾವು ಕುಲಶಾಸ್ತ್ರ ಅಧ್ಯಯನ ಸ್ಥಗಿತಗೊಳಿಸಿದ್ದೇವೆಂದು ಅಸ್ಪಷ್ಟವಾಗಿ ಸಬೂಬು ಹೇಳುತ್ತಿರುವ ಮುಖ್ಯಮಂತ್ರಿಗಳು ಲಿಂಗಾಯಿತ ಧರ್ಮಕ್ಕೆ ಯಡಿಯೂರಪ್ಪರಾದಿಯಾಗಿ ಬಹುತೇಕ ಮಠಾಧೀಶರು ವಿರೋಧವಿದ್ದರೂ ಅದನ್ನು ಸಮರ್ಥಿಸುವ ಕೊಡವರ ಕುರಿತು ತಳೆದ ಉಪೇಕ್ಷ ಧೋರಣೆಗೆ ಉತ್ತರ ನೀಡಬೇಕು.

ಮುಖ್ಯಮಂತ್ರಿಗಳು ಕೊಡವರು ಸೇರಿದಂತೆ ಈ ರಾಜ್ಯದ ಸರ್ವ ಜನರಿಗೂ ತಂದೆ–ತಾಯಿಯಂತೆ ರಕ್ಷಕ-ಪೋಷಕರಾಗಿ ಕಾಪಾಡ ಬೇಕಾದವರು, ಕೊಡವರಿಗೆ ತಾರತಮ್ಯ ಎಸಗಬಾರದು. ಕೊಡವರ ನೋವು-ಬೇಡಿಕೆ Éಯನ್ನು ಪರಮ ರ್ಶಿಸಿ ನೋಡ ಬೇಕು.

ವಿಷಯ ಸೂಚಿ: ಶಿವಮೊಗ್ಗ ಜಿಲ್ಲೆಯ ಇಕ್ಕೇರಿಯಿಂದ ಬಂದ ಕೆಳದಿ ರಾಜ ಮನೆತನದ ಲಿಂಗಾಯಿತ ರಾಜರು 1633 ರಿಂದ 1834ರ ವರೆಗೆ ಸುಮಾರು 201 ವರ್ಷ ಕೊಡಗನ್ನು ಆಳಿದರು. ಆ ಸಂದರ್ಭ ನಿರ್ಜಾತಿ-ನಿರ್ಧರ್ಮ ಬುಡಕಟ್ಟು (ನಾನ್ ರಿಲೀಜಿಯಸ್) ಜನಾಂಗವಾಗಿದ್ದ ಕಾಡು-ಮೇಡಿನ ಬುಡಕಟ್ಟು ಕೊಡವರನ್ನು ಹಿಡಿದು ಬಡಿದು ಹಿಂದೂ ಧರ್ಮದ ತೆಕ್ಕೆಗೆ ಸೇರಿಸಿ ಅದನ್ನು ಅಪ್ಪಿಕೊಳ್ಳುವಂತೆ ಬೆದರಿಸಿ ಬಲವಂತ ಮಾಡಿ ಯಾ ಒಪ್ಪಿಸಿ ಪ್ರೇರೇಪಿಸಿದವರು ಈ ಲಿಂಗಾಯಿತ ರಾಜ ಕುಟುಂಬ. ಇದೀಗ ಅದೇ ಲಿಂಗಾಯಿತ ಸಮುದಾಯ ಹಿಂದೂ ಧರ್ಮ ತೊರೆದು ಲಿಂಗಾಯಿತ ರಾಜರ ಪ್ರಭಾವದಿಂದ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡ ಕೊಡವರನ್ನು ಇಂದು ತಬ್ಬಲಿ ಮಾಡಿ ತಮಗೆ ಬೇರೆಯೇ ಲಿಂಗಾಯಿತ ಧರ್ಮ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನುವುದು ಕಾಲದ ವಿಪರ್ಯಾಸ.

ಕೊಡವರಿಗೆ ನಾನ್ ರಿಲಿಜಿಯಸ್ ರೇಶಿಯಲ್ ಮೈನಾರಿಟಿ ಸ್ಥಾನ-ಮಾನದ ಮೂಲಕ ಸಂವಿಧಾನದಲ್ಲಿ ವಿಶೇಷ ಮೀಸಲಾತಿ ಮೂಲಕ ಈ ಅತ್ಯಂತ ಅಲ್ಪಸಂಖ್ಯಾತ ಜನ ಸಂರಕ್ಷಿತವಾಗಬೇಕೆಂಬ ಘನ-ಉದಾತ್ತÀ ಉದ್ದೇಶದಿಂದ ಸಿ.ಎನ್.ಸಿ ಸಂಘಟನೆ 2001 ರ ಮೇ ತಿಂಗಳಲ್ಲಿ ಬೃಹತ್ ಮೆರವಣಿಗೆ ನಡೆಸುವುದರ ಮುಖಾಂತರ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀಮತಿ ಜಯಂತಿಯವರ ಮೂಲಕ ಕೊಡವರನ್ನು ನಿರ್ಜಾತಿ - ನಿರ್ಧರ್ಮ (ನಾನ್ ರಿಲೀಜಿಯಸ್) ರೇಶಿಯಲ್ ಮೈನಾರಿಟಿ ಸ್ಥಾನ-ಮಾನ ನೀಡಬೇಕೆಂದು ಹಕ್ಕೊತ್ತಾಯವನ್ನು ಭಾರತ ಸರ್ಕಾರಕ್ಕೆ ಜ್ಞಾಪನಾ ಪತ್ರವನ್ನು ಸಿ.ಎನ್.ಸಿ ಸಲ್ಲಿಸಿತು. ಆ ಸಂದರ್ಭ ನಮ್ಮ ಪ್ರತಿಪಾದನೆಗೆ ರಾಜಕೀಯ ಡೊಂಬರಾಟಗಾರರು ಭಾರೀ ಪ್ರತಿರೋಧ ಒಡ್ಡಿ ಉತ್ಪಾತ ಸೃಷ್ಟಿ ಮಾಡಿದ್ದರು. ನಮ್ಮ ಸದುದ್ದೇಶವನ್ನು ತಪ್ಪೆಂದು ಅರ್ಥೈಸಲಾಯಿತು. ಕೊಡವರೆಲ್ಲಾ ಅಂದ ಹಾಗೆ ಕೂಡಲೇ ಬಿ.ಜೆ.ಪಿ ಯಿಂದ ಹೊರಬರಬೇಕೆಂದೋ ಅಥವಾ ಈ ದೇಶಕ್ಕೆ ಸವಾಲಾಕಬೇಕೆಂದೋ ಅಲ್ಲ. ಅತ್ಯಂತ ಅಲ್ಪಸಂಖ್ಯಾತ ಕೊಡವರನ್ನು ಪ್ರತ್ಯೇಕವಾಗಿ ಸಂವಿಧಾನದಲ್ಲಿ ಗುರುತಿಸಿದಲ್ಲಿ ಅವರು ಮತ್ತವರ ಸಾಂಪ್ರದಾಯಿಕ ನೆಲೆ-ಅವರ ಭವಿಷ್ಯತ್ತು ಇದೆಲ್ಲವೂ ಸಂವಿಧಾನಾತ್ಮಕವಾಗಿ ಅತ್ಯಂತ ಸುಭದ್ರವಾಗಿ ಮತ್ತಷ್ಟು ಗಟ್ಟಿಯಾಗಿ ಉಜ್ವಲವಾಗಲಿದೆ ಎಂಬ ಉದ್ದೇಶದಿಂದಾಗಿತ್ತು. ಏಕೆಂದರೆ ಇಂದು ಭಾರತೀಯ ಜನತಾ ಪಕ್ಷದ ಆರ್ಥಿಕ ಶಕ್ತಿಯ ಮೂಲವೇ ಅತ್ಯಂತ ಧನಿಕರಾದಂತಹ ಬೇರೆಯೇ ಧರ್ಮದ ಟ್ಯಾಗನ್ನು ಸಂವಿಧಾನಾತ್ಮಕವಾಗಿ ಹೊಂದಿರುವ ‘ಶ್ವೇತಾಂಬರ ಜೈನರು’ ಎಂಬುದು ಗಮನಾರ್ಹ, ಅಂತೆಯೇ ಹಿಂದು ದೇವನೆಲೆಯ ಧರ್ಮದರ್ಶಿಯಾಗಿರುವ ಹಿಂದು ದೇವರನ್ನು ಒಂದು ದಿನವೂ ಪೂಜಿಸದ ‘ಮಹಾವೀರ’ನನ್ನು ಮಾತ್ರ ಪೂಜಿಸುವ ಹಿಂದುತ್ವ ಮತ್ತು ಬಿ.ಜೆ.ಪಿಯ ಮಹಾಪೋಷಕರಾದ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಕೂಡ ಜೈನ ಧರ್ಮೀಯರಾಗಿದ್ದು ಅವರು 2013 ರಲ್ಲಿ ಜೈನರಿಗೆ ಪ್ರತ್ಯೇಕ ಧರ್ಮದ ಟ್ಯಾಗ್ ದೊರೆತಾಗ ಅದನ್ನು ವಿರೋಧಿಸಲಿಲ್ಲ. ಬದಲು ಹೃದಯಪೂರ್ವಕವಾಗಿ ಸ್ವಾಗತಿಸಿದರು. ಅಂತೆಯೇ ಹಿಂದು ಪ್ರತಿಪಾದಕ ಬಿ.ಜೆ.ಪಿ ಯ ಆಕ್ರಮಣಕಾರಿ ಬಲಿಷ್ಠ ಅಧ್ಯಕ್ಷ ಅಮಿತ್ ಷಾ ರವರು ಕೂಡ ಜೈನ ಧರ್ಮೀಯರು ಅವರು ತಮಗೆ ದೊರೆತ ಪ್ರತ್ಯೇಕ ಜೈನ ಧರ್ಮದ ಸಂವಿಧಾನಿಕ ಟ್ಯಾಗನ್ನು ವಿರೋಧಿಸಲಿಲ್ಲ ಮತ್ತು ಅದರ ಸವಲತ್ತನ್ನು ತಿರಸ್ಕರಿಸಲಿಲ್ಲ ಯಾ ನಿರಾಕರಿಸಲೂ ಇಲ್ಲ.

ಇಲ್ಲಿ ಪ್ರಶ್ನೆ ಇಷ್ಟೆ ಸಿ.ಎನ್.ಸಿ ಈ ಹಿಂದೆ ನಾನ್ ರಿಲೀಜಿಯಸ್ ರೇಷಿಯಲ್ ಮೈನಾರಿಟಿ ಟ್ಯಾಗ್ ಕೇಳಿದ್ದು ಕೊಡವರು ಹಿಂದು ಧರ್ಮವನ್ನಾಗಲೀ, ಬಿ.ಜೆ.ಪಿ ಪಕ್ಷವನ್ನಾಗಲೀ ತೊರೆಯಬೇಕು ಅಥವಾ ಎಡ ವಿಚಾರ ಪ್ರತಿಪಾದಿಸುವ ಕಾಂಗ್ರೆಸನ್ನಾಗಲಿ ತಿರಸ್ಕರಿಸಿ ಹೊರ ಬರಬೇಕೆಂದು ನಾವೇನು ಹೇಳಲಿಲ್ಲ, ಹೇಳುವುದು ಇಲ್ಲ ಮತ್ತು ಫ್ಯಾಷನ್‍ಗಾಗಿಯೂ ಈ ಸ್ಥಾನ-ಮಾನ ಕೇಳಲಿಲ್ಲ. ಅದು ಅವರವರ ವೈಯಕ್ತಿಕ ವಿಚಾರ (ಉದಾಹರಣೆಗೆ ಪ್ರತ್ಯೇಕ ಧರ್ಮವನ್ನು ಹೊಂದಿರುವ ಬಹುತೇಕ ಶಿಯಾ ಮುಸಲ್ಮಾನರಂತೆ ಕಾಣುವ ಝೊರಾಸ್ಟ್ರಿಯನ್ ಪಾರ್ಸಿಗಳು ಇಂದಿಗೂ ಹಿಂದು ಪ್ರತಿಪಾದಕ ಬಿ.ಜೆ.ಪಿಯ ಕಟ್ಟ ಬೆಂಬಲಿಗರಾಗಿದ್ದಾರೆ.) ಕೇವಲ ನಮ್ಮ ಅಸ್ಥಿತ್ವಕ್ಕೋಸ್ಕರ ಸದುದ್ದೇಶದಿಂದ ಈ ಟ್ಯಾಗ್ ಕೇಳಿದೇವೆ. ಕೊಡವರ ಉದ್ಧಾರಕ್ಕಾಗಿ ಕೊಡವರ ಕುಲಶಾಸ್ತ್ರ ಅಧ್ಯಯನ ನಡೆಸಿ ಮುಗಿಸಿ ಬುಡಕಟ್ಟು ಸ್ಥಾನ-ಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದರ ಮೂಲಕ ಶ್ರೀ ಸಿದ್ದರಾಮಯ್ಯನವರು ತಮ್ಮ ರಾಜ್ಯಕ್ಕೆ ಇಚ್ಛಾಶಕ್ತಿ ಮೆರೆಯಬೇಕೆಂದು ಕೋರುತ್ತೇವೆ.

ಬಹುಸಂಖ್ಯಾತರ ವಕ್ತಾರರಾಗಿ ಅವರ ಆಸೆ-ಆಕಾಂಕ್ಷೆ ಮರ್ಜಿಗೆ ತಕ್ಕಂತೆ ವರ್ತಿಸುತ್ತಾ ಕೊಡವರಿಗೆ ಬುಡಕಟ್ಟು ಜನಾಂಗದ ಹಕ್ಕು ದೊರೆತಲ್ಲಿ ಅವರ ಉದ್ದಾರವಾಗಲಿದೆಯೆಂಬ ಕಠೋರ ಸತ್ಯದ ಅರಿವಿದ್ದರೂ ಕೊಡವರು ಯಾವುದೇ ತೆರನಾದ ಹಕ್ಕು ಕೇಳದಂತೆ ಅವರನ್ನು ಬೆದರಿಸಿ ಶಾಶ್ವತ ಒಬ್ಬ ವ್ಯಕ್ತಿ ‘ಪುಕ್ಕಲರನ್ನಾಗಿ’ ಮಾಡಿದ್ದರೆ ಮತ್ತೋರ್ವ ವ್ಯಕ್ತಿ ಪ್ರತಿಯೊಂದಕ್ಕೂ ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಾ ಅದು ಆಗುವುದಿಲ್ಲ-ದೊರಕುವುದಿಲ್ಲ-ಸಿಗುವುದಿಲ್ಲ ಮತ್ತು ಅದರಿಂದೇನು ಪ್ರಯೋಜನವೆಂದು

ಇಲ್ಲಿ ಹಿಂದುತ್ವವನ್ನು ಯಾರೂ ನಿರಾಕರಿಸಲೂ ಬಾರದು, ಅಪಮಾನ ಮಾಡಲೂ ಬಾರದು. ಏಕೆಂದರೆ ಹಿಂದುತ್ವ ಎನ್ನುವುದು ಒಂದು ಸೀಮಿತ ಧರ್ಮವಲ್ಲ. ಭರತ ವರ್ಷದ (ಹಿಂದೂಸ್ತಾನದ) ಸಮಸ್ತ ವಾಸಿಗಳ ಜೀವನ ವಿಧಾವವಾಗಿದ್ದು, ಅದೊಂದು ಅರಳಿ ಮರ-ಆಲದ ಮರವಾಗಿದ್ದು, ಎಲ್ಲಾ ಧರ್ಮಗಳು ಅಂದರೆ ಪ್ರಧಾನವಾಗಿ ಜೈನ, ಭೌದ್ದ, ಲಿಂಗಾಯಿತ ಮತ್ತು ಭಕ್ತಿ ಚಳವಳಿಯಲ್ಲಿ ಹುಟ್ಟಿದ ಆಧ್ಯಾತ್ಮಿಕ ಧರ್ಮಗಳಾದ ಧ್ವೈತ-ಅಧ್ವೈತ, ವಿಶಿಷ್ಟಾಧ್ವೈತ ಹಾಗೂ ಶಕ್ತಿ ವಿಶಿಷ್ಟದ್ವೈತ (ವೀರಶೈವ) ಪಂಥಗಳೆಲ್ಲವೂ ಈ ಹಿಂದು ಎನ್ನುವ ವಟವೃಕ್ಷದಡಿ ಟಿಸಿಲೊಡೆದು ಅರಳಿದ ಧರ್ಮಗಳೇ ಆಗಿವೆ. ಕೆಲವೊಂದರಲ್ಲಿ ಹಿಂದುತ್ವಕ್ಕೆ ಸಾಮ್ಯತೆ ಹೋಲಿಕೆವುಳ್ಳದ್ದಾಗಿದ್ದರೆ, ಕೆಲವೊಂದು ವಿಚಾರದಲ್ಲಿ ವೈಶಿಷ್ಟ್ಯತೆ ಮತ್ತು ಭಿನ್ನತೆಯೂ ಇದೆ. ಉದಾಹರಣೆಗೆ ಬ್ರಾಹ್ಮಣರಲ್ಲಿ 800 ಪಂಗಡಗಳಿವೆ. ಅಂತೆಯೇ ಕೊಡವ ಬುಡಕಟ್ಟು ಕುಲ ಒಂದು ಧರ್ಮವಲ್ಲ. ಆ ಕಾರಣಕ್ಕೆ ಹಿಂದು ಧರ್ಮವನ್ನು ನಿರಾಕರಿಸುವುದೂ ಇಲ್ಲ. ಇಲ್ಲಿ ಹಿಂದುತ್ವದ ಸಾಮ್ಯತೆಯೂ ಇದೆ. ಕೆಲವೊಂದರಲ್ಲಿ ಹೋಲಿಕೆ ಇದೆ ಮತ್ತು ಕೆಲವೊಂದರಲ್ಲಿ ಹೋಲಿಕೆಯಿಲ್ಲದೆ ವಿಶಿಷ್ಟತೆ ಮತ್ತು ಅನನ್ಯತೆ ಇದೆ. ಹಾಗಾಗಿ ಹಿಂದು ಹೌದೋ-ಅಲ್ಲ ಎನ್ನುವುದನ್ನು ಚರ್ಚಿಸುವ ಅವಶ್ಯಕತೆ ಇಲ್ಲ. ಉದಾಹರಣೆಗೆ ಆದಿಶಂಕರಾಚಾರ್ಯರು ಹುಟ್ಟುಹಾಕಿದ ಅಧ್ವೈತ ಮತ ಶೈವ ಧರ್ಮವಾಗಿದ್ದು ಅವರು ಎಲ್ಲಿಯೂ ಹಿಂದೂ ಧರ್ಮವೆಂದು ಹೇಳಲಿಲ್ಲ ಅಥವಾ ಹಿಂದೂ ಧರ್ಮವನ್ನು ನಿರಾಕರಿಸಲೂ ಇಲ್ಲ. ಆದ್ದರಿಂದ ಈ ಎಲ್ಲಾ ಧರ್ಮಗಳು ಹಿಂದು ಧರ್ಮವೆನ್ನುವ ವಟವೃಕ್ಷದಿಂದ ಟಿಸಿಲೊಡೆದು ವಿಭಿನ್ನ ಧರ್ಮವಾಗಿ ಹೊರಹೊಮ್ಮಿವೆ. ಉದಾಹರಣೆಗೆ ವೃಕ್ಷಬೀಜ ನ್ಯಾಯವಿದ್ದಂತೆ. ವೃಕ್ಷದಿಂದ ಬೀಜವಾಯಿತೋ ಅಥವಾ ಬೀಜದಿಂದ ವೃಕ್ಷವಾಯಿತೋ ಎನ್ನುವುದನ್ನು ಇಲ್ಲಿ ವಿವರಿಸಲಾಗದು. ಅದೇ ರೀತಿ ಹಿಂದೂ ಧರ್ಮದಿಂದ ಈ ಎಲ್ಲಾ ಧರ್ಮಗಳು ಉದ್ಭವಿಸಿದವೋ ಅಥವಾ ಎಲ್ಲಾ ಧರ್ಮಗಳು ಒಟ್ಟುಗೂಡಿ ಹಿಂದೂ ಧರ್ಮವಾಯಿತೋ ಎನ್ನುವುದು ಒಂದು ಬಿಡಿಸಲಾಗದ ಒಗಟು. ಆದ್ದರಿಂದ ಕೊಡವರು ಪ್ರತ್ಯೇಕ ಧರ್ಮವೆಂದು ಬೂಟಾಟಿಕೆ ಮೆರೆಯುವ ಬದಲು ಕೊಡವ ಬುಡಕಟ್ಟು ನಿರ್ಜಾತಿ-ನಿರ್ಧರ್ಮ ಕುಲವೆಂದು ಸಂವಿಧಾನಿಕ ಮಾನ್ಯತೆ ಪಡೆಯುವುದು ಬುದ್ದಿವಂತಿಕೆಯಾಗಿದೆ.