ವೀರಾಜಪೇಟೆ, ಆ. 7: ವೀರಾಜಪೇಟೆ ತೆಲುಗರ ಬೀದಿಯಲ್ಲಿರುವ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಆಟಿ ಮಾಸದ ಅಂಗವಾಗಿ ಪೂಜೋತ್ಸವ ಹಾಗೂ ವರ ಮಹಾಲಕ್ಷ್ಮಿ ಉತ್ಸವ ಜರುಗಿತು. ದೇವಾಲಯಗಳಲ್ಲಿ ಬೆಳಗಿನಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಪೂಜಾ ಸಾಂಪ್ರದಾಯಿಕ ವಿಧಿ ವಿಧಾನಗಳು ನೆರವೇರಿತು.

ಇಲ್ಲಿನ ತೆಲುಗರ ಬೀದಿಯಲ್ಲಿರುವ ಅಂಗಾಳ ಪರಮೇಶ್ವರಿ ದೇವಾಲಯ ದಲ್ಲಿಯೂ ಅಂಗಾಳಮ್ಮ ದೇವಿಗೆ ವರ ಮಹಾಲಕ್ಷ್ಮಿ ಹಾಗೂ ಆಟಿ ಮಾಸದ ಪೂಜೆ ನಡೆದವು.

ಅಪರಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಎರಡು ದೇವಸ್ಥಾನಗಳ ದೇವಿಯ ಪೂಜಾ ಕಾರ್ಯಕ್ರಮಕ್ಕೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

ಮಾರಿಯಮ್ಮ ದೇವಾಲಯದಲ್ಲಿ ಆಟಿ ಮಾಸದ ಪೂಜೋತ್ಸವ ಜುಲೈ 21ರ ಶುಕ್ರವಾರದಿಂದ ಆರಂಭ ಗೊಂಡಿದ್ದು ಮೂರು ಶುಕ್ರವಾರಗಳ ಪೂಜಾ ಸೇವೆಯ ನಂತರ ತಾ. 11ರ ರಂದು ಕೊನೆಯ ಆಟಿ ಪೂಜೆಯು ನಡೆಯಲಿರುವದಾಗಿ ಆಡಳಿತ ಮಂಡಳಿ ತಿಳಿಸಿದೆ.