ಮಡಿಕೇರಿ, ಆ. 8: ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದ್ದರೂ, ವ್ಯಕ್ತಿಯೊಬ್ಬರಿಂದ ಖರೀದಿಸಿ ಆಕ್ರಮಿಸಿಕೊಂಡಿದ್ದ ಕೋಪಟ್ಟಿ ಮಲೆಯಲ್ಲಿನ ಕೋಟಿ ಗಟ್ಟಲೆ ಮೌಲ್ಯದ ನೂರಾರು ಏಕರೆ ಜಾಗವನ್ನು ಅರಣ್ಯ ಇಲಾಖೆ ಬಿಗಿ ಬಂದೋಬಸ್ತ್‍ನೊಂದಿಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ. 1990ರಲ್ಲಿ ನಡೆದಿದ್ದ ಜಾಗ ಖರೀದಿಗೆ ಸಂಬಂಧಿಸಿದಂತೆ ಆ ಜಾಗ ಮೀಸಲು ಅರಣ್ಯವೆಂದು ಪ್ರತಿಪಾದಿಸಿ ಕಾನೂನು ಹೋರಾಟಕ್ಕಿಳಿದಿತ್ತು. ಎಲ್ಲೆಡೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣ ಸುಮಾರು 27 ವರ್ಷಗಳ ಬಳಿಕ ಅಂತ್ಯ ಕಂಡಿದೆ.