ನಾಪೆÇೀಕ್ಲು, ಆ. 8: ನಾಪೆÇೀಕ್ಲು ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳ ಅಡ್ಡದಿಡ್ಡಿ ನಿಲುಗಡೆಯಿಂದ ನಾಗರಿಕರಿಗೆ ನಡೆದಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೂಕ್ತ ಸಂಚಾರಿ ವ್ಯವಸ್ಥೆ ಇಲ್ಲ್ಲದಿರುವದೇ ಮುಖ್ಯ ಕಾರಣ ನಗರದಲ್ಲಿ ಪೊಲೀಸರನ್ನು ನೇಮಿಸದೇ ಹೋಂ ಗಾರ್ಡ್ ಮಹಿಳಾ ಸಿಬ್ಬಂದಿಯೊಬ್ಬರನ್ನು ನೇಮಿಸಿರುವದು ಎಷ್ಟು ಸಮಂಜಸ. ಇವರಿಂದ ಸಂಚಾರ ನಿಯಂತ್ರಿಸಲು ಸಾಧ್ಯವೇ, ಇವರ ಮಾತನ್ನು ಕೇಳುವ ವಾಹನ ಚಾಲಕ, ಮಾಲೀಕರು ಇದ್ದಾರೆಯೇ ಎಂದು ನಾಗರಿಕರು ಪ್ರಶ್ನಿಸುವಂತಾಗಿದೆ. ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಸುಮಾರು 200 ಆಟೋ ರಿಕ್ಷಾ, 100ಕ್ಕೂ ಅಧಿಕ ಜೀಪು, ಮತ್ತಿತರ ಬಾಡಿಗೆ ವಾಹನಗಳು ಮತ್ತು ನಗರಕ್ಕೆ ಬರುತ್ತಿರುವ ಸುಮಾರು 50 ಕ್ಕೂ ಅಧಿಕ ಬಸ್‍ಗಳು, ಸ್ವಂತ ವಾಹನಗಳ ಸಂಖ್ಯೆ ಹೇಳತ್ತಿರದು. ನಾಪೆÇೀಕ್ಲು ನಗರದಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ಇದೆ, ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ನಗರದ ರಸ್ತೆಗಳು ಕಿರಿದಾಗಿರು ವದರಿಂದಾಗಿ ಇಲ್ಲಿ ನಿಲುಗಡೆಗೆ ತೊಂದರೆಯಾಗಿದೆ. ಅಲ್ಲದೆ ಬಸ್ ನಿಲ್ದಾಣ ಇಲ್ಲದಿರುವದರಿಂದ ಬಸ್‍ಗಳು ನಗರದ ಕೇಂದ್ರ ಗ್ರಾಮ ಪಂಚಾಯಿತಿ ಎದುರಿನಲ್ಲಿ ಜನರನ್ನು ಇಳಿಸಲು ಮತ್ತು ಹತ್ತಿಸಲು ಗಂಟೆಗಟ್ಟಲೇ ನಿಲ್ಲಿಸುವದರಿಂದ ಇಲ್ಲಿ ಸಮಸ್ಯೆ ಮಾಮೂಲಿಯಾಗಿದೆ. ಮಾರುಕಟ್ಟೆ ಬಳಿಯಲ್ಲಿ ವಿಶಾಲ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸ ಲಾಗಿದ್ದು, ಇದಕ್ಕಾಗಿ ಜಾಗವನ್ನು ನಾಪೆÇೀಕ್ಲು ಗ್ರಾಮ ಪಂಚಾಯಿತಿ ಕಾದಿರಿಸಿತ್ತು. ಇದರ ಭೂಮಿ ಪೂಜೆ ಯನ್ನು ನಾಮುಂದು, ತಾಮುಂದು ಎಂದು ರಾಜಕೀಯ ಮುಖಂಡರು ನೆರವೇರಿಸಿ ವರ್ಷಗಳೇ ಕಳೆದಿದೆ. ಆದರೆ ಜನರಿಗೆ ಬರೀ ಭರವಸೆ ಉಳಿದಿದೆ. ನಗರದಲ್ಲಿ ಅಧಿಕ ಆಟೋ ರಿಕ್ಷಾಗಳಿದ್ದು, ನಿಲುಗಡೆಗೆ ನಿಲ್ದಾಣ ಇಲ್ಲದಿರುವದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಕೇವಲ 30 ರಿಂದ 40 ಆಟೋ ರಿಕ್ಷಾಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಾಕಿ ಇರುವ ಆಟೋ ರಿಕ್ಷಾಗಳು ನೆಲೆ ಇಲ್ಲದೆ ನಗರದಲ್ಲಿ ಸಂಚರಿಸುತ್ತಿವೆ. ಇವುಗಳಲ್ಲಿ ಸರಿಯಾದ ದಾಖಲಾತಿ ಇಲ್ಲದ ಆಟೋ ರಿಕ್ಷಾಗಳ ಸಂಖ್ಯೆ ಅರ್ಧದಷ್ಟಿವೆ. ಕೇಳುವವರೇ ಇಲ್ಲ ಎಂದು ನಾಗರಿಕರು ದೂರಿದ್ದಾರೆ. ಆಟೋ ರಿಕ್ಷಾ ನಿಲುಗಡೆಗೆ ಜಾಗವನ್ನು ಗುರುತಿಸಿದ್ದರೂ ವಾಹನ ಮಾಲೀಕರು ತಮ್ಮ ವಾಹನಗಳನ್ನು ಅಡ್ಡಾ ದಿಡ್ಡಿಯಾಗಿ ನಿಲ್ಲಿಸುವದು ಸಮಸ್ಯೆಗೆ ಕಾರಣವಾಗಿದೆ. ಇರುವ ಜಾಗದಲ್ಲಿ ತಿಂಗಳ 15 ದಿನ ಬಲ ಬದಿಯಲ್ಲಿ ಮತ್ತು 15 ದಿನ ರಸ್ತೆಯ ಎಡ ಬದಿಯಲ್ಲಿ ನಿಲುಗಡೆಗೆ ವ್ಯವಸ್ಥೆ ಇದ್ದರೂ ಕೆಲವರು ಎರಡೂ ಬದಿಯಲ್ಲಿ ವಾಹನ ನಿಲ್ಲಿಸಿ ಸಮಸ್ಯೆಗೆ ಕಾರಣವಾಗುತ್ತಾರೆ. ಈ ಬಗ್ಗೆ ನೂತನ ಠಾಣಾಧಿಕಾರಿಗಳು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಲು ಕಠಿಣ ಕ್ರಮ ಕೈಗೊಳ್ಳಬೇಕೆಂಬದು ನಾಗರಿಕರ ಆಗ್ರಹವಾಗಿದೆ.

ಬಸ್ ನಿಲ್ದಾಣಕ್ಕೆ ಒತ್ತಾಯ: ನಗರದ ಮಾರುಕಟ್ಟೆ ಬಳಿಯಲ್ಲಿ ಬಸ್ ನಿಲ್ದಾಣಕ್ಕಾಗಿ ಜಾಗವನ್ನು ಕಾದಿರಿಸಿದ್ದು. ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಭೂಮಿಪೂಜೆ ಮಾಡಿ ಇದಕ್ಕಾಗಿ ಸರಕಾರದಿಂದ 3 ವರ್ಷಗಳ ಹಿಂದೆ ರೂ. 15 ಲಕ್ಷ ಮಂಜೂ ರಾಗಿದ್ದರೂ ಕಾಮಗಾರಿಯನ್ನು ಕೈಗೊಳ್ಳದೆ ಇದ್ದುದರಿಂದ ಹಣ ಸರಕಾರಕ್ಕೆ ವಾಪಸು ಆಗಿರುತ್ತದೆ. ಸರಕಾರ, ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರುಗಳು ಇದರ ಬಗ್ಗೆ ಗಮನ ಹರಿಸಬೇಕಿದೆ ಅದಕ್ಕಾಗಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಕೂಡಲೇ ಈ ಬಗ್ಗೆ ಮನವಿಯನ್ನು ಸಲ್ಲಿಸಿ ಟ್ರಾಫಿಕ್ ಜಾಮ್ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳಲು ಕೂಡಲೆ ಬಸ್ ನಿಲ್ದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.