ಮಡಿಕೇರಿ, ಆ. 9: ವಿಶ್ವ ಆದಿಮ ಸಂಜಾತ ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ ಪ್ರಯುಕ್ತ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಯಿತು.

ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 340, 342ನೇ ವಿಧಿ ಪ್ರಕಾರ ಮೀಸಲಾತಿ ನೀಡಬೇಕು, ಕೊಡವ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಬೇಕು, ಕೊಡವ ಲ್ಯಾಂಡ್‍ಗೆ ಸ್ವಾಯತ್ತತೆ ನೀಡಬೇಕು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು, ಕೊಡವ ಬುಡಕಟ್ಟು ಕುಲವನ್ನು ವಿಶ್ವಸಂಸ್ಥೆಯ ಯುನೆಸ್ಕೋದ ಇಂಟ್ಯಾಜಿಬೆಲ್ ಕಲ್ಚರಲ್ ಪಟ್ಟಿಗೆ ಸೇರಿಸಬೇಕೆಂದು ಸೇರಿದಂತೆ ಒಟ್ಟು 13 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಕೇಂದ್ರದ ಸಚಿವರುಗಳಿಗೆ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಧರಣಿಯ ನೇತೃತ್ವವನ್ನು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ವಹಿಸಿದ್ದರು. ಕಲಿಯಂಡ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬಲ್ಲಚಂಡ ಟಿಟ್ಟು, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಐತೀಚಂಡ ಭೀಮಣಿ, ನಂದಿನೆರವಂಡ ವಿಜು, ಮಣವಟ್ಟಿರ ಸ್ವರೂಪ್, ಮಣವಟ್ಟಿರ ಶಿವಣಿ, ನೆರ್ಪಂಡ ಜಿನ್ನು, ಮಣವಟ್ಟಿರ ನಂದ, ಕಲಿಯಂಡ ಮೀನ, ಮೊಣ್ಣಂಡ ಕಾರ್ಯಪ್ಪ, ಅಪ್ಪಚ್ಚಿರ ರೀನ, ನೆರವಂಡ ಕಿರಣ್, ಕೂಪದಿರ ಸಾಬು, ಪುಲ್ಲೆರ ಕಾಳಪ್ಪ, ಕಿರಿಯಮಾಡ ಶರೀನ್ ಮತ್ತು ಬೊಟ್ಟಂಗಡ ಗಿರೀಶ್ ಪಾಲ್ಗೊಂಡಿದ್ದರು.