ಮಡಿಕೇರಿ, ಆ. 9: ಕುಂಜಿಲ ಕಕ್ಕಬೆ ಗ್ರಾ.ಪಂ. ವ್ಯಾಪ್ತಿಯ ವಾರ್ಡ್ ಸಭೆಯು ತಾ. 10 ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸದಸ್ಯ ಭರತ್ ಪೂವಣ್ಣ ಅಧ್ಯಕ್ಷತೆಯಲ್ಲಿ ಅಲ್ಲಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆಯಲಿದೆ. ಅಲ್ಲಿನ ಕೆ.ಪಿ. ಬಾಣೆ ಸಭಾಂಗಣದಲ್ಲಿ ಅಪರಾಹ್ನ 2.30ಕ್ಕೆ ಸದಸ್ಯ ಮೂಸ ಅಧ್ಯಕ್ಷತೆಯಲ್ಲಿ ಆ ಭಾಗದ ವಾರ್ಡ್ ಸಭೆ ನಡೆಯಲಿದೆ.
ನಾಲಡಿ ವಾರ್ಡ್ ಸಭೆಯು ಸದಸ್ಯೆ ಬೋಜಕ್ಕಿ ಅಧ್ಯಕ್ಷತೆಯಲ್ಲಿ ತಾ. 11 ರಂದು ಪೂರ್ವಾಹ್ನ 11 ಗಂಟೆಗೆ ಅಂಬಲ ಶಾಲಾ ಸಭಾಂಗಣ, 2.30ಕ್ಕೆ ಮರಂದೋಡ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸದಸ್ಯ ರಮೇಶ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ತಾ. 16 ರಂದು 11 ಗಂಟೆಗೆ ಯವಕಪಾಡಿ ವಾರ್ಡ್ ಸಭೆ ವಿಎಸ್‍ಎಸ್‍ಎನ್ ಕಕ್ಕಬೆ ಸಭಾಂಗಣದಲ್ಲಿ ಸದಸ್ಯ ವಿಜು ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.