ಮಡಿಕೇರಿ, ಆ. 8: ಡೆಂಘೀ ಖಾಯಿಲೆಗೆ ತುತ್ತಾಗಿ ನಗರದ ವ್ಯಾಪಾರಿಯೋರ್ವರು ದುರ್ಮರಣ ಕ್ಕೀಡಾದ ಘಟನೆ ಇಂದು ನಡೆದಿದೆ.ನಗರದ ಹಿಲ್ ರಸ್ತೆ ನಿವಾಸಿ ವ್ಯಾಪಾರಿ ಹಬೀಬ್ ಬಾಬಾ ಎಂಬವರೇ ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ವಾರದ ಹಿಂದೆ ತಮಿಳುನಾಡಿಗೆ ತೆರಳಿದ್ದ ಅವರು ಹಿಂತಿರುಗುವಾಗ ಜ್ವರಕ್ಕೆ ತುತ್ತಾಗಿದ್ದು, ನಿನ್ನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಡೆಂಘೀ ಖಾಯಿಲೆಗೆ ತುತ್ತಾಗಿರುವ ಬಗ್ಗೆ ಮಾಹಿತಿಯಿತು. ಚಿಕಿತ್ಸೆ ನೀಡಿದ್ದಾರೆ. ಇಂದು ಬೆಳಿಗ್ಗೆ ಬಿ.ಪಿ. ಕ್ಷೀಣಿಸಿದ್ದು, ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಗೆ ತಲುಪಿ
(ಮೊದಲ ಪುಟದಿಂದ) ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಹಬೀಬ್ ಬಾಬಾ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ತಾ. 9ರಂದು ನಗರದ ಈದ್ಗಾ ಮೈದಾನದಲ್ಲಿ ನಡೆಯಲಿದೆ. ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಬೀಬ್ ಬಾಬಾ ನಗರ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಸಂತಾಪ : ಅವರು ನಿಧನರಾದ ಹಿನ್ನೆಲೆ ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್ ಸಂತಾಪ ವ್ಯಕ್ತಪಡಿಸಿದ್ದಾರೆ.