ಮಡಿಕೇರಿ, ಆ. 8: ದುಷ್ಟ ಶಕ್ತಿಗಳನ್ನು ಸಂಹಾರ ಮಾಡಿದ ಶಿಷ್ಟ ಶಕ್ತಿಗಳ ಪ್ರತೀಕವಾಗಿ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ನಾಡ ಹಬ್ಬವೆಂದೇ ಖ್ಯಾತಿವೆತ್ತಿರುವ ದಸರಾ ಉತ್ಸವ ದೊಳಗೂ ರಾಜಕೀಯ ನುಸುಳಿದೆ ಯೆಂದರೆ ರಾಜಕಾರಣದ ಕಬಂದ ಬಾಹು ಎಲ್ಲಿಯವರೆಗೆ ಚಾಚಿ ಕೊಂಡಿದೆಯೆಂಬ ಮನದಟ್ಟಾಗುತ್ತದೆ. ದಸರಾ ಎಂದರೆ ದೇವತಾ ಕಾರ್ಯ ವೆಂಬ ಮನೋಭಾವ ದೊಂದಿಗೆ ಅಚರಿಸಲ್ಪಡುತ್ತಿದ್ದ ಕಾಲ ಮಾಯವಾಗಿ ಎಲ್ಲವೂ ರಾಜಕೀಯದ ವ್ಯವಸ್ಥೆ ಯೊಳಗಡೆ ಇರಬೇಕೆಂಬ ಕೀಳು ಮನೋಭಾವ ಬಂದಿರುವದಂತೂ ಖೇದಕರ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ದಶಮಂಟಪಗಳ ಸಮಿತಿ ಕೂಡ ದೇವತಾ ಕೈಂಕರ್ಯ ವನ್ನು ಮರೆತು ರಾಜಕೀಯ ದಾಳಕ್ಕೆ ಬಲಿಯಾಗಿರುವದು ವಿಪರ್ಯಾಸವೇ ಸರಿ...!