ಮಡಿಕೇರಿ ಆ. 8: ಗ್ರಾಮೀಣ ಜನರಿಂದಲೇ ದೇಶದ ಅಭಿವೃದ್ಧಿಯಾಗಬೇಕು ಎನ್ನುವ ಚಿಂತನೆಯೊಂದಿಗೆ ದಿಲ್ಲಿಯಲ್ಲಿದ್ದ ಅಧಿಕಾರವನ್ನು ಹಳ್ಳಿಗೆ ಹಸ್ತಾಂತರ ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಹೇಳಿದರು.

ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಪೊನ್ನಂಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಗ್ರಾಮ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಸಂವಿಧಾನದ 73 ಮತ್ತು 74ನೇ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇದು ಕಾಂಗ್ರೆಸ್‍ನ ಕೊಡುಗೆಯಾಗಿದೆ. ಈ ಬಗ್ಗೆ ಅರಿವು ಮೂಡಿಸುವದು ಕಾಂಗ್ರೆಸ್ ಕಾರ್ಯಕರ್ತರ ಹೊಣೆಗಾರಿಕೆ ಎಂದು ತಿಳಿಸಿದರು.

ಪಂಚಾಯಿತಿ ಸದಸ್ಯರು ಜನವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳು ಸಮರ್ಪಕವಾಗಿ ನಡೆಯುವಂತೆ ಜಾಗೃತಿ ವಹಿಸಬೇಕೆಂದು ತೆನ್ನಿರ ಮೈನಾ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು ವಹಿಸಿದ್ದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷರಾದ ಜಿ.ಆರ್. ಪುಷ್ಪಲತಾ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕಡೇಮಾಡ ಕುಸುಮಾ, ಜಿ.ಪಂ. ಸದಸ್ಯೆ ಪಂಕಜಾ, ಶ್ರೀಜಾ, ತಾ.ಪಂ. ಸದಸ್ಯರಾದ ಆಶಾ ಜೇಮ್ಸ್, ಮಮಿತಾ ಮನೋಜ್, ಆಶಾ, ಸುಳ್ಳಿಮಾಡ ಭವಾನಿ, ರೇವತಿ ಪರಮೇಶ್ವರ್, ಥೆರೇಸಾ ವಿಕ್ರಮ್, ಯು.ಪಿ ಸರಸ್ವತಿ, ಉಷಾ, ತುಳಸಿ ಕಾರ್ಯಪ್ಪ, ರೂಪ ಭೀಮಯ್ಯ, ಮಮತ ನರೇಂದ್ರ, ಮಂಜುಳಾ, ಸರಸು ಮುತ್ತಪ್ಪ, ಜಾನಕಿ ದೇವಯ್ಯ, ಚೋಂದಮ್ಮ, ಜಯ, ಶೋಭಾರಾಣಿ, ವಿ.ಎಸ್. ಮಮತಾ, ಮಂಜುಳಾ ಸುರೇಶ್, ಕೋಳೆರ ಭಾರತಿ ಕಾಳಯ್ಯ, ಹೆಚ್.ಸಿ. ಜ್ಯೋತಿ, ಶ್ಯಾಮಲ ಚಿಣ್ಣಸ್ವಾಮಿ, ಗೀತಾ ನಂಜಪ್ಪ, ತೀತೀರ ಮೇರಿ ಪೂಣಚ್ಚ ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.