ಮಡಿಕೇರಿ, ಆ. 10: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2016-17ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ತಾ. 11 ರಂದು (ಇಂದು) ನಗರದ ಕೊಡಗು ಗೌಡ ಸಮಾಜದಲ್ಲಿ ನಡೆಯಲಿದೆ.

ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆರು ಮಂದಿ ಹಿರಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ತಿಳಿಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅರಣ್ಯ ಸಚಿವರಾದ ರಮಾನಾಥ್ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹಿರಿಯ ಸಾಹಿತಿಗಳಾದ ಮಹಾಬಲೇಶ್ವರ ಭಟ್ ಪ್ರಧಾನ ಭಾಷಣ ಮಾಡಲಿದ್ದು, ಶಾಸಕ ಕೆ.ಜಿ. ಬೋಪಯ್ಯ ಅವರು ಐದು ಪುಸ್ತಕಗಳನ್ನು ಬಿಡುಗಡೆ ಮಾಡಲಿ ದ್ದಾರೆ. ಅರೆಭಾಷೆ ಸಂಪ್ರದಾಯದ ವಸ್ತ್ರವನ್ನು ಶಾಸಕ ಅಪ್ಪಚ್ಚು ರಂಜನ್ ವಿತರಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಂಎಲ್‍ಸಿಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶು ಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆÀ ಪದ್ಮಿನಿ ಪೆÇನ್ನಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಹಾಗೂ ಜಿಲ್ಲಾ ಪತ್ರಕರ್ತರ ಸಂಘÀದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉಪಸ್ಥಿತರಿರುವರು.

ಪ್ರಶಸ್ತಿ ಪಡೆಯುವವರು: ಅರೆಭಾಷೆ ಜನಪದ ಸಂಶೋಧನೆಗಾಗಿ ಡಾ. ಪÀÅರುಷೋತ್ತಮ ಬಿಳಿಮಲೆ, ಅರೆಭಾಷೆ ಜನಪದ ಸಾಹಿತ್ಯಕ್ಕಾಗಿ ಕುಲ್ಲಚ್ಚನ ಕಾರ್ಯಪ್ಪ, ಅರೆಭಾಷೆ ಸಾಹಿತ್ಯಕ್ಕಾಗಿ ಎಂ.ಜಿ. ಕಾವೇರಮ್ಮ ಹಾಗೂ ಪಟ್ಟಡ ಪ್ರಭಾಕರ್, ಅರೆಭಾಷೆ ಸಂಗೀತ ಅಮ್ಮಾಜಿರ ಪೆÀÇನ್ನಪ್ಪ, ಅರೆಭಾಷೆ ಜನಪದ ಸಂಸ್ಕøತಿಯ ಸಾಧನೆಗೆ ಕೇಪು ಅಜಿಲ ಅವರಿಗೆ ಪ್ರಶಸ್ತಿ ಪ್ರದಾನವಾಗಲಿದೆ.

5 ಪುಸ್ತಕಗಳು: ಐದು ಪುಸ್ತಕಗಳನ್ನು ಹೊರತರಲಾಗುತ್ತಿದ್ದು, ಅರೆಭಾಷೆ ಸಂಸ್ಕøತಿ ಪರಿಚಯದ “ಸಂಸ್ಕøತಿ ಸಂಪತ್ತು”, ಅರೆಭಾಷೆ ಸಂಪ್ರದಾಯ ಅಡುಗೆ ವಿಧಾನದ “ರುಚಿ”, ಅರೆಭಾಷೆ ಕವನ ಸಂಕಲನ ಹೊದ್ದೆಟ್ಟಿ ಭವಾನಿಶಂಕರ್ ರಚಿಸಿರುವ “ಅನುಭವ ಧಾರೆ”, ಬೈತಡ್ಕ ಜಾನಕಿ ಬೆಳ್ಯಪ್ಪ ರಚಿಸಿರುವ ನಾಟಕ ಸಂಕಲನ ‘ಬೆಳ್ಳಿ ಚುಕ್ಕೆಗ’ ಹಾಗೂ ಏಳನೇ ಆವೃತ್ತಿಯ “ಹಿಂಗಾರ”ವನ್ನು ಬಿಡುಗಡೆ ಮಾಡಲಾಗುವದೆಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು.

ತಾ. 13 ರಂದು ತಮ್ಮ ಅಧಿಕಾರದ ಅವಧಿ ಪÀÇರ್ಣಗೊಳ್ಳಲಿದ್ದು, ಒಟ್ಟು 86 ಕಾರ್ಯಕ್ರಮಗಳನ್ನು ಅಕಾಡೆಮಿ ಪೂರ್ಣಗೊಳಿಸಿದಂತ್ತಾಗಿದೆ. ತಾ. 13 ರಂದು ಕೂಡ ವಿಶೇಷ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತಿದೆ ಎಂದರು.

ಅರೆಭಾಷೆ ಅಕಾಡೆಮಿ 2012ರಲ್ಲಿ ಅಸ್ತಿತ್ವಕ್ಕೆ ಬಂದ ಕಾರಣದಿಂದ ವಾರ್ಷಿಕ ತಲಾ 30 ರಿಂದ 45 ಲಕ್ಷದವರೆಗೆ ಅನುದಾನ ಬಿಡುಗಡೆಯಾಗುತ್ತಿತ್ತು. ಕಾರ್ಯಕ್ರಮದ ಪ್ರಗತಿಯನ್ನು ಅವಲೋಕಿಸಿ ಪ್ರಸ್ತುತ ವರ್ಷ ಸರ್ಕಾರ ರೂ. 60 ಲಕ್ಷ ಅನುದಾನ ನೀಡಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ, ಕಾರ್ಯಕ್ರಮದ ಸಂಚಾಲಕ ಮಂದ್ರೀರ ಮೋಹನ್ ದಾಸ್, ಸದಸ್ಯರುಗಳಾದ ಕುಡೆಕಲ್ ಸಂತೋಷ್ ಹಾಗೂ ಡಾ. ಕೋರನ ಸರಸ್ವತಿ ಪ್ರಕಾಶ್ ಉಪಸ್ಥಿತರಿದ್ದರು.