ನಾಪೆÇೀಕ್ಲು, ಆ. 10: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿದ ಬೊಳಕಾಟ್, ಕೊಲಾಟ್, ಉಮ್ಮತಾಟ್, ಉರುಟಿಕೊಟ್ಟ್ ಆಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಕಳೆದ ಮೂರು ವರ್ಷಗಳ ಕಾಲ ವಿವಿಧೆಡೆಗಳಲ್ಲಿ ನಡೆಸಲಾದ ಸಾಂಸ್ಕøತಿಕ ಸಮಾರಂಭಗಳು ಸಂಪನ್ನಗೊಂಡಂತಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಕೊಡವ ಸಾಹಿತ್ಯ ಅಕಾಡೆಮಿ ಎಂದರೆ ಕೊಡವರಿಗೆ ಮಾತ್ರ ಎಂಬ ಅಭಿಪ್ರಾಯ ಕೆಲವರಲ್ಲಿದೆ. ಜಿಲ್ಲೆಯ ಎಲ್ಲಾ ಕೊಡವ ಮೂಲ ನಿವಾಸಿಗಳು, ಕೊಡವ ಭಾಷಿಕರು ಸೇರಿದಂತೆ ಜಿಲ್ಲೆಯಲ್ಲಿ ವಾಸಿಸುವ ಎಲ್ಲರೂ ಕೊಡವ ಸಾಹಿತ್ಯ ಅಕಾಡೆಮಿಗೆ ಒಳಪಟ್ಟವರೆ, ಕೊಡವ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಜಿಲ್ಲೆಯ ಎಲ್ಲಾ ಜನರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಮೂರು ವರ್ಷಗಳಲ್ಲಿ ಕೊಡವ ಮೇಳ, ಬೇಲ್ ನಮ್ಮೆ, ಆಟ್, ಪಾಟ್, ಪಡಿಪು ಮತ್ತಿತರ 105 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ ತೃಪ್ತಿ ಇದೆ ಎಂದು ನೆನಪಿಸಿಕೊಂಡರು.
(ಮೊದಲ ಪುಟದಿಂದ) ಮುಖ್ಯ ಅತಿಥಿಯಾಗಿ ಆಗಮಿಸಿದ ನಾಪೆÇೀಕ್ಲು ಕೊಡವ ಸಮಾಜದ ಕಾರ್ಯದರ್ಶಿ ಮಂಡೀರ ರಾಜಪ್ಪ ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಆಟ್, ಪಾಟ್, ಪಡಿಪು ನಡೆಸಿರುವದು ಶ್ಲಾಘನೀಯ. ಇದರಿಂದ ಎಲ್ಲಾ ಗ್ರಾಮಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು ಉತ್ಸಾಹದಿಂದ ಭಾಗವಹಿಸುವಂತಾಗಿದೆ ಎಂದರು.
ಕಾಲೇಜು ಪ್ರಾಂಶುಪಾಲೆ ಡಾ. ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡಗಿನ ಎಲ್ಲಾ ಕೊಡವ ಸಮಾಜಗಳು ಅದ್ಭುತವಾದ ಸಂಸ್ಕøತಿಯನ್ನು ಹೊಂದಿವೆ. ಈ ಸಂಸ್ಕøತಿಯನ್ನು ಯುವ ಜನರು ಉಳಿಸಿ, ಬೆಳೆಸಲುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳಿಂದ ಬೊಳಕಾಟ್, ಕೊಲಾಟ್, ಉಮ್ಮತಾಟ್, ಉರುಟಿಕೊಟ್ಟ್ ಆಟ್ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ತರಬೇತುದಾರರಾದ ಬೊಳ್ಳಂಡ ದೇವಿ ದೇವಯ್ಯ, ಕಂಗಾಂಡ ಜಾಲಿ ಪೂವಪ್ಪ, ಚೌರೀರ ಪ್ರಕಾಶ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಕುಡಿಯರ ಬೋಪಯ್ಯ ಇದ್ದರು.
ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಉಪನ್ಯಾಸಕಿಯರಾದ ಗೌರಮ್ಮ ಸ್ವಾಗತಿಸಿ, ಲೀನಾ ನಿರೂಪಿಸಿ, ಪೂವಮ್ಮ ವಂದಿಸಿದರು. -ಪ್ರಭಾಕರ್