ಮಡಿಕೇರಿ ಆ.10 : ಕೂರ್ಗ್ ಡಿಸ್ಟ್ರಿಕ್ಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ಸಂಯುಕ್ತಾಶ್ರಯದಲ್ಲಿ ತಾ. 26 ಮತ್ತು 27 ರಂದು ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರ್ಯಾಂಕಿಂಗ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂರ್ಗ್ ಡಿಸ್ಟ್ರಿಕ್ಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್‍ನ ಜಿಲ್ಲಾಧ್ಯಕ್ಷ ಡಾ| ಮೋಹನ್ ಅಪ್ಪಾಜಿ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಗಿದ್ದ ಸಂಸ್ಥೆಯನ್ನು ರಾಜ್ಯ ಸಂಸ್ಥೆಯ ಸೂಚನೆಯ ಮೇರೆ ‘ಕೂರ್ಗ್ ಡಿಸ್ಟ್ರಿಕ್ಟ್ ಬ್ಯಾಡ್ಮಿಂಟನ್ ಅಸೋಸಿಯೇಷನ್’ ಎಂದು ನೂತನವಾಗಿ ರಚಿಸಿದ್ದು, ಇದರ ಮೂಲಕ ಪ್ರಥಮ ಪಂದ್ಯಾವಳಿಯನ್ನು ನಡೆಸುತ್ತಿರುವದಾಗಿ ತಿಳಿಸಿದರು.
ಪಂದ್ಯಾವಳಿಯಲ್ಲಿ 10, 13, 15, 17 ಮತ್ತು 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ 19 ವರ್ಷದೊಳಗಿನವರಿಗೆ ಮಿಕ್ಸ್‍ಡ್ ಡಬಲ್ಸ್ ಪಂದ್ಯಾವಳಿ, 40, 50 ಮತ್ತು 60 ವರ್ಷ ಮೇಲ್ಪಟ್ಟ ಪÀÅರುಷರು, ಮಹಿಳೆಯರು ಮತ್ತು ಹಿರಿಯರಿಗೆ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾವಳಿ, ಮುಕ್ತ ಸಿಂಗಲ್ಸ್ ಮತ್ತು ಮುಕ್ತ ಮಿಕ್ಸ್‍ಡ್ ಡಬಲ್ಸ್ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವವರು ತರಬೇತುದಾರ ಅರುಣ್ ಪೆಮ್ಮಯ್ಯ ಮೊ.9986152578 ಹಾಗೂ ವಿನೋದ್ ಉತ್ತಪ್ಪ ಮೊ.7795956868ನ್ನು ಸಂಪರ್ಕಿಸಬಹುದಾಗಿದೆ ಎಂದು ಡಾ| ಮೋಹನ್ ಅಪ್ಪಾಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷೆ ಎಂ. ಹೇಮಾ ನಂಜಪ್ಪ, ಸಂಯೋಜಕ ಜೀವನ್, ಸದಸ್ಯರಾದ ಜೀವನ್ ಹಾಗೂ ತರಬೇತುದಾರ ಅರುಣ್ ಪೆಮ್ಮಯ್ಯ ಉಪಸ್ಥಿತರಿದ್ದರು.