ಮಡಿಕೇರಿ,ಆ:10 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್ ಕ್ಲಬ್ ಇವುಗಳ ಸಹಯೋಗದೊಂದಿಗೆ ಭಾಷಾ ಮಾಧ್ಯಮ ಎಂಬ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ವಿಚಾರಗೋಷ್ಠಿ ಹಾಗೂ ಬಹುಭಾಷಾ ಕವಿಗೋಷ್ಠಿ ಏರ್ಪಡಿಸಲಾಗಿದೆ.
ತಾ. 13ರಂದು ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಉದ್ಘಾಟಿಸುವರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ ‘ಮಾತೃಭಾಷೆಗಳು ಮತ್ತು ಮಾಧ್ಯಮ’ ಎಂಬ ವಿಷಯದÀಡಿ ಪ್ರಧಾನ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ವಿಜಯ ಕರ್ನಾಟಕ
(ಮೊದಲ ಪುಟದಿಂದ) ಪ್ರಧಾನ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸುವರು.
ವಿಚಾರಗೋಷ್ಠಿ : ಈ ಸಂಬಂಧ ಏರ್ಪಡಿಸಲಾಗಿರುವ ವಿಚಾರಗೋಷ್ಠಿಯಲ್ಲಿ ‘ಅರೆಭಾಷೆ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ’ ವಿಚಾರವಾಗಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ಹಾಗೂ ‘ಆಡುಭಾಷೆಯಲ್ಲಿ ಅರೆಭಾಷಾ ಸೊಗಡು’ ವಿಚಾರದಲ್ಲಿ ಕಾರ್ಯ, ದೊಡ್ಡವರಲಂಜೆಯ ಸ.ಪ.ಪೂ ಕಾಲೇಜು ಉಪನ್ಯಾಸಕ ಪಟ್ಟಡ ಶಿವಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ.
ಬಹುಭಾಷಾ ಕವಿಗೋಷ್ಠಿ : ವಿವಿಧ ಭಾಷಾ ಅಕಾಡೆಮಿಗಳಿಗೆ ಪ್ರ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಏರ್ಪಡಿಸಲಾಗಿರುವ ಬಹುಭಾಷಾ ಕವಿಗೋಷ್ಠಿಯಲ್ಲಿ ಅರೆಭಾಷೆಯಲ್ಲಿ ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ, ಶಕ್ತಿ ಪತ್ರಿಕೆ ಹಿರಿಯ ಉಪಸಂಪಾದಕ ಕುಡೆಕಲ್ ಸಂತೋಷ್, ಕವಯತ್ರಿ ಪೂಜಾರಿರ ಕೃಪಾ ದೇವರಾಜ್ ಕವನ ವಾಚನ ಮಾಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಸಿದ್ದಾಪುರ ವಿಜಯವಾಣಿ ವರದಿಗಾರ ಎಂ.ಎ. ಅಜೀಜ್, ಸೋಮವಾರಪೇಟೆಯ ಕವಯತ್ರಿ ಕೆ.ಎಸ್. ಕಾಂಚನ, ಕೊಡವ ಭಾಷೆಯಲ್ಲಿ ಕೊಡಗು ವಾರ್ತೆ ಸಂಪಾದಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಹಿರಿಯ ಕವಯತ್ರಿ ಮೊಣ್ಣಂಡ ಶೋಭಾ ಸುಬ್ಬಯ್ಯ, ತುಳುಭಾಷೆಯಲ್ಲಿ ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಕಿಶೋರ್ ರೈ ಕತ್ತಲೆಕಾಡು, ಟಿ.ವಿ9 ಛಾಯಾಗ್ರಾಹಕ ನವೀನ್ ಸುವರ್ಣ, ಬ್ಯಾರಿ ಭಾಷೆಯಲ್ಲಿ ‘ಶಕ್ತಿ’ ಉಪಸಂಪಾದಕ ಎಂ.ಇ. ಮಹಮ್ಮದ್, ಕವಿ ಎಂ.ಎ. ಅಬ್ದುಲ್ಲ, ಕೊಂಕಣಿ ಭಾಷೆಯಲ್ಲಿ ಕವಿ, ಉಪನ್ಯಾಸಕ ಚಾಲ್ಸ್ರ್ಸ್ ಡಿಸೋಜ ಅವರುಗಳು ಕವನ ವಾಚನ ಮಾಡಲಿದ್ದಾರೆ ಎಂದು ಅಕಾಡೆಮಿ ಸದಸ್ಯ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.