ಸೋಮವಾರಪೇಟೆ, ಆ. 12: ಪಟ್ಟಣದಲ್ಲಿ ಆರ್ಎಎಫ್ ಯೋಧರು ಪಥ ಸಂಚಲನ ನಡೆಸಿದರು. ಆರ್ಎಎಫ್ನ ಸಹಾಯಕ ಕಮಾಂಡೆಂಟ್ ರಾಜಇಲಂಭರತ್, ಎಂ.ಎಲ್. ಮೀನಾ, ಇನ್ಸ್ಪೆಕ್ಟರ್ ಕೆ.ಕೆ.ಸುಭಾಷ್, ಇಲ್ಲಿನ ಠಾಣೆಯ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. 45 ಯೋಧರು ಹಾಗೂ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಜ್ಯದಲ್ಲಿ ಶಾಂತಿ ಸುವವ್ಯಸ್ಥೆಗಾಗಿ ಜನರಲ್ಲಿ ಅರಿವು ಮೂಡಿಸಲು ಪಥಸಂಚಲನ ನಡೆಸುತ್ತೇವೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದು ಕಮಾಂಡೆಂಟ್ ರಾಜಇಲಂಭರತ್ ಹೇಳಿದರು.
ಹಿಂದು ಜಾಗರಣಾ ವೇದಿಕೆಯಿಂದ ತಾ. 14ರಂದು ಕುಶಾಲನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಲಿದ್ದು, ಶಾಂತಿ ಸುವ್ಯವಸ್ಥೆಗೆ ಜಾಗೃತಿ ಮೂಡಿಸಲು ಸೋಮವಾರಪೇಟೆ ಪಟ್ಟಣ, ಮಾದಾಪುರ ಹಾಗು ಸುಂಠಿಕೊಪ್ಪದಲ್ಲಿ ಪಥಸಂಚಲ ನಡೆಸಲಾಗಿದೆ ಎಂದು ಸಿಪಿಐ ಪರಶಿವಮೂರ್ತಿ ಹೇಳಿದರು.