ಗೋಣಿಕೊಪ್ಪಲು, ಆ. 11: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಆಗಸ್ಟ್ 14 ರಂದು ಕುಟ್ಟದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಆಯೋಜಿಸಿರುವ ಪಂಜಿನ ಮೆರವಣಿಗೆಯಲ್ಲಿ ಐದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಉದ್ದಪಂಡ ಜಗತ್ ತಿಳಿಸಿದ್ದಾರೆ.

1947 ರ ಮಧ್ಯ ರಾತ್ರಿ ಭರತ ಭೂಮಿ ಹಂಚಿ ಹೋದ ದುರಂತವನ್ನು ನೆನೆದು ಭಾರತದಿಂದ ಬೇರ್ಪಟ್ಟ ಭಾಗಗಳು ಒಂದಾಗಬೇಕೆಂಬ ಆಶಯದೊಂದಿಗೆ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂಜಿನ ಮೆರವಣಿಗೆ ಸಂಜೆ 7 ಗಂಟೆಗೆ ಕುಟ್ಟ ಬಸ್ಸು ನಿಲ್ದಾಣದಿಂದ ಆರಂಭಗೊಂಡು ಕೊಡವ ಸಮಾಜದಲ್ಲಿ ಮುಕ್ತಾಯಗೊಳ್ಳಲಿದೆ. ಸಭಾ ಕಾರ್ಯಕ್ರಮ ರಾತ್ರಿ 8.30 ಗಂಟೆಗೆ ಕೊಡವ ಸಮಾಜದಲ್ಲಿ ನಡೆಯಲಿದೆ. ಕಾಫಿ ಬೆಳೆಗಾರ ಮಚ್ಚಾಮಡ ಡಾಲಿ ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಎಂ. ಟಾಟಾ ಬೋಪಯ್ಯ, ಆರ್.ಎಸ್.ಎಸ್. ಮುಖಂಡ ಮಚ್ಚಾರಂಡ ಮಣಿ ಕಾರ್ಯಪ್ಪ ಹಾಗೂ ಮುಖ್ಯ ಭಾಷಣಕಾರರಾಗಿ ಪ್ರಾಂತ ಪ್ರಮುಖ ರಂಗನಾಥ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬಜರಂಗದಳ ತಾಲೂಕು ಸಂಚಾಲಕ ವಿವೇಕ್ ರೈ ಗೋಷ್ಠಿಯಲ್ಲಿದ್ದರು.