ವೀರಾಜಪೇಟೆ, ಆ. 12: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಬಸ್ಸು ಕಾರ್ಮಿಕರ ಸಂಘದ ವಾರ್ಷಿಕೋತ್ಸವವು ತಾ.19ರಂದು ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ತಂಗುದಾಣದ ಮೇಲಿನ ಕೊಠಡಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್.ಪಿ ದಿನೇಶ್ ನಾಯರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಸ್ಸು ಕಾರ್ಮಿಕರ ಸಂಘಟನೆಯನ್ನು ಕಾನೂನು ಬದ್ಧವಾಗಿ ನೋಂದಾಯಿ ಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಬಸ್ಸು ಕಾರ್ಮಿಕರುಗಳಿಗೆ ನೋಂದಾವಣೆಗೆ ಅವಕಾಶ ನೀಡಲಾಗಿದೆ. ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿ ಹಳೆ ಸದಸ್ಯರುಗಳ ಸದಸ್ಯತ್ವ ನವೀಕರಣ, ಹೊಸ ಸದಸ್ಯರುಗಳ ಸೇರ್ಪಡೆ ಮಾಡಲಾಗುವದು. ಸರ್ಕಾರಗಳಿಂದ ಕಾರ್ಮಿಕರ ಸಂಘಟನೆಗೆ ದೊರೆಯುವ ಎಲ್ಲ ಸೌಲಭ್ಯಗಳು ಸೇರ್ಪಡೆಗೊಳ್ಳುವ ಸದಸ್ಯರುಗಳಿಗೆ ಲಭ್ಯವಾಗಲಿದೆ ಎಂದರು.

ಸಂಘಟನೆಯ ಕಾರ್ಯದರ್ಶಿ ಟಿ.ಎನ್. ಮಂಜುನಾಥ್ ಮಾತನಾಡಿ, ಕಾರ್ಮಿಕರ ಕಲ್ಯಾಣ ಯೋಜನೆಯಡಿಯಲ್ಲಿ ಸರಕಾರದಿಂದ ಆಗಿಂದಾಗ್ಗೆ ಬರುವ ಸೌಲಭ್ಯಗಳೆಲ್ಲವೂ ಸಂಘದ ಸದಸ್ಯರುಗಳಿಗೆ ದೊರೆಯಲಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಬಸ್ಸು ಕಾರ್ಮಿಕರು ಸದಸ್ಯತ್ವ ಕಡ್ಡಾಯವಾಗಿ ಪಡೆದುಕೊಂಡು ಸಂಘಟನೆಯನ್ನು ಬಲಿಷ್ಠಗೊಳಿಸ ಬೇಕು. ಸದಸ್ಯತ್ವ ಬಯಸುವವರು ಹೆಚ್ಚಿನ ಮಾಹಿತಿಗಾಗಿ 9481070567 ನ್ನು ಸಂಪರ್ಕಿಸ ಬಹುದು. ಸಂಘದ ವತಿಯಿಂದ ತಾ. 15ರಂದು ಸ್ವಾತಂತ್ರ್ಯೋತ್ಸವವನ್ನು ಖಾಸಗಿ ಬಸ್ಸು ನಿಲ್ದಾಣದಲ್ಲಿ ಆಚರಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಲೋಕೇಶ್ ರೈ, ಮೋಹನ್ ಅಪ್ಪು ಇತರರು ಉಪಸ್ಥಿತರಿದ್ದರು.