ಸುಂಟಿಕೊಪ್ಪ, ಆ. 11: ಸಹೋದರಿಯರಿಗೆ ರಕ್ಷಣೆ ನೀಡುವದು ಸಹೋದರನ ಕರ್ತವ್ಯವಾಗಿದೆ ಎಂದು ಸುಂಟಿಕೊಪ್ಪ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ ಹೇಳಿದರು.

ಇಲ್ಲಿನ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೊದಲು ಉತ್ತರ ಭಾರತಕ್ಕೆ ಮಾತ್ರ ಹೆಚ್ಚು ಪ್ರಚಲಿತದಲ್ಲಿದ್ದ ರಕ್ಷಾಬಂಧನ ಹಬ್ಬವೂ ಇಂದು ದಕ್ಷಿಣ ಭಾರತಕ್ಕೂ ಪಸರಿಸಿದೆ. ಇಂತಹ ಸಂಘದೊಳಗಿರುವ ಸದಸ್ಯರುಗಳಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸುವಕ್ಕೆ ಇಂತಹ ಆಚರಣೆ ಬಹಳ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್, ರಕ್ಷಾಬಂಧನ ಆಚರಣೆಯಿಂದ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಯಲಿದೆ ಎಂದರು.

ಈ ಸಂದರ್ಭ ದೇಯಿಬೈದೇದಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಅಂಜಲಿ ಯಶೋಧರ ಪೂಜಾರಿ, ಕಾರ್ಯದರ್ಶಿ ಪೂರ್ಣಿಮಾ ರವಿ, ಸಹಕಾರ್ಯದರ್ಶಿ ಜಯಂತಿ ಕೃಷ್ಣಪ್ಪ, ನಾರಾಯಣ ಗುರು ಬಿಲ್ಲ ಸಂಘದ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಎಂ.ಎಸ್. ಸುನಿಲ್, ಸಂಘಟನಾ ಕಾರ್ಯದರ್ಶಿ ಮಿಲನ್, ಸಲಹೆಗಾರರಾದ ಬಾಬು ಪೂಜಾರಿ, ರಮೇಶ್ ಪೂಜಾರಿ, ಶೇಖರ್ ಪೂಜಾರಿ, ಸದಸ್ಯರಾದ ಬಿ.ಕೆ. ಗಿರೀಶ್, ಮೀನಾ, ಸತೀಶ್ ಇತರರು ಇದ್ದರು.