ಮಡಿಕೇರಿ, ಆ. 11: ಕೊಡಗಿನ ಮೂರು ವನ್ಯಧಾಮಗಳನ್ನು ಕೇಂದ್ರ ಪರಿಸರ ಸಚಿವಾಲಯ ಇತ್ತೀಚೆಗೆ ಸೂಕ್ಷ್ಮ ಪರಿಸರ ತಾಣಗಳಾಗಿ ಘೋಷಿಸಿರುವದರ ಪುನರ್ ಪರಿಶೀಲನೆ ಕಷ್ಟ ಸಾಧ್ಯ. ಈಗ ಜಾರಿಗೊಂಡ ಕಾನೂನು ಹಿಂದಿನ ಕ್ರಮಕ್ಕಿಂತ ಉತ್ತಮವಾಗಿದೆ ಎಂದು ಕರ್ನಾಟಕ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಸಮರ್ಥಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಆನೆಗಳ ನಿರಂತರ ಧಾಳಿಗೆ ಕಾಡಿನಲ್ಲಿ ಬೆಳೆಯಲ್ಟಟ್ಟ್ಟಿರುವ ತೇಗ ಮರ ಕಾರಣವಾಗಿದ್ದು ಆನೆಗಳಿಗೆ ಆಹಾರ ಸಿಗುತ್ತಿಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ಸಚಿವರ ಗಮನಕ್ಕೆ ತಂದರು. ಮೊದಲು ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರವಾಗುವ ಮರಗಳನ್ನು ನೆಟ್ಟು ಬೆಳೆಸಿ, ತೇಗದ ಮರಗಳನ್ನು ತೆಗೆದುಹಾಕಿ ಎಂದರು. ಅರಣ್ಯದಲ್ಲಿ ತೇಗದ ಮರ ಕಡಿಯಲು ಕೇಂದ್ರÀ ಅನುಮತಿ ನೀಡುತ್ತಿಲ್ಲ. ನಿಮಗೆ ಸಾಮಥ್ರ್ಯ ಇದ್ದರೆ ಅನುಮತಿ ಕೊಡಿಸಿ ಎಂದು ರಮಾನಾಥ್ ರೈ ಸವಾಲು ಹಾಕಿದರು. ಸರಿಯಾದ ಪ್ರಸ್ತಾವನೆ ಕೊಡಿ ನಾನು ಅನುಮತಿ ಕೊಡಿಸುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸವಾಲು ಸ್ವೀಕರಿಸಿದರು. ಅರಣ್ಯ ಸಚಿವ ರಮಾನಾಥ್ ರೈ ಅರೆ ಭಾಷೆ ಅಕಾಡೆಮಿಯ ಸಭೆಗೆ ಇಂದು ನಗರಕ್ಕೆ ಆಗಮಿಸಿದ್ದು ಪತ್ರಕರ್ತರು ಪ್ರತ್ಯೇಕವಾಗಿ ಅವರನ್ನು ಮಾತನಾಡಿಸಿದಾಗ ಅವರು ಪ್ರತಿಕ್ರಿಯಿಸುತ್ತಿದ್ದರು. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಜೊತೆಗಿದ್ದರು.

ಜಿಲ್ಲೆಯ ಕಾಡಾನೆ ಹಾವಳಿ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ನೀವೇ ಏನು ಮಾಡಬೇಕು ಎಂದು ಹೇಳಿ ಎಂದು ಸಚಿವರು ಕೇಳಿದ ಪ್ರಸಂಗವೂ ನಡೆಯಿತು.

(ಮೊದಲ ಪುಟದಿಂದ) ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಂದ ನಂತರ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ನಮಗೆ ಇರುವದು ಕಡಿಮೆ ಅನುದಾನ, ಅದರಲ್ಲಿ ಏನು ಮಾಡಬೇಕು ಅದನ್ನು ಮಾಡುತ್ತಿದ್ದೇವೆ ಎಂದು ಅರಣ್ಯ ಸಚಿವರು ಹೇಳಿದರು.

ಕೊಡಗು ಜಿಲ್ಲೆಯ ಮೂರು ಅರಣ್ಯ ವನ್ಯಧಾಮಗಳಾದ ತಲಕಾವೇರಿ, ಬ್ರಹ್ಮಗಿರಿ ಹಾಗೂ ಪುಷ್ಪಗಿರಿ ತಾಣಗಳನ್ನು ಕೇಂದ್ರ ಸರಕಾರ ಸೂಕ್ಷ್ಮ ಪರಿಸರ ತಾಣಗಳಾಗಿ ಘೋಷಿಸಿರುವ ಕುರಿತು ಪ್ರಶ್ನಿಸಿದಾಗ ಕೇಂದ್ರದ ಈ ಕ್ರಮವನ್ನು ಸಚಿವ ರಮಾನಾಥ್ ರೈ ಸಮರ್ಥಿಸಿದರು. ರಾಷ್ಟ್ರೀಯ ನೀತಿಯನ್ನು ಪಾಲಿಸಲೇಬೇಕಾಗಿದೆ, ಸೂಕ್ಷ್ಮ ಪರಿಸರ ತಾಣ ಘೋಷಣೆಗೂ ಮುನ್ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ ಪ್ರದೇಶದ ವ್ಯಾಪ್ತಿ ಆಯಾ ಅಭಯಾರಣ್ಯಗಳ ಸುತ್ತ 10 ಕಿ.ಮೀ. ಇದ್ದುದು ಇದೀಗ ಸೂಕ್ಷ್ಮ ಪರಿಸರ ತಾಣದ ಘೋಷಣೆ ಬಳಿಕ 1 ಕಿ.ಮೀಗೆ ಮಿತಿಗೊಂಡಿದೆ. ಪರಿಸರದ ರಕ್ಷಣೆ ದೃಷ್ಟ್ಟಿಯಿಂದ, ಅರಣ್ಯ ಉಳಿಯಬೇಕಾದರೆ, ಮಳೆಯ ಪ್ರಮಾಣ ಕುಸಿಯದಿರಬೇಕಾದರೆ ಇದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಆದರೆ, ತಲಕಾವೇರಿ ಅಭಯಾರಣ್ಯ ಪ್ರದೇಶ ಕೇರಳ ರಾಜ್ಯಕ್ಕೂ ವಿಸ್ತರಿಸಿದ್ದು ಕೇರಳದ ಭಾಗದಲ್ಲಿ ಶೂನ್ಯ ಕಿ.ಮೀ. ಮಾಡಲಾಗಿದೆ. ಅಲ್ಲಿನ ಜನ ಈ ಹಿಂದೆ ಪ್ರತಿಭಟನೆ ಮಾಡಿದ್ದನ್ನು ಪರಿಗಣಿಸಿ ಅದನ್ನು ಕೇಂದ್ರ ಸರಕಾರ ಮಾನ್ಯ ಮಾಡಿದೆ. ಆದರೆÀ, ಕರ್ನಾಟಕದ ಕೊಡಗಿನ ಭಾಗದಲ್ಲಿ ಮಾತ್ರ 1 ಕಿ.ಮೀ. ವ್ಯಾಪ್ತಿಯನ್ನು ಹೇರಲಾಗಿದೆಯಲ್ಲ ಎಂದು ಪ್ರತಕರ್ತರು ಪ್ರಶ್ನಿಸಿದಾಗ ತನಗೂ ಸೂಕ್ಷ್ಮ ಪರಿಸರ ತಾಣದಲ್ಲಿ 1. ಕಿ.ಮೀ. ನಿಂದ ಶೂನ್ಯಕ್ಕೆ ಇಳಿಸುವಂತೆ ಮನವಿಗಳು ಬರುತ್ತಿವೆ. ಆದರೆ, ಇದು ಕಷ್ಟ ಸಾಧ್ಯವಾದರೂ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚಿಸಲಾಗುವದು ಎಂದು ಸಚಿವರು ನುಡಿದರು. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ, ಬೆಳೆ ನಷ್ಟಕ್ಕೆ ಪರಿಹಾರ ಹೆಚ್ಚಿಸಲಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಕೊಡಗು ಜಿಲ್ಲೆಯಲ್ಲಿ ಆನೆ ಕಂದಕ ನಿರ್ಮಾಣ ಹಾಗೂ ರೈಲ್ವೆ ಪಟ್ಟಿ ಬೇಲಿ ನಿರ್ಮಾಣ ಕಾರ್ಯ ನಡೆದಿದೆ. ಕಾಡಾನೆ ಧಾಳಿಯ ಶಾಶ್ವತ ಪರಿಹಾರದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸ ಲಾಗುತ್ತಿದೆ. ರೈಲ್ವೆ ಹಳೆಯ ಕಂಬಿಯನ್ನು ಕೇಂದ್ರ ಸರ್ಕಾರ ಕಡಿಮೆ ಹಣಕ್ಕೆ ನೀಡಬೇಕೆಂಬ ಬೇಡಿಕೆ ರಾಜ್ಯ ಸರ್ಕಾರದ್ದು. ಕೊಡಗು ಜಿಲ್ಲೆಯಲ್ಲಿ 5 ಕಿಲೋ ಮೀಟರ್ ಉದ್ದದ ರೈಲ್ವೆಯ ಹಳೆ ಪಟ್ಟಿಯನ್ನು ಬೇಲಿ ನಿರ್ಮಾಣಕ್ಕೆ ಬಳಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.