ನಾಪೆÉÇೀಕ್ಲು, ಆ. 11: ನಾಪೆÇೀಕ್ಲು ಪಟ್ಟಣದಲ್ಲಿ ಸಂಚಾರಿ ಕಾನೂನು ಉ¯್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ನಾಪೆÉÇೀಕ್ಲು ಪೆÇಲೀಸ್ ಠಾಣಾಧಿಕಾರಿ ಎಂ. ನಂಜುಂಡ ಸ್ವಾಮಿ ಎಚ್ಚರಿಸಿದ್ದಾರೆ.

ಸ್ಥಳೀಯ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸಂಘದ ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಈಗಾಗಲೇ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಿಂಗಳ 15 ದಿನಗಳು ಎಡಭಾಗ ಮತ್ತು ಬಲಭಾಗದಲ್ಲಿ ಎರಡು ಚಕ್ರ ವಾಹನ ಮತ್ತು ಖಾಸಗಿ ವಾಹನ ನಿಲುಗಡೆಗೆ ಅವಕಾಶವನ್ನು ನೀಡಲಾಗಿದೆ. ಪಿಕ್ ಅಪ್, ಜೀಪು, ಮಜ್ದಾ, ಟ್ರ್ಯಾಕ್ಟರ್ ಸೇರಿದಂತೆ ಬಾಡಿಗೆ ವಾಹನಗಳನ್ನು ಹಳೇ ಅಂಚೆ ಕಚೇರಿಯಿಂದ ಹಳೇ ತಾಲೂಕು ರಸ್ತೆಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮವನ್ನು ಎಲ್ಲಾ ವಾಹನ ಚಾಲಕರು ಮಾಲೀಕರು ಪಾಲಿಸಬೇಕು. ತಪ್ಪಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವದು ಎಂದು ಸೂಚನೆ ನೀಡಿದರು.

ಇಲ್ಲಿ ಬಸ್ ನಿಲ್ದಾಣ ಇಲ್ಲದಿರು ವದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಈಗ ಗ್ರಾ.ಪಂ. ಕಟ್ಟಡದ ಎದುರು ಭಾಗವನ್ನು ಬಸ್ ನಿಲ್ದಾಣ ವನ್ನಾಗಿಸಲಾಗಿದೆ. ಇಲ್ಲಿ ಸ್ಥಳಾವಕಾಶ ಕಡಿಮೆಯಿರುವ ಕಾರಣ ಜನರನ್ನು ಹತ್ತಿಸಲು ಇಳಿಸಲು 10 ನಿಮಿಷಗಳ ಕಾಲಾವಕಾಶ ಮಾತ್ರ ನೀಡಲಾಗುತ್ತದೆ. ಬಸ್ ಚಾಲಕರು ಮತ್ತು ನಿರ್ವಾಹಕರು ಸಮಯವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.

ಆಟೋ ರಿಕ್ಷಾ ಚಾಲಕರು ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸಬೇಕೆಂದು ಹೇಳಿದ ಅವರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ರಿಕ್ಷಾ ದಾಖಲಾತಿಯ ಕರಡು ಪ್ರತಿ, ಡ್ರೈವಿಂಗ್ ಲೈಸನ್ಸ್‍ನ್ನು ಯಾವಾಗಲು ಹೊಂದಿರಬೇಕು ಎಂದು ಸೂಚಿಸಿದರು. ಪಟ್ಟಣದ ಅಂಗಡಿ ಮಾಲೀಕರು ತಮಗೆ ಸೇರಿದ ವಾಹಗಳನ್ನು ಪ್ರತೀ ದಿನ ತಮ್ಮ ಅಂಗಡಿ ಮುಂದೆ ನಿಲ್ಲಿಸಲು ಅವಕಾಶ ನೀಡುವದಿಲ್ಲ. ಇದರಿಂದ ಸಾರ್ವಜನಿಕರ ವಾಹನ ನಿಲುಗಡೆಗೆ ಅವಕಾಶವಿಲ್ಲದಂತಾಗಿದೆ. ಇವರ ವಿರುದ್ಧವು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮದ ಬಗ್ಗೆ ಚಿಂತಿಸಲಾಗುವದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೂವೇರ ವಿನು ಪೂಣಚ್ಚ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್, ಉಪಾಧ್ಯಕ್ಷ ರೇಣು ಕೇಶ್, ಕಾರ್ಯದರ್ಶಿ ಮನೋಹರ್, ಕಾರ್ಯಾಧ್ಯಕ್ಷ ಸುರಿ ಸುಬ್ರಮಣಿ, ಗೌರವಾಧ್ಯಕ್ಷ ಮಂಜು, ಸಹ ಕಾರ್ಯದರ್ಶಿ ದಿನೇಶ್, ಮಾಜಿ ಅಧ್ಯಕ್ಷ ಕೆ.ಎಂ. ರಮೇಶ್ ಇದ್ದರು.