ಮಡಿಕೇರಿ, ಆ. 11: ಕಳೆದ 2016 ಮತ್ತು 2017ನೇ ಸಾಲಿನ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ, ಅಕಾಡೆಮಿ ಹೊರ ತಂದಿರುವ ಪುಸ್ತಕಗಳ ಬಿಡುಗಡೆ, ಗ್ರಾಮೀಣ ಕಲಾತಂq Àಗಳಿಗೆ (ಸಾಂಪ್ರದಾಯಿಕ ದಿರಿಸು, ಕುಪ್ಪಸ, ದಟ್ಟಿ, ರುಮಾಲ್) ವಿತರಣಾ ಸಮಾರಂಭ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಅರ್ಥ ಪೂರ್ಣವಾಗಿ ಆಯೋಜನೆ ಗೊಂಡಿತ್ತು. ಅರೆಭಾಷೆ ಜನಾಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಚೇತನಗಳನ್ನು ಈ ಸಂದರ್ಭ ಗೌರವಿಸಿದ ಕೀರ್ತಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯದಾಗಿತ್ತು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಈ ಅವಧಿಯ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ಮೂರು ವರ್ಷದ ಅಧಿಕಾರಾವಧಿ ಮುಗಿಯುವ ಹಂತದಲ್ಲಿದ್ದು, ಎಲ್ಲಾ ಸದಸ್ಯರ ಸಹಾಕಾರದೊಂದಿಗೆ ಅಕಾಡೆಮಿ ಧ್ಯೇಯೋದ್ದೇಶಗಳನ್ನು ಈಡೇರಿ ಸುವಲ್ಲಿ ಯಶಸ್ವಿಯಾಗಿದೆ. ಅರೆಭಾಷೆ ಸಂಸ್ಕøತಿ, ಸಾಹಿತ್ಯ, ಆಚಾರ - ವಿಚಾರ, ಅರೆಭಾಷೆ ಜನಪದ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜಿಲ್ಲೆ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆದಿದೆ.

ಅಕಾಡೆಮಿಯ ಕಾರ್ಯ ಯೋಜನೆಯಂತೆ ಗೌರವ ಪ್ರಶಸ್ತಿ ಪ್ರದಾನ ರಾಜ್ಯಮಟ್ಟದ್ದಾಗಿದ್ದು, ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಪೂರ್ಣಕುಂಭ ಸ್ವಾಗತ, ಒಡ್ಡೋಲಗದೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ಅರೆಭಾಷೆ ಜನಾಂಗದ ಸಾಧಕರನ್ನೂ ಗೌರವಿಸುವದರೊಂದಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು. ಅರೆಭಾಷೆ ಜನಪದ ಸಂಶೋಧನೆ ಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆ, ಅರೆಭಾಷೆ ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಕುಲ್ಲಚನ ಕಾರ್ಯಪ್ಪ, ಅರೆಭಾಷೆ ಸಾಹಿತ್ಯ ಕ್ಷೇತ್ರದಲ್ಲಿ ಎಂ.ಜಿ. ಕಾವೇರಮ್ಮ ಮತ್ತು ಪಟ್ಟಡ ಪ್ರಭಾಕರ, ಅರೆಭಾಷೆ ಸಂಗೀತ ಕ್ಷೇತ್ರದಲ್ಲಿ ಅಮ್ಮಾಜೀರ ಪೊನ್ನಪ್ಪ, ಅರೆಭಾಷೆ ಜನಪದ ಸಂಸ್ಕøತಿಯಲ್ಲಿ ಕೇಪು ಅಜಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಹೊರತಂದಿರುವ ಸಂಸ್ಕøತಿ ಸಂಪತ್ತ್, ರುಚಿ, ಹೊದ್ದೆಟ್ಟಿ ಭವಾನಿಶಂಕರ್ ಅವರ ಅರೆಭಾಷೆ ಕವನ ಸಂಕಲನ ಅನುಭವಧಾರೆ, ಬೈತಡ್ಕ ಜಾನಕಿ ಬೆಳ್ಳಿಯಪ್ಪ ಅವರ ಅರೆಭಾಷೆ ನಾಟಕ ಸಂಕಲನ ಬೆಳ್ಳಿ ಚುಕ್ಕೆಗ ಹಾಗೂ ಹಿಂಗಾರ 7ನೇ ಆವೃತ್ತಿಯನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆಗೊಳಿಸಿದರು.

ಭಾಷೆಯ ಬಳಕೆಯಿಲ್ಲದಿದ್ದಲ್ಲಿ ನಶಿಸುವ ಆತಂಕ

ಭಾರತ ದೇಶ ವಿಶಿಷ್ಟ ಪರಂಪರೆ ಹೊಂದಿರುವ ದೇಶವಾಗಿದೆ. ಅನೇಕ ಜಾತಿ, ಧರ್ಮ, ಭಾಷೆಯ ಜನ ದೇಶದಲ್ಲಿ ನೆಲೆಸಿದ್ದಾರೆ.

(ಮೊದಲ ಪುಟದಿಂದ) ಪ್ರೀತಿ ಹಾಗೂ ಭಾವೈಕ್ಯತೆಯ ಬದುಕು ದೇಶದಲ್ಲಿ ಕಾಣಬಹುದು. ಆದರೆ ಭಾಷೆಯ ಬಳಕೆ ಇಲ್ಲದಿದ್ದಲ್ಲಿ ಆ ಭಾಷೆ ನಶಿಸುವ ಆತಂಕವಿದ್ದು, ಮಾತೃಭಾಷೆ, ಸಂಸ್ಕøತಿ ಆಚಾರ - ವಿಚಾರವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ರಾಜ್ಯ ಅರಣ್ಯ ಸಚಿವ ರಮಾನಾಥ್ ರೈ ಅಭಿಪ್ರಾಯಪಟ್ಟರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿಯೂ ಬೇರೆ ಬೇರೆ ಭಾಷೆಯನ್ನು ಮಾತನಾಡುವ ಜನರಿದ್ದಾರೆ. ಭಾಷೆಯ ಒಳಗಿರುವ ಜನಪದ ಸಾಹಿತ್ಯ, ಸಂಸ್ಕøತಿ, ಆಚಾರ - ವಿಚಾರವನ್ನು ಉಳಿಸುವದ ರೊಂದಿಗೆ ಎಲ್ಲರೊಂದಿಗೆ ಪ್ರೀತಿಯ ಸಂಬಂಧ ಇರಬೇಕು. ಅಕಾಡೆಮಿ ಗಳು ಬೇರೆ ಬೇರೆ ಭಾಷೆ, ಬಾಂಧವ್ಯದೊಂದಿಗೆ ಕೊಂಡಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಅರೆಭಾಷೆ ಅಕಾಡೆಮಿ ರಚನೆಯಾದ ನಂತರ ಅನೇಕ ಸಾಹಿತ್ಯಗಳು ಹೊರಬಂದಿವೆ. ಸಂಸ್ಕøತಿ, ಭಾಷೆ ಉಳಿಸುವ ಕೆಲಸ ಅಕಾಡೆಮಿಯಿಂದ ಆಗುತ್ತಿದ್ದು, ಅಕಾಡೆಮಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಒಂದು ಸಂಸ್ಥೆ ಉಳಿಯಬೇಕಾದರೆ ಆಗ್ಗಿಂದ್ದಾಗೆ ಸಭೆ, ಸಮಾರಂಭ ನಡೆಯಬೇಕು. ಜನಾಂಗದ ಆಚಾರ- ವಿಚಾರ, ಸಂಸ್ಕøತಿ ಉಳಿಸುವದ ರೊಂದಿಗೆ ಬೆಳೆಸುವ ಕೆಲಸ ಆಗಬೇಕಾಗಿದೆ. ಅದರೊಂದಿಗೆ ಸಂಸ್ಕøತಿ, ಆಚಾರ - ವಿಚಾರವನ್ನು ದೇಶದುದ್ದಗಲಕ್ಕೂ ಪಸರಿಸುವ ಕಾರ್ಯ ಆಗಬೇಕೆಂದು ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹರೀಶ್ ಬೋಪಣ್ಣ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಕಾಡೆಮಿಯ ಕಾರ್ಯಕ್ರಮವನ್ನು ಶ್ಲಾಘಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ತನ್ನ ಅಧಿಕಾರಾವಧಿಯಲ್ಲಿ ಅಕಾಡೆಮಿ ವತಿಯಿಂದ ಆದ ಕಾರ್ಯಕ್ರಮ ಸಮಾಧಾನ ತಂದಿದ್ದರೂ ಪೂರ್ಣ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇಲ್ಲ ಎಂದ ಅವರು ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿ ಧನ್ಯವಾದವಿತ್ತರು. ಅಕಾಡೆಮಿ ಸದಸ್ಯ, ಕಾರ್ಯಕ್ರಮ ಸಂಚಾಲಕ ರಾದ ಮಂದ್ರಿರ ಮೋಹನ್ ದಾಸ್, ಸದಾನಂದ ಮಾವಾಜಿ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯರುಗಳಾದ ಡಾ. ಪೂವಪ್ಪ ಕಣಿಯೂರ್, ಪಿ.ಸಿ. ಕಾರ್ಯಪ್ಪ, ಬಿ.ಸಿ. ವಸಂತ, ಯಶವಂತ ಕುಡೆಕಲ್, ಅಣ್ಣೋಜಿಗೌಡ ಸನ್ಮಾನಿತರನ್ನು ಪರಿಚಯಿಸಿದರು. ಕಡ್ಲೇರ ತುಳಸಿ ಮೋಹನ್ ಪ್ರಾರ್ಥಿಸಿ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿ ದರು. ಅಕಾಡೆಮಿ ಸದಸ್ಯರುಗಳಾದ ಡಾ. ಕೋರನ ಸರಸ್ವತಿ, ಸಂಗೀತ ರವಿರಾಜ್ ಕಾರ್ಯಕ್ರಮ ನಿರೂಪಿಸಿದರೆ, ಕುಡೆಕಲ್ ಸಂತೋಷ್ ವಂದಿಸಿದರು.