ಮಡಿಕೇರಿ, ಆ. 11: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು 104ನೇ ಕಾರ್ಯಕ್ರಮವನ್ನು ತಾ. 12ರಂದು (ಇಂದು) ಕೊಡವ ಸಮಾಜ, ಮಡಿಕೇರಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದೆ. ಬೆಳಿಗ್ಗೆ 10-30 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಹಿರಿಯ ಸಾಹಿತಿ, ಬಾಚರಣಿಯಂಡ ಅಪ್ಪಣ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮತ್ತು ಸಂಯೋಜಕ ಡಾ. ಕೋಡಿರ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಪ್ಪನೆರವಂಡ Zುಮ್ಮಿ ದೇವಯ್ಯ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಈ. ಚಿಣ್ಣಪ್ಪ, ಸಾಹಿತಿ ಡಾ. ಕಾಳಿಮಾಡ ಶಿವಪ್ಪ, ಪೇರೂರು ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಧ್ಯಾಯ ಚಿರೋಟಿರ ತಮ್ಮಯ್ಯ, ಸಾಹಿತಿ ನಾಗೇಶ್ ಕಾಲೂರು, ಸಾಹಿತಿ ಮತ್ತು ಹೆಸರಾಂತ ಹಾಡುಗಾರ ಚೆಕ್ಕೇರ ತ್ಯಾಗರಾಜ್, ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಅಧ್ಯಕ್ಷೆ ಕವಿತ ಬೊಳ್ಳಮ್ಮ, ಮೈಸೂರು ರಂಗಾಯಣದ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಇವರುಗಳು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ವಿಜಯಕರ್ನಾಟಕ ಪ್ರಧಾನ ವರದಿಗಾರ ಐತಿಚಂಡ ರಮೇಶ್ ಉತ್ತಪ್ಪ ಸಂಶೋಧನೆ ಮಾಡಿದ ಕೊಡಗಿನ ಕಾಳಿದಾಸ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ಜೀವನ ಚರಿತ್ರೆಯ ಕೃತಿ ಬಿಡುಗಡೆ ಮತ್ತು ಕೊಡವ- ಕೊಡವ ಭಾಷಿಕ ಜನಾಂಗಗಳಾದ 13 ವಿಷಯಗಳನ್ನು ಒಳಗೊಂಡ ಸಮಗ್ರ ದಾಖಲೀಕರಣ ಬಿಡುಗಡೆ, ಹಾಗೂ ಡಾ. ಬಿದ್ದಂಡ ರೇಖಾ ಚಿಣ್ಣಪ್ಪ ಸಂಶೋಧನೆ ಮಾಡಿದ “ಸ್ವಾತಂತ್ರ ಪೂರ್ವ ಕೊಡಗಿನ ರಾಜಕೀಯ ಪರಿಸ್ಥಿತಿ (1947) ಮತ್ತು ಕಂಬೇಯಂಡ ಡೀನಾ ಬೋಜಣ್ಣ ಸಂಶೋಧನೆ ಮಾಡಿದ “ಕೊಡಗಿನ ಮುಂದ್‍ಮನೆ ಕೈಮಡ ಮಂದ್‍ಗಳ ಶ್ರೀಮಂತ ಪರಂಪರೆ” ಎಂಬ 2 ಸಂಶೋಧನಾ ಪ್ರಬಂಧಗಳು ಬಿಡುಗಡೆಗೊಳ್ಳಲಿದೆ. ಹಾಗೂ ಮಚ್ಚಮಾಡ ಗೋಪಿ ಸೀತಮ್ಮ ಬರೆದ “ನೀತಿ ಜೊಪ್ಪೆ” ಪುಸ್ತಕ ಬಿಡುಗಡೆ ಮತ್ತು ಪರಿಕರ ವಿತರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹೆಸರಾಂತ ಕವಿಗಳಿಂದ ಮತ್ತು ಹಾಡುಗಾರರಿಂದ ಅಪ್ಪಚ್ಚಕವಿಯ ಬಗ್ಗೆ ಕವನ ವಾಚನ ಮತ್ತು ಹಾಡು ಕಾರ್ಯಕ್ರಮವಿರುತ್ತದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.