ಕುಶಾಲನಗರ, ಆ. 11: ಕರ್ನಾಟಕ ಜನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಗುಡ್ಡೆಹೊಸೂರು ಸಮೀಪದ ದೊಡ್ಡಬೆಟಗೇರಿ ಗ್ರಾಮದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಬಿ.ಎ. ಸೃಜನ್, ಬಿ.ಆರ್. ಅರುಣ, ಆಸಿರ್, ಮಕ್ಕಳ ವಿಭಾಗದ ಓಟದಲ್ಲಿ ವಿಜೇತರಾದರು. ವಿದ್ಯಾರ್ಥಿನಿಯರ ವಿಭಾಗದಲ್ಲಿ ಎ. ಸುಚಿತ್ರ, ಬಿ.ಎಂ. ಅಂಜು, ಬಿ.ಎಂ. ರಕ್ಷಿತಾ ಲೆಮನ್ ಸ್ಪೂನ್ ಸ್ಪರ್ಧೆಯಲ್ಲಿ ಜಯಗಳಿಸಿದರು. ಬಿ.ಎಸ್. ಗಣ್ಯ, ಬಿ.ಎಂ. ಅಂಜು, ಕೆ. ದೇವಿ, ಸೃಜನ್ ಮತ್ತು ಆಸಿರ್ ವಿಜೇತರಾದರು.
ಮಕ್ಕಳ ಹಗ್ಗಜಗ್ಗಾಟ ವಿಭಾಗದಲ್ಲಿ ಸೃಜನ್, ಅಜಯ್, ಆಸಿಕ್, ಪುನೀತ್, ಅರುಣ ತಂಡ ಗೆಲುವು ಸಾಧಿಸಿತು.
ಹಿರಿಯ ವಿಭಾಗದ ಗದ್ದೆ ಓಟದಲ್ಲಿ ಅಣ್ಣಯ್ಯ ಪ್ರಥಮ, ಶುಭಶೇಖರ್ ದ್ವಿತೀಯ, ಮಹಿಳಾ ವಿಭಾಗದಲ್ಲಿ ಪರಿಷತ್ನ ಎಂ.ಎ. ರುಬೀನಾ ಪ್ರಥಮ, ಡಿ. ಸೃಜಲಾದೇವಿ ದ್ವಿತೀಯ ಸ್ಥಾನ, ಹಗ್ಗಜಗ್ಗಾಟದಲ್ಲಿ ರುಬೀನಾ ತಂಡ ವಿಜೇತರಾದರು.
ಹಿರಿಯರ ಸಾಲಿನಲ್ಲಿ ಪಾಲ್ಗೊಂಡ ಪರಿಷತ್ನ ರಾಣು ಅಪ್ಪಣ್ಣ ಅವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಸೋಮವಾರ ಪೇಟೆ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದೊಡ್ಡಬೆಟಗೇರಿಯ ಕೃಷಿಕರು ಹಾಗೂ ಗದ್ದೆ ಮಾಲೀಕ ಬಿ.ಡಿ. ವೀರೇಂದ್ರ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ, ಮುಖ್ಯೋಪಾಧ್ಯಾಯ ಸಣ್ಣಸ್ವಾಮಿ, ಪರಿಷತ್ ಪ್ರಮುಖರಾದ ಡಿ.ಆರ್. ಸೋಮಶೇಖರ್, ಐನಮಂಡ ಗಣಪತಿ, ಕುಡೆಕಲ್ ಗಣೇಶ್ ಬಹುಮಾನ ವಿತರಿಸಿದರು.