ನಾಪೋಕ್ಲು, ಆ. 12: ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾನುವಾರಗಳಂದು ತಾಲೂಕು ಕೇಂದ್ರಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಉದ್ದೇಶಿಸಿರುವದನ್ನು ನಾಪೆÇೀಕ್ಲು ವ್ಯಾಪ್ತಿಯ ಎಲ್ಲಾ ಪೆÇೀಷಕರು ವಿರೋಧಿಸಿದ್ದಾರೆ.

ಈ ಬಗ್ಗೆ ಕಾಲೇಜಿನಲ್ಲಿ ಕರೆಯಲಾಗಿದ್ದ ಪೆÇೀಷಕರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಕೂಲಿ ಕಾರ್ಮಿಕರು, ದಲಿತರು, ಬಡವರು ಮಾತ್ರ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ. ವಾರಕ್ಕೊಮ್ಮೆ ತಮ್ಮ ಮಕ್ಕಳನ್ನು ಮಡಿಕೇರಿಗೆ ಕಳುಹಿಸಲು ಅವರಿಗೆ ಆರ್ಥಿಕ ಸಹಾಯ ನೀಡುವವರು ಯಾರು ಎಂದು ಪ್ರಶ್ನಿಸಿದರು.

ನಾಪೆÇೀಕ್ಲು ಕಾಲೇಜಿಗೆ ಒಳಪಟ್ಟ ಅಯ್ಯಂಗೇರಿ, ಪೇರೂರು, ನೆಲಜಿ, ಕಕ್ಕಬೆ, ನಾಲಡಿ, ಯವಕಪಾಡಿ, ಚೆಯ್ಯಂಡಾಣೆ, ಚೇಲಾವರ, ಪಾರಾಣೆ, ಪಾಲೂರು, ಹೊದವಾಡ ಗಳು ಸಂಪೂರ್ಣ ಗ್ರಾಮೀಣ ಪ್ರದೇಶ ಗಳಾಗಿವೆ. ಇಲ್ಲಿಂದ ನಾಪೆÇೀಕ್ಲು ಕಾಲೇಜಿಗೆ ತೆರಳಲು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಡ ಬೇಕಾಗಿದೆ. ಇವರಿಂದ ಸರಿಯಾದ ಸಮಯಕ್ಕೆ ಮಡಿಕೇರಿ ತಲುಪಲು ಸಾಧ್ಯವೇ ಎಂಬದನ್ನು ಅಧಿಕಾರಿಗಳು ಅರಿಯಬೇಕಾಗಿದೆ ಎಂದಿದ್ದಾರೆ.

ನಾಪೆÇೀಕ್ಲು ಕಾಲೇಜಿನಲ್ಲಿ ಉತ್ತಮವಾಗಿ ಬೋಧಿಸಲಾಗುತ್ತಿದೆ. ಉತ್ತಮ ಫಲಿತಾಂಶವೂ ಬಂದಿದೆ. ಮಕ್ಕಳಿಗೆ ಹೆಚ್ಚಾಗಿ ಕಲಿಸಬೇಕೆಂದರೆ ಶನಿವಾರ ಪೂರ್ತಿ ದಿನ ತರಗತಿ ತೆಗೆದು ಕೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ ಯಾವದೇ ಕಾರಣಕ್ಕೂ ಮಡಿಕೇರಿಗೆ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿರುವ ಪೋಷಕರು ಈ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ಈ ಬಗ್ಗೆ ಲಿಖಿತ ಪತ್ರವನ್ನು ಸಲ್ಲಿಸಿದ್ದಾರೆ.