ವೀರಾಜಪೇಟೆ, ಆ. 12: ಒಂದು ಜನಾಂಗ ಸಾಂಪ್ರದಾಯಿಕವಾಗಿ ಬೆಳವಣಿಗೆ ಹೊಂದ ಬೇಕಾದರೆ ಭಾಷೆ, ಸಂಸ್ಕøತಿ,ಪದ್ದತಿ, ಪರಂಪರೆಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಕಾವೇರಿ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಎ.ಸಿ ಗಣಪತಿ ಹೇಳಿದರು.
ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕೊಡಗು ಜಿಲ್ಲಾ ಅಂತರ ಕಾಲೇಜುಗಳ ಸಾಂಪ್ರದಾಯಿಕ ಕ್ರೀಡೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕøತಿ ಪದ್ದತಿ ಪರಂಪರೆಗಳು ಜೀವನದ ಮುಖ್ಯ ಬೇರು. ಕೃಷಿ ಪ್ರಧಾನ ಕೊಡಗು ಜಿಲ್ಲೆಯಲ್ಲಿ ಎ¯್ಲ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ನಮ್ಮ ಸುತ್ತ ಸುತ್ತುತ್ತಿದೆ. ನಮ್ಮ ಹಬ್ಬ ಹರಿದಿನಗಳೆಲ್ಲವು ಕೃಷಿ ಚಟುವಟಿಕೆಗಳಿಗೆ ಸಂಬಂಧಪಡುವದರಿಂದ ಅದನ್ನು ಶಾಶ್ವತವಾಗಿ ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮಂಗಳೂರು ವಿಶ್ವ ವಿದ್ಯಾಲಯದ ಸಹಾಯಕ ಕ್ರೀಡಾ ನಿರ್ದೇಶಕ ಪ್ರಸನ್ನ ಮಾತನಾಡಿ, ಶೈಕ್ಷಣಿಕ ಹಾಗೂ ಕ್ರೀಡೆಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಷ್ಟ್ರೀಯ ಮಟ್ಟದಲ್ಲಿ 20ನೇ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಇಂದಿನ ಆಧುನಿಕ ಹಾಗು ವೈಜ್ಞಾನಿಕ ಯುಗದಲ್ಲಿ ಕಂಪ್ಯೂಟರ್, ಇಂಟರ್‍ನೆಟ್, ಹಾಗೂ ವಾಟ್ಸ್‍ಪ್‍ಗಳಲ್ಲಿ ತಲ್ಲೀನರಾಗಿ ಸಾಂಪ್ರದಾಯಿಕ ಕ್ರೀಡೆಗಳನ್ನು ಮರೆಯುತ್ತಿರುವ ಸಂಧರ್ಭದಲ್ಲಿ ಇಂತಹ ಕ್ರೀಡಾಕೂಟಗಳು ಗತವೈಭವವನ್ನು ನೆನಪಿಸುತ್ತಿದೆ ಎಂದು ಹೇಳಿದರು.
ಕಾವೇರಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ಮಾತನಾಡಿ ಹಿಂದಿನ ಸಾಂಪ್ರದಾಯಿಕ ಕ್ರೀಡೆಗಳೇ ಇತರ ಕ್ರೀಡೆಗಳಿಗೆ ಮಾದರಿ ಎಂದು ಹೇಳಿದರು. ಬಿಟ್ಟಂಗಾಲದ ನಿವೃತ್ತ ಮುಖ್ಯೋಪಾಧ್ಯಾಯ ನಡಿಕೇರಿಯಂಡ ಪಿ. ತಿಮ್ಮಯ್ಯ ಉಪಸ್ಥಿತರಿದ್ದರು. ಸಾಂಪ್ರದಾಯಿಕ ಕ್ರೀಡೆಗಳಾದ ಕಪ್ಪೆಯಾಟ್, ಶಕ್ತಿಕೋಲ್, ತೆಂಗಿನ ಕಾಯಿಗೆ ಕಲ್ಲು ಎಸೆಯುವದು, ತೆಂಗಿನ ಕಾಯಿ ಎಳೆಯುವ ಶಕ್ತಿ ಪ್ರದರ್ಶನ ನಡೆಯಿತು.
ಮಂಗಳೂರು ವಿಶ್ವ ವಿದ್ಯಾಲಯದ ಸಾಂಪ್ರದಾಯಿಕ ಕ್ರೀಡಾ ಕೂಟದಲ್ಲಿ ಕೊಡಗಿನ ಸುಮಾರು 12 ಪದವಿ ಕಾಲೇಜುಗಳು ಭಾಗವಹಿಸಿದ್ದವು.
ಉಪನ್ಯಾಸಕಿ ನಡಿಕೇರಿಯಂಡ ಪ್ರಿಯ ಸ್ವಾಗತಿಸಿದರು, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸೋಮಣ್ಣ ವಂದಿಸಿದರು.
* ಮಂಗಳೂರು ವಿಶ್ವವಿದ್ಯಾನಿಲಯದಿಂದ ಕೊಡಗು ವಲಯದ ಅಂತರ ಕಾಲೇಜು ಸಾಂಪ್ರದಾಯಿಕ ಕ್ರೀಡಾಕೂಟವನ್ನು ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ನಡೆಸಲಾಯಿತು. ಇದರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಇಲ್ಲಿನ ಪುರುಷರ ವಾಲಿಬಾಲ್ ತಂಡವು ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು ಇವರೊಂದಿಗೆ ಪೈನಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ ರನ್ನರ್ಸ್ ಟ್ರೋಫಿಯನ್ನು ಪಡೆದುಕೊಂಡಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಆಕಾಶ್ ತೃತೀಯ ಬಿ.ಎ ಇವರು ಕ್ರಾಸ್ ಕಂಟ್ರಿ ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ತೆಂಗೆ ಪೋರ್ ಪಂದ್ಯದಲ್ಲಿ ಕು.ದೇವಿಕಾ ತೃತೀಯ ಬಿ.ಎ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ.