ಸೋಮವಾರಪೇಟೆ, ಆ. 11: ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಟಿಯಿಲ್ಲ ಎನ್ನುವಂತೆ ಹಲಸಿನ ಹಣ್ಣೊಂದು ಬಾಳೆಗೊನೆಯಂತೆ ರೂಪುಗೊಂಡು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಕಲ್ಕಂದೂರು ಗ್ರಾಮದ ಮುತ್ತಣ್ಣ ಎಂಬವರ ಕಾಫಿ ತೋಟದಲ್ಲಿ ಬೆಳೆದ ಹಲಸಿನ ಹಣ್ಣು, ಬಾಳೆಗೊನೆಯನ್ನು ಹೋಲುವಂತಿದ್ದು ಎಲ್ಲರನ್ನೂ ಚಕಿತಗೊಳಿಸುತ್ತಿದೆ.