ಕುಶಾಲನಗರ, ಆ. 11: ಹುಣಸೂರಿನ ಇ ಚಾನಲ್ ಸಂಸ್ಥೆ ಪ್ರಾಯೋಜಿತ ಡ್ಯಾನ್ಸ್ ಧಮಾಕ ಎಂಬ ರಿಯಾಲಿಟಿ ಶೋ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ತಾ.13 ರಂದು ಆಡಿಷನ್ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ನಿರ್ದೇಶಕರಾದ ಭರತ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರಿನ ಬಿಎಸ್‍ಬಿ ಡ್ಯಾನ್ಸ್ ಕೆಫೆ ಸಹಯೋಗದಲ್ಲಿ ಇ ಚಾನಲ್‍ನಲ್ಲಿ ಮೂಡಿಬರಲಿರುವ ಡ್ಯಾನ್ಸ್ ಧಮಾಕ ರಿಯಾಲಿಟಿ ಶೊನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಯುವ ಪ್ರತಿಭೆಗಳಿಗೆ ಆಡಿಷನ್ ಹಮ್ಮಿಕೊಳ್ಳಲಾಗಿದೆ. ಕುಶಾಲನಗರ, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ ವ್ಯಾಪ್ತಿಯ ಪ್ರತಿಭೆಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, 13 ರಂದು ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಅಂಕೃಷ್ ಹಾಲ್‍ನಲ್ಲಿ ಸೋಲೊ ಡ್ಯಾನ್ಸ್ ಆಡಿಷನ್ ನಡೆಯಲಿದೆ. ಈ ರಿಯಾಲಿಟಿ ಶೋನ ವಿಜೇತರಿಗೆ ಪ್ರಥಮ ಬಹುಮಾನ ರೂ. 55,555 ರೂ. 33,333 ದ್ವಿತೀಯ ಬಹುಮಾನ ನೀಡಲಾಗುವದು. 16 ರಿಂದ 22 ವರ್ಷದ ಒಳಗಿನ ಆಸಕ್ತ ಪ್ರತಿಭೆಗಳು ತಮ್ಮ 2 ಪಾಸ್‍ಪೋರ್ಟ್ ಅಳತೆ ಭಾವಚಿತ್ರದೊಂದಿಗೆ ಉಚಿತ ಆಡಿಷನ್‍ನಲ್ಲಿ ಪಾಲ್ಗೊಳ್ಳುವಂತೆ ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 9206449277, 7847848784 ಗೆ ಸಂಪರ್ಕಿಸುವಂತೆ ಅವರು ಕೋರಿದರು. ಗೋಷ್ಠಿಯಲ್ಲಿ ಚಾನಲ್ ಪ್ರಮುಖರಾದ ಶಯನ್, ಲೋಹಿತ್ ಇದ್ದರು.