ಮಡಿಕೇರಿ, ಆ. 13: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು ಇವರು ಡಿಪ್ಲೊಮೊ ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ವೃತ್ತಿಗಳು: ಡಿಪ್ಲೊಮೊ ಏರೋನಾಟಿಕಲ್ ಇಂಜಿನಿಯರಿಂಗ್, ಡಿಪ್ಲೊಮೊ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೊಮೊ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೊಮೊ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಅವ್ಯೊನಿಕ್ಸ್ ಇಂಜಿನಿಯರಿಂಗ್, ಡಿಪ್ಲೊಮೊ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮೊ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್/ಇನ್ಫಾರ್‍ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್/ಡಿಪ್ಲೊಮೊ ಇನ್ ಕಮರ್ಷಿಯಲ್ ಪ್ರಾಕ್ಟೀಸ್, ಡಿಪ್ಲೊಮೊ ಇನ್ ಮೆಟಲರ್ಜಿ ಇಂಜಿನಿಯರಿಂಗ್. ಈ ಟ್ರೇಡ್‍ಗಳಲ್ಲಿ ಡಿಪ್ಲೊಮೊ ತೇರ್ಗಡೆ ಹೊಂದಿ ಪ್ರಾವಿಸನಲ್ ಅಂಕಪಟ್ಟಿಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಯು ಭಾರತೀಯನಾಗಿರಬೇಕು. ಅರ್ಜಿ ಸಲ್ಲಿಸಲು ತಾ. 22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ವೆಬ್‍ಸೈಟ್ ಸಂಖ್ಯೆ: hಣಣಠಿ://115.254.50.170/ಣಣi ನ್ನು ನೋಡಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.