ಸುಂಟಿಕೊಪ್ಪ, ಆ. 13 : ಗದೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದ್ದೆಹಳ್ಳ ಸ್ವ ಸಹಾಯ ಸಂಘಗಳ ಒಕ್ಕೂಟ ಹಾಗೂ ಸ್ವಹಾಯ ಸಂಘದ ಸದಸ್ಯರುಗಳು ಸ್ವಚ್ಛ ಗೊಳಿಸಿದರು.
ಗದ್ದೆಹಳ್ಳ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 21 ಸ್ವಸಹಾಯ ಸಂಘÀದ ಸದಸ್ಯರುಗಳು ಸಂಘದ ಒಕ್ಕೂಟ ವ್ಯವಸ್ಥೆಯಲ್ಲಿ ಪಾಲ್ಗೊಂಡು ಗದ್ದೆಹಳ್ಳ ಶಾಲೆಯ ಕಟ್ಟಡ ಆವರಣದಲ್ಲಿ ಸುತ್ತ-ಮುತ್ತಲು ಬೆಳೆದು ನಿಂತಿದ್ದ ಗಿಡ ಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳೊಂದಿಗೆ ಕಾಡು ಗಿಡಗಳನ್ನು ಕಡಿಯಲು ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗ್ರಾ.ಪಂ.ಸದಸ್ಯರುಗಳಾದ ಕೆ.ಇ.ಕರೀಂ, ನಾಗರತ್ನ ಸುರೇಶ್, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಷ್ಮ, ಉಪಾಧ್ಯಕ್ಷ ಮರ್ಕರ ಸಹಕರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯನಿ ಮೀನಾಕ್ಷಿ ಸಹಶಿಕ್ಷಿಯರಾದ ಹೇಮಕುಮಾರಿ ಹಾಗೂಪುಷ್ಪ ಉಪಸ್ಥಿತರಿದ್ದರು. ಗದ್ದೆಹಳ್ಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದ್ದೆಹಳ್ಳ ಸೇವಾ ಪ್ರತಿನಿಧಿಯಾದ ಜ್ಯೋತಿ ರಾಣಿ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕುಶಾಲನಗರ: ನದಿ ಸಂರಕ್ಷಣೆ ಹಾಗೂ ಸ್ವಚ್ಚತೆಗೆ ಮಹಿಳೆಯರು ಹೆಚ್ಚಿನ ಆದ್ಯತೆ ನೀಡುವಂತಾಗಬೇಕೆಂದು ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾದ ಬಿ.ಪಿ.ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾವೇರಿ ಮಹಾ ಆರತಿ ಬಳಗ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಒಕ್ಕೂಟದ ಆಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸೂಚನೆಯಂತೆ ರಾಜ್ಯದಾದ್ಯಂತ ಎಲ್ಲೆಡೆ ದೇವಾಲಯ, ಮಸೀದಿ, ಚರ್ಚ್ ಆವರಣಗಳ ಸ್ವಚ್ಚತಾ ಕಾರ್ಯ ನಡೆಯುತ್ತಿದ್ದು ದೇವಾಲಯದ ಆವರಣ ಮತ್ತು ಕಾವೇರಿ ನದಿ ತಟದ ಸ್ವಚ್ಚತೆಯಲ್ಲಿ ಮಹಿಳೆಯರು ಪಾಲ್ಗೊಂಡರು.
ಧರ್ಮಸ್ಥಳ ಯೋಜನೆಯ ಕುಶಾಲನಗರ ಬಿ ಒಕ್ಕೂಟದ ಎ ವಿಭಾಗದ ಅಧ್ಯಕ್ಷೆ ಭಾನು ಗುಲ್ಜರ್, ಕಾರ್ಯದರ್ಶಿ ಗಿರಿಜಾ, ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ಆಶಾ, ಕೀರ್ತನ, ಸರೋಜ, ಗಂಗಾ, ಜರೀನ, ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾದ ಬಿ.ಪಿ.ಗಣಪತಿ, ಖಜಾಂಚಿ ಕೆ.ಆರ್.ಸುಬ್ರಮಣಿ, ಮಾಜಿ ಅಧ್ಯಕ್ಷರಾದ ಕೆ.ಆರ್.ಶಿವಾನಂದನ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಮತ್ತು ಒಕ್ಕೂಟದ ಕಾರ್ಯಕರ್ತರು ಇದ್ದರು.