ವೀರಾಜಪೇಟೆ, ಆ. 13: ಕಾಂಗ್ರೆಸ್ ಪಕ್ಷದ ಕೊಡಗು ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಮುಕ್ಕಾಟೀರ ಅನಿತಾ ಮಾಚಯ್ಯ (52) ಅವರ ಮೃತ ದೇಹ ನಗ್ನಸ್ಥಿತಿಯಲ್ಲಿ ಮನೆಯ ಹಿಂದಿನ ಕೊನೆಯ ಕೊಠಡಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯ ಸಮಯದಲ್ಲಿ ಪತ್ತೆಯಾಗಿದೆ.ಅನಿತಾ ಮಾಚಯ್ಯ ಎಂದಿನಂತೆ ಬೆಳಿಗ್ಗೆ 6 ಗಂಟೆಗೆ ಏಳುತ್ತಿದ್ದು, ಇಂದು ಬೆಳಿಗ್ಗೆ 8 ಗಂಟೆಯವರೆಗೂ ಎದ್ದಿರಲಿಲ್ಲ. ಮನೆಯ ಮುಂದಿನ ಬಾಗಿಲು ಮುಚ್ಚಿಯೇ ಇದ್ದ ಕಾರಣ ಸಂಶಯಗೊಂಡ ಆಜು ಬಾಜಿನವರು ಅಲ್ಲಿನ ಯುವಕರಿಗೆ ತಿಳಿಸಿದ್ದಾರೆ. ಮನೆಯ ಮುಂದಿನ ಹೆಂಚುಗಳನ್ನು ತೆಗೆದು ಒಳಗೆ ಇಳಿದು ನೋಡಿದಾಗ ಬಚ್ಚಲು ಮನೆಯ ಒತ್ತಾಗಿದ್ದ ಕೊನೆಯ ಕೊಠಡಿಯಲ್ಲಿ ಅನಿತಾ ಮಾಚಯ್ಯ ಅವರ ಮೃತದೇಹ ಪತ್ತೆಯಾಗಿದೆ. ಯುವಕರು ತಕ್ಷಣ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಮನೆಯ ಮುಂದಿನ ಬಾಗಿಲನ್ನು ತೆರದು ಮೃತದೇಹದ ಮಹಜರು ನಡೆಸಿ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದರು.

ಅನಿತಾ ಮಾಚಯ್ಯ ಅವರ ಒತ್ತಾಗಿ ಅವರಿಗೆ ಸೇರಿದ ನಾಲ್ಕು ಬಾಡಿಗೆ ಮನೆಗಳಿದ್ದು ಅಲ್ಲಿನ ಬಾಡಿಗೆದಾರರೊಬ್ಬರಿಗೆ ಬೆಳಿಗ್ಗೆ 6.30ರ ಸಮಯದಲ್ಲಿ ಸಾಕಿದ ನಾಯಿ ಯೊಂದಿಗೆ ಅನಿತಾ ಮಾತನಾಡುತ್ತಿದ್ದು ದನ್ನು ಕೇಳಿಸಿದ್ದು, ನಂತರ ಏನಾಯಿತೆಂಬುದು ತಿಳಿದಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಹತ್ತಿರದ ಸಂಬಂಧಿಯೊಬ್ಬರು ಬಂದು ಆಕೆಯ ಸಾವಿನ ಕುರಿತು ಪೊಲೀಸ ರೊಂದಿಗೆ ಆಶ್ಚರ್ಯ ವ್ಯಕ್ತಪಡಿಸಿ ದರಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ತಿಳಿಸಿದರು.

ಅನಿತಾ ಮಾಚಯ್ಯರ ಸಾವಿನ ಸುದ್ದಿ ಕೇಳುತ್ತಲೇ ಗಾಂಧಿನಗರದ ನಿವಾಸಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಮನೆಯ ಮುಂದೆ ಜಮಾಯಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರು ಮೃತದೇಹವನ್ನು ಪರಿಶೀಲಿಸಿ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಸುಬ್ರಮಣಿ, ಪೊಲೀಸ್ ಸಿಬ್ಬಂದಿಗಳಿಗೆ ಕೂಲಂಕಷವಾಗಿ ಮೃತದೇಹದ ಮಹಜರು ನಡೆಸಿ (ಮೊದಲ ಪುಟದಿಂದ) ವೈದ್ಯಕೀಯ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕಳಿಸುವಂತೆ ಆದೇಶಿಸಿದರು. ಮೃತ ಅನಿತಾ ಮಾಚಯ್ಯ ಅವರ ತಮ್ಮ ಅಪ್ಪಚ್ಚು ದುಬೈನಲ್ಲಿ ಉದ್ಯೋಗದಲ್ಲಿದ್ದು ಆತನಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಪಾಸ್‍ಪೋರ್ಟ್ ದಾಖಲೆ ಅಂಬಾಸೆಡರ್ ಕಚೇರಿಯಲ್ಲಿರುವದರಿಂದ ತಕ್ಷಣ ಹೊರಟು ಬರಲು ಸಾಧ್ಯವಿಲ್ಲ ಎಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ ಅವರು ಅಪ್ಪಚ್ಚು ಅವರೊಂದಿಗೆ ಸಂಪರ್ಕಿಸಿದಾಗ ಮೃತದೇಹವನ್ನು ವೈದ್ಯಕೀಯ ಪರೀಕೆÀ್ಷಗೆ ಗುರಿಪಡಿಸಲು ವಿನಂತಿಸಿದ ಮೇರೆಗೆ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಕೊಡವ ಸಮಾಜದ ರುದ್ರ ಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು,

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ನಗರ ಸಮಿತಿಯ ಜಿ.ಜಿ.ಮೋಹನ್, ನರೇಂದ್ರ ಕಾಮತ್, ಮರ್ವೀನ್ ಲೋಬೋ, ಯುವಕ ಕಾಂಗ್ರೆಸ್ ವೀರಾಜಪೇಟೆ ನಗರದ ಶರೀನ್ ಚಂಗಪ್ಪ, ಸೇವಾದಳದ ಎಂ.ಎಲ್. ಸೈನುದ್ದೀನ್, ಸಿ.ಕೆ.ಪೃಥ್ವಿನಾಥ್, ವೀರಾಜಪೇಟೆ ಮಹಿಳಾ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷೆ ಲಿಲ್ಲಿ ಜೋಸೆಫ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಬಾ ಪೃಥ್ವಿನಾಥ್, ಮಹಿಳಾ ಕಾರ್ಯಕರ್ತೆಯರು ಮೃತ ದೇಹದ ಅಂತಿಮ ದರ್ಶನ ಪಡೆದರು.

ನಿನ್ನೆ ದಿನ ಪಕ್ಷದ ಕೆಲ ಮಹಿಳಾ ಕಾರ್ಯಕರ್ತೆಯರು ಅನಿತಾ ಮಾಚಯ್ಯ ಅವರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿದಾಗ ಧಮ್ಮು ಕಾಯಿಲೆಯಿಂದ ಮನೆಯಲ್ಲಿಯೇ ವಿಶ್ರಾಂತಿಯಲ್ಲಿರುವದಾಗಿ ತಿಳಿಸಿದರೆಂದು ಇಂದು ಬೆಳಿಗ್ಗೆ ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದರು. ನೆರೆಮನೆಯ ನಿವಾಸಿ ಹಾಗೂ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ವೀರಾಜಪೇಟೆ ಸರ್ವಜನಾಂಗ ಸಂಘಟನೆ ಹಾಗೂ ಗಾಂಧಿನಗರದ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಪಿ.ಎ.ಮಂಜುನಾಥ್ ಅನಿತಾ ಅವರು ಸ್ಥಳದಲ್ಲಿದ್ದ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಮೃತದೇಹದ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವದಾಗಿ ಪೊಲೀಸರು ನಿರ್ಧರಿಸಿದರು.