ಮಡಿಕೇರಿ, ಆ. 13: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್ ಸಹಯೋಗದೊಂದಿಗೆ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಭಾಷಾ ಮಾಧ್ಯಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲ್ಪಟ್ಟಿತು. ಸುಮಾರು 16 ಮಂದಿ ಕವಿಗಳು ಕವನ ವಾಚನ ಮಾಡುವದರೊಂದಿಗೆ ಬಹುಭಾಷಾ ಕವಿ ಮನಸ್ಸುಗಳ ಸಂಗಮವಾಯಿತು. ಈ ಪೈಕಿ ಹಲವರು ಇದೇ ಮೊದಲ ಬಾರಿಗೆ ಕವನ ವಾಚನ ಮಾಡಿ ಗಮನ ಸೆಳೆದರು.
ಬಾರಿಯಂಡ ಜೋಯಪ್ಪ, ‘ಶಕ್ತಿ’ ದಿನಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್, ಪೂಜಾರಿರ ಕೃಪಾ ದೇವರಾಜ್, ಮೇಕೇರಿಯ ಈಶ್ವರಿ ಅರೆಭಾಷೆಯಲ್ಲಿ ಕವನ ವಾಚನ ಮಾಡಿದರು. ವಿಜಯವಾಣಿ ವರದಿಗಾರ ಎಂ.ಎ. ಅಜೀಜ್, ಕೆ.ಎಸ್. ಕಾಂಚನ ಕನ್ನಡ ಭಾಷೆ, ಕೊಡಗು ವಾರ್ತೆ ಸಂಪಾದಕ ಚಮ್ಮಟ್ಟಿರ ಪ್ರವೀಣ್, ಮೊಣ್ಣಂಡ ಶೋಭಾ ಸುಬ್ಬಯ್ಯ ಕೊಡವ ಭಾಷೆ, ದಿಗ್ವಿಜಯ ನ್ಯೂಸ್ ಚಾನಲ್‍ನ ಕಿಶೋರ್ ರೈ, ಟಿವಿ9ನ ನವೀನ್ ಸುವರ್ಣ ತುಳು ಭಾಷೆ, ‘ಶಕ್ತಿ' ಉಪಸಂಪಾದಕ ಎಂ.ಇ. ಮಹಮದ್, ಎಂ.ಎ. ಅಬ್ದುಲ್ಲ ಬ್ಯಾರಿ ಭಾಷೆ, ಚಾಲ್ರ್ಸ್ ಡಿಸೋಜ ಕೊಂಕಣಿ ಭಾಷೆಯಲ್ಲು ಕವನ ವಾಚನ ಮಾಡಿ ಗಮನ ಸೆಳೆದರು.
ಫೀಲ್ಡ್‍ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಪ್ರಿಯ, ಅರ್ಪಿತ, ಮೋಕ್ಷ ರೈ, ರಮ್ಯ ಕನ್ನಡ ಭಾಷೆಯಲ್ಲಿ ಕವನ ವಾಚನ ಮಾಡಿ ಗಮನ ಸೆಳೆದರು. ಬಳಿಕ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಕವಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.