ನಾಪೆÇೀಕ್ಲು, ಆ. 13: ನಾಪೆÇೀಕ್ಲು ಚೆಸ್ಕಾಂ ಕಚೇರಿಯಲ್ಲಿ ಸೋಮವಾರ ಮತ್ತು ಗುರುವಾರ ಗ್ರಾಹಕರಿಂದ ವಿದ್ಯುತ್ ಬಿಲ್ಲನ್ನು ಒಂದೇ ಕೌಂಟರ್‍ನಲ್ಲಿ ಸ್ವೀಕರಿಸುವ ಕಾರಣ ಗ್ರಾಹಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಆದ್ದರಿಂದ ಎರಡು ಕೌಂಟರ್‍ನಲ್ಲಿ ಬಿಲ್ ಪಡೆಯಲು ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಕಲಿಯಂಡ ಶಂಭು ಮಾದಪ್ಪ ಆಗ್ರಹಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ನಾಪೆÇೀಕ್ಲು ವ್ಯಾಪ್ತಿಗೆ 27 ಗ್ರಾಮಗಳು ಒಳಪಡುತ್ತದೆ. ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ಲನ್ನು ನಾಪೆÇೀಕ್ಲು ಕೇಂದ್ರದಲ್ಲಿ ಪಾವತಿಸಬೇಕಾಗಿದೆ. ಒಂದೇ ಕೌಂಟರ್ ಆದ ಕಾರಣ ಗ್ರಾಹಕರು ಮಳೆ, ಬಿಸಿಲೆನ್ನದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎರಡು ಕೌಂಟರ್‍ನಲ್ಲಿ ಬಿಲ್ ಸ್ವೀಕರಿಸಲು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.