ಮಡಿಕೇರಿ, ಆ. 15: ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನು ಕೂಡ ಕೆಲಸಗಳು ಪ್ರಗತಿಯಲ್ಲಿವೆ. ಬಿಜೆಪಿಯವರ ಆರೋಪಗಳು ನಿರಾಧಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರಕಾರ 200 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ ಕೇವಲ 40 ಕೋಟಿ ಮಾತ್ರ ಬಂದಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ 3 ವರ್ಷಗಳಲ್ಲಿ 88 ಕೋಟಿ ವೆಚ್ಚದಲ್ಲಿ ಕೆಲಸಗಳಿಗೆ ಟೆಂಡರ್ ಆಗಿದ್ದು, 15 ದಿವಸಗಳಲ್ಲಿ ಕೆಲಸಗಳಾಗಲಿವೆ.ಇದಕ್ಕೂ ಮುನ್ನ 50 ರಿಂದ 60 ಕೋಟಿ ಮೊತ್ತದ ಕೆಲಸಗಳಾಗಿವೆ. ಅವರುಗಳ ಆರೋಪ ನಿರಾಧಾರ ವೆಂದರು. ಏನು ಕೆಲಸವಾಗುತ್ತಿವೆ ಎಂದು ಜನರಿಗೆ ಗೊತ್ತಿದೆ. 5 ವರ್ಷಗಳು

(ಮೊದಲ ಪುಟದಿಂದ) ಪೂರೈಕೆಯಾದ ಬಳಿಕ ಗೊತ್ತಾಗಲಿದೆ. ಈ ಹಿಂದೆ 10 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.

ದಸರಾಗೆ ಅನುದಾನ : ದಸರಾ ಉತ್ಸವಕ್ಕೆ ಸಬಂಧಿಸಿದಂತೆ ಕಳೆದ ವರ್ಷ ನೀಡಿದಷ್ಟು ಅನುದಾನ ಒದಗಿಸ ಲಾಗುವದು. ಹೆಚ್ಚಿಗೆ ಒದಗಿಸಲು ಪ್ರಯತ್ನಿಸಲಾಗುವದು. ಆದರೆ ಅನುದಾನ ಕಲಾವಿದರಿಗೆ ತಲಪಬೇಕಿದೆ. ಯಾವದೇ ಕಾರಣಕ್ಕೂ ಕಲಾವಿದರಿಗೆ ವಂಚನೆಯಾಗ ಬಾರದೆಂದು ಹೇಳಿದರು.

ಎಚ್ಚರಿಕೆ ಗಂಟೆ :ಮಡಿಕೇರಿ ನಗರಸಭೆಯ ಅವ್ಯವಸ್ಥೆ ಬಗ್ಗೆ ಪತ್ರಕರ್ತರು ಸಚಿವರ ಗಮನ ಸೆಳೆದ ಸಂದರ್ಭ ಇದೊಂದು ಆಡಳಿತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಅಧ್ಯಕ್ಷರು ಸದಸ್ಯರನ್ನು ಕೂರಿಸಿಕೊಂಡು ಸರಿಪಡಿಸಬೇಕೆಂದು. ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದ ಬಗ್ಗೆ ಸಚಿವರ ಗಮನ ಸೆಳೆದ ಸಂದರ್ಭ ಈ ಬಗ್ಗೆ ಪರಿಶೀಲನೆ ಮಾಡಲಾಗುವದು. ಗುಂಡಿ ಬಿದ್ದಿರುವ ರಸ್ತೆಗಳನ್ನು ಕೂಡಲೇ ದುರಸ್ತಿಪಡಿ ಸುವಂತೆ ಅಧ್ಯಕ್ಷರಿಗೆ ಸೂಚನೆ ನೀಡಿದರು. ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಇದ್ದರು.