ಗೋಣಿಕೊಪ್ಪಲು, ಆ.15 : ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ನಡೆದ ಸ್ಪಿರಿಟ್ ಆಫ್ ಫ್ರೀಡಂ ರನ್‍ನಲ್ಲಿ 500ಕ್ಕೂ ಸ್ಪರ್ಧಿಗಳು ಪಾಲ್ಗೊಂಡರು. ಪೊನ್ನಂಪೇಟೆಯಿಂದ ಗೋಣಿಕೊಪ್ಪ ದವರೆಗೆ ನಡೆದ ಸ್ಪರ್ಧೆಯಲ್ಲಿ 1-4 ನೇ ತರಗತಿ, ಹೈಯರ್ ಪ್ರೈಮರಿ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಇಲ್ಲಿನ ಬಸ್ ನಿಲ್ದಾಣದಲ್ಲಿ ಗ್ರಾ ಪಂ ಅಧ್ಯಕ್ಷೆ ಮೂಕಳೇರ ಸುಮಿತ್ರ ಉದ್ಘಾಟಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೆಯಂಡ ಪೂಣಚ್ಚ, ಕಾರ್ಯದರ್ಶಿ ಸೋಮೆಯಂಡ ಪ್ರಣಿತಾ, ಖಜಾಂಜಿ ಡಾ. ಅಮ್ಮಂಡ ಚಿಣ್ಣಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.