ಮಡಿಕೇರಿ, ಆ. 15: ಬೆಂಗಳೂರು ಹಾಕಿ ಸಂಸ್ಥೆ ಹಾಗೂ ಅಕಾಡೆಮಿಯ ಅಧಿಕೃತ ತೀರ್ಪುಗಾರರಾಗಿ ಮುಂಡಂಡ ಅನುಪಮ ನೇಮಿಸಲ್ಪ ಪಟ್ಟಿದ್ದಾರೆ.

ಅನುಪಮ ಈ ಹಿಂದೆ ದೇಶದ ಏಕೈಕ ಮಹಿಳಾ ತೀರ್ಪು ಗಾರರಾಗಿ ಸುಮಾರು 85 ಅಂತರ್ರಾಷ್ಟ್ರೀಯ ಹಾಕಿ ಪಂದ್ಯಾಟಗಳಲ್ಲಿ ಭಾಗವಹಿಸಿದ ಖ್ಯಾತಿಗೆ ಒಳಗಾಗಿದ್ದಾರೆ. ಇತ್ತೀಚೆಗೆ ಅವರನ್ನು ಬೆಂಗಳೂರು ಕೊಡವ ಸಮಾಜ ಮತ್ತು ಮೈಕೊ ಕನ್ನಡ ಬಳಗ ಸನ್ಮಾನಿಸಿತ್ತು.