ಗೋಣಿಕೊಪ್ಪಲು ,ಆ. 14: ಸಮಾಜದ ಪ್ರತಿಬಿಂಬ ಮಾಧ್ಯಮ. ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಕೆಲಸ ಪತ್ರಕರ್ತರು ಮಾಡಬೇಕು. ಗ್ರಾಮೀಣ ಭಾಗಗಳ ಸಮಸ್ಯೆಯನ್ನು ಬಿಂಬಿಸಿ ಸುದ್ದಿ ಮಾಡುವದು ಪತ್ರಕರ್ತರ ಧರ್ಮ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.

ಗೋಣಿಕೊಪ್ಪಲು ಕಾವೇರಿ ಕಾಲೇಜು ಆಶ್ರಯದಲ್ಲಿ ಆರಂಭಗೊಂಡಿರುವ ‘ವಾಯ್ಸ್ ಆಫ್ ಕಾವೇರಿ’ ದ್ವೈಮಾಸಿಕ ಕಾಲೇಜು ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾಲೇಜು ವಿದ್ಯಾರ್ಥಿಗಳು ದೈನಿಕವನ್ನು ಓದುವದಲ್ಲದೆ ವರದಿ, ಲೇಖನವನ್ನೂ ಜಿಲ್ಲೆ, ರಾಜ್ಯ ಮಟ್ಟದ ಪತ್ರಿಕೆಗಳಿಗೆ ಕಳುಹಿಸುವಂತಾಗಬೇಕು. ಇದರಿಂದಾಗಿ ವಿದ್ಯಾರ್ಥಿಗಳ ಸಾಮಾಜಿಕ ಪ್ರಜ್ಞೆ, ಕಳಕಳಿ ಹಾಗೂ ವೈಯಕ್ತಿಕವಾಗಿ ಲಾಭವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂಯೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಲು, ಬರವಣಿಗೆ ಬಗ್ಗೆ ಉತ್ತೇಜಿಸಲು ಪತ್ರಿಕೆ ಸದುಪಯೋಗವಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭ ಗೋಣಿಕೊಪ್ಪಲಿನಿಂದ ಹೆಚ್.ಕೆ. ಜಗದೀಶ್ ಸಂಪಾದಕೀಯದಲ್ಲಿ 9ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಕೊಡಗು ಧ್ವನಿ ವಾರಪತ್ರಿಕೆ ಬಳಗದ ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಪತ್ರಿಕೆ ಹಾಗೂ ಅನುಭವದ ಬಗ್ಗೆ ಸಂಪಾದಕ ಹೆಚ್.ಕೆ.ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಪೆಮ್ಮಯ್ಯ, ನಿವೃತ್ತ ಪ್ರಾಂಶುಪಾಲ ಎಂ.ಕೆ.ಮೊಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ಎಚ್.ಎಸ್. ವಸಂತಿ ಪ್ರಾರ್ಥನೆ, ಕೆ.ಕೆ. ಚಿತ್ರಾವತಿ ಸ್ವಾಗತ, ಎಸ್.ಎಂ.ರಜನಿ ಅತಿಥಿ ಪರಿಚಯ, ಪಿ.ಸಿ.ಕೃಷಿಕಾ ನಿರೂಪಣೆ ಹಾಗೂ ಎನ್.ಪಿ.ರೀತಾ ವಂದಿಸಿದರು.

- ಟಿ.ಎಲ್.ಎಸ್. ವಣ್ಣ ಅವರು, ರಾಜ್ಯದ ಸುಮಾರು 2300 ಕಾಲೇಜುಗಳ ಪೈಕಿ ಕಾವೇರಿ ಕಾಲೇಜು 49ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಕಾಲೇಜಿನಿಂದ ಪತ್ರಿಕೆ ಯೊಂದು ಹೊರಬರುವ ಆಸಕ್ತಿ ತನಗಿದ್ದುದು ಅದು ಸಾಕಾರಗೊಂಡಿದೆ ಎಂದರು.

ಕಾವೇರಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಜಿ. ಉತ್ತಪ್ಪ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಗಳಲ್ಲಿಯೂ ನಾಯಕತ್ವ ಗುಣವಿದ್ದು ಪತ್ರಿಕೆ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಲು ಕರೆ ನೀಡಿದರು.

ಕಾವೇರಿ ಕಾಲೇಜು ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ಎ.ಸಿ. ಗಣಪತಿ ಅವರು, ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆ