ಮಡಿಕೇರಿ, ಆ. 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಲಕಾವೇರಿ, ಮಕ್ಕಿ ಶಾಸ್ತಾವು ಪೇರೂರುವಿನಲ್ಲಿ ಸ್ವಚ್ಛ ಭಾರತ ಸ್ವಚ್ಛ ಮಂದಿರ ಕಾರ್ಯಕ್ರಮದಡಿ ಸ್ವಚ್ಛತ ಕಾರ್ಯ ನಡೆಸಲಾಯಿತು.
ಭಾಗಮಂಡಲ ವಲಯದ ವತಿಯಿಂದ ತಲಕಾವೇರಿಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಭಾಗಮಂಡಲ, ತಣ್ಣಿಮಾನಿ ಯವರುಗಳ ಸಹಯೋಗ ದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ದೆವಸ್ಥಾನ ಸಮಿತಿ ಹಾಗೂ ವಲಯ ಮೇಲ್ವಿಚಾರಕ ಚೇತನ್ ಕೆ., ಸೇವಾ ಪ್ರತಿನಿಧಿ ವೆಂಕಟರಮಣ, ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಜರಿದ್ದರು.
ನಾಪೋಕ್ಲು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯಡಿಯಲ್ಲಿ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಮುತ್ತು ರಾಣಿ ಮತ್ತು ಶೈಲಾ, ಸೇವಾ ಪ್ರತಿನಿಧಿಗಳಾದ ದಿವ್ಯ, ದೇವಳದ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು. ಬಲ್ಲಮಾವಟಿಯ ಪೇರೂರು ಇಗ್ಗುತಪ್ಪ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಪೊನ್ನಮ್ಮ ರಾಣಿ, ಸದಸ್ಯರುಗಳು ಪಾಲ್ಗೊಂಡಿದ್ದರು.