*ಗೋಣಿಕೊಪ್ಪಲು, ಆ. 14: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಸದಸ್ಯರಿಗೆ ಗೌರವ ನೀಡುತ್ತಿಲ್ಲ ಮತ್ತು ಕೆಲಸಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪೆÇನ್ನಂಪೇಟೆ ಗ್ರಾ.ಪಂ.ನ 11 ಸದಸ್ಯರು ಗ್ರಾ.ಪಂ. ಸಾಮಾನ್ಯ ಸಭೆಗೆ ಗೈರು ಹಾಜರಗುವ ಮೂಲಕ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.

ಪೆÇನ್ನಂಪೇಟೆ ಗ್ರಾ.ಪಂ. ನ ಸಾಮಾನ್ಯ ಸಭೆಯನ್ನು 11 ಗಂಟೆಗೆ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಕಛೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಾಂಗ್ರೇಸ್ ಬೆಂಬಲಿತ 11 ಸದಸ್ಯರುಗಳು ಗೈರು ಹಾಜರಿನಿಂದ ಕೋರಂ ಇಲ್ಲದೆ ಸಭೆ ರದ್ದಾಗಿ ಮುಂದೂಡಿಲ್ಪಟ್ಟಿತು.

ಪಿ.ಡಿ.ಓ. ಅಬ್ದುಲ್ಲಾ ಅವರು ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಪಿ.ಡಿ.ಓ. ಸ್ಪಂದಿಸುತ್ತಿಲ್ಲ. ಸದಸ್ಯರುಗಳೊಂದಿಗೆ ಉತ್ತಮ್ಮ ಬಾಂಧವ್ಯವನ್ನು ಹೊಂದಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.

ಪಂಚಾಯಿತಿಯಲ್ಲಿ 20 ಸದಸ್ಯರುಗಳನ್ನೊಳಗೊಂಡ ಆಡಳಿತ ಹೊಂದಿದೆ. ಇದರಲ್ಲಿ 15 ಸದಸ್ಯರು ಕಾಂಗ್ರೆಸ್ ಬೆಂಬಲಿತ ಹಾಗೂ 5 ಸದಸ್ಯರು ಬಿ.ಜೆ.ಪಿ. ಬೆಂಬಲಿತರಾಗಿದ್ದಾರೆ. ಇಂದು ಸಭೆಗೆ ಕಾಂಗ್ರೆಸ್‍ನ 11 ಸದಸ್ಯರು ಗೈರು ಹಾಜರಾಗುವ ಮೂಲಕ ಸಭೆ ಬಹಿಷ್ಕರಿಸಿದರು.

ಪಿ.ಡಿ.ಓ. ಅಬ್ದುಲ್ಲಾ ಪಾಲಿಬೆಟ್ಟ ಹಾಗೂ ಪೆÇನ್ನಂಪೇಟೆ ಪಂಚಾಯಿತಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಆದರೆ 5 ಜುಲೈ 2017ರಂದು ಪಂಚಾಯತ್ ರಾಜ್ ಇಲಾಖೆ ಪೆÇನ್ನಂಪೇಟೆ ಪಂಚಾಯಿತಿ ಕಾರ್ಯ ನಿರ್ವಹಣೆಯಿಂದ ವರ್ಗಾವಣೆಗೊಳಿಸಿದ್ದಾರೆ. ಆದರೂ ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಅವರಿಂದ ಮತ್ತೆ ಪೆÇನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸಲು ಆದೇಶ ಪಡೆದುಕೊಂಡಿದ್ದಾರೆ. ಈ ಬಗ್ಗೆ ಜಿ.ಪಂ. ಸಭೆಯಲ್ಲಿ ಜಿ.ಪಂ ಅಧ್ಯಕ್ಷರು ಸಿ.ಓ. ಅವರಿಗೆ ನೋಟಿಸು ನೀಡಿ ಆದೇಶ ರದ್ದುಪಡಿಸುವಂತೆ ಸೂಚಿಸಿದ್ದಾರೆ. ಆದರೂ ಪಿ.ಡಿ.ಓ. ಅವರು ಪೆÇನ್ನಂಪೇಟೆ ಪಂಚಾಯಿತಿಯ ಅಧಿಕಾರದ ದಾಹಕ್ಕೆ ಬಿದ್ದಿದ್ದಾರೆ.

ಪಿ.ಡಿ.ಓ. ಅಬ್ದುಲ್ಲಾ ಅವರನ್ನು ತಕ್ಷಣ ಪಂಚಾಯಿತಿ ವರ್ಗಾವಣೆ ಗೊಳಿಸದಿದ್ದರೆ ಮುಂದಿನ ಎಲ್ಲಾ ಸಭೆಗಳನ್ನು ಬಹಿಷ್ಕರಿಸುವದಾಗಿ ಸದಸ್ಯರುಗಳಾದ ಚಂದ್ರಸಿಂಗ್, ಸುನೀಲ್, ಹರೀಶ್, ರಾಜು, ಮಂಜು, ರಶಿಕಾ, ಸುಬೈದಾ, ರೂಪ, ಯಶೋಧ, ಉಪಾಧ್ಯಕ್ಷೆ ಮಂಜುಳಾ ಮತ್ತು ಸುಮತಿ ತಿಳಿಸಿದ್ದಾರೆ.