ವೀರಾಜಪೇಟೆ, ಆ. 15: ಕಾನೂರು ಗ್ರಾಮದ ನಿವಾಸಿ ಎಸ್.ಎಂ. ಧನಂಜಯ ಅವರ ಜಾಗದಲ್ಲಿ ಅಕ್ರಮವಾಗಿ ಸಾಗಾಟ ಮಾಡಲು ಇಟ್ಟಿದ್ದ ಹೆಬ್ಬಲಸು ಮರದ ನಾಟಾಗಳನ್ನು ತುಂಬಿಸಿಕೊಂಡಿದ್ದ ಲಾರಿ (ಕೆ.ಎ. 12 ಬಿ. 4874) ಹಾಗೂ ಧನಂಜಯ ಅವರ ಮನೆಯ ಹಿಂಭಾಗದಲ್ಲಿ ದಾಸ್ತಾನು ಇಟ್ಟಿದ್ದ ಬೀಟಿ ಹಾಗೂ ಹೆಬ್ಬಲಸು ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾರಿ ಸಹಿತ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ನಾಟಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯ ನೇತೃತ್ವವನ್ನು ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ಅವರ ನೇತೃತ್ವದಲ್ಲಿ ನಡೆಸಿದ್ದು, ಪ್ರಬಾರ ವಲಯ ಅರಣ್ಯಾಧಿಕಾರಿ ನಾರಾಯಣ ಮೂಲ್ಯ, ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಕೆ.ಐ. ಹಾಗೂ ಚಾಲಕರಾದ ಪ್ರಕಾಶ್, ಪ್ರವೀಣ್, ತಿತಿಮತಿ ಎಸಿಎಫ್ ಶ್ರೀಪತಿ, ಪೊನ್ನಂಪೇಟೆ ಆರ್‍ಎಫ್‍ಓ ಉತ್ತಯ್ಯ, ಡಿಆರ್‍ಎಫ್‍ಓ ರಮೇಶ್, ಆರ್‍ಆರ್‍ಟಿ ಸಿಬ್ಬಂದಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ವೀರಾಜಪೇಟೆ ಡಿ.ಎಫ್.ಓ. ಮರಿಯ ಕ್ರಿಸ್ಟಿರಾಜ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.