ಮಡಿಕೇರಿ, ಆ. 16: ಇಲ್ಲಿನ ಕರವಲೆ ಬಾಡಗ ಗ್ರಾಮದ ಶ್ರೀ ಕರವಲೆ ಮಹಿಷಮರ್ದಿನಿ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. 19ರಿಂದ 24ರವರೆಗೆ ನಡೆಯಲಿದೆ.

ವೇದಮೂರ್ತಿ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ರವೀಶ ತಂತ್ರಿ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ತಾ. 19ರಂದು ಸಂಜೆ 6 ಗಂಟೆಯಿಂದ ದೇವತಾ ಪ್ರಾರ್ಥನೆಯೊಂದಿಗೆ ಆಚಾರ್ಯವರಣ, ಪುಣ್ಯಾಹ ವಾಚನ, ಪ್ರಸಾದ ಶುಧಿ, ಅಂಕುರಾರೋಪಣ, ರಾಕ್ಷೋಘಹೋಮ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹಂತ.

ತಾ. 20ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುಧಿ, ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ, ಸಂಜೆ 7 ಗಂಟೆಯಿಂದ ಹೋಮ ಕಲಶಾಭಿಷೇಕ, ಅಂಕುರಪೂಜೆ, ಮಹಾಪೂಜೆ ನಡೆಯಲಿದೆ.

ತಾ. 21ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಶಾಂತಿ ಹೋಮಗಳು, ದಹನ ಪ್ರಾಯಶ್ಚಿತ್ತ, ತ್ರಿಕಾಲ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ, ಸಂಜೆ 7 ಗಂಟೆಯಿಂದ ಹೋಮ, ಕಲಶಾಭಿಷೇಕ, ಅನುಜ್ಞಾ ಕಲಶಪೂಜೆ, ಮಹಾಪೂಜೆ ನಡೆಯಲಿದೆ.

ತಾ. 22ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ತ್ರಿಕಾಲ ಪೂಜೆ, ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಯಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬ ಶುದ್ಧಿಕಲಶಪೂಜೆ, ಅಂಕುರಪೂಜೆ, ಮಹಾಪೂಜೆ ನಡೆಯಲಿದೆ.

ತಾ. 23ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಅಧಿವಾಸ ಹೋಮದ ಅಗ್ನಿ ಜನನ, ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಸಯ್ಯೋನ್ನಯನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 7 ಗಂಟೆಯಿಂದ ಧ್ಯಾನಾಧಿವಾಸ, ಅಧಿವಾಸ ಹೋಮ, ಶಿರಸತ್ವಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹ ವಾಚನ, ಪ್ರಸಾದ ಶುಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಂತ, ಬ್ರಹ್ಮಕಲಶ ಮಹಾಪೂಜೆ ನೆರವೇರಲಿದೆ.

ತಾ. 24ರಂದು ಬೆಳಿಗ್ಗೆ 5 ಗಂಟೆಯಿಂದ 108 ತೆಂಗಿನಕಾಯಿ ಹೋಮ, ಪ್ರತಿಷ್ಠಾಪಾಣಿ, 8.03ರಿಂದ 9.57 ಕನ್ಯಾ ಲಗ್ನಾ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಲಿದೆ.

ಸಂಜೆ 6 ಗಂಟೆಯಿಂದ ಶ್ರೀ ದೇವರ ಉತ್ಸವ ಬಲಿ ನೆರವೇರಲಿದೆ.